Begin typing your search above and press return to search.
    Others

    ಯುಪಿಯಲ್ಲಿ ಜೆಸಿಬಿ ಚಾಲಕನೊಬ್ಬ ಟೋಲ್ ಪ್ಲಾಜಾವನ್ನು ಧ್ವಂಸಗೊಳಿಸಿದ ವೀಡಿಯೋವನ್ನು ಕೋಮು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ

    IDTU - Karnataka
    14 Jun 2024 8:20 AM GMT
    ಯುಪಿಯಲ್ಲಿ ಜೆಸಿಬಿ ಚಾಲಕನೊಬ್ಬ ಟೋಲ್ ಪ್ಲಾಜಾವನ್ನು ಧ್ವಂಸಗೊಳಿಸಿದ ವೀಡಿಯೋವನ್ನು ಕೋಮು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ
    x

    ಸಾರಾಂಶ:

    ದೆಹಲಿ-ಲಖನೌ ಹೆದ್ದಾರಿಯ ಹಾಪುರ್‌ನಲ್ಲಿ ಜೆಸಿಬಿ ಚಾಲಕನೊಬ್ಬ ಟೋಲ್ ಪ್ಲಾಜಾವನ್ನು ಧ್ವಂಸಗೊಳಿಸಿದ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಅವನು ಸಾಜಿದ್ ಅಲಿ ಎಂಬ ಮುಸ್ಲಿಂ ಯುವಕ ಎಂದು ಹೇಳಿಕೊಂಡಿದ್ದಾರೆ. ಆದರೆ, ಜೆಸಿಬಿ ಚಾಲಕನನ್ನು ಧೀರಜ್ ಕುಮಾರ್ ಎಂದು ಅಧಿಕಾರಿಗಳು ಗುರುತಿಸಿದ್ದು, ಈ ಘಟನೆಯನ್ನು ಕೋಮುವಾದಿ ಕೋನದೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.

    ಹೇಳಿಕೆ:

    ಉತ್ತರ ಪ್ರದೇಶದಲ್ಲಿ ಮುಸ್ಲಿಂ ಯುವಕನೊಬ್ಬ ಟೋಲ್ ಪ್ಲಾಜಾವನ್ನು ಧ್ವಂಸಗೊಳಿಸುತ್ತಿರುವುದನ್ನು ತೋರಿಸುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಈ ಪೋಷ್ಟ್ ಗಳು ಜೆಸಿಬಿ ಚಾಲಕನನ್ನು ಮೊಹಮ್ಮದ್ ಸಾಜಿದ್ ಅಲಿ ಎಂದು ಗುರುತಿಸಿವೆ. ಕೆಲವು ಬಳಕೆದಾರರು ಇದಕ್ಕೆ ರಾಜಕೀಯ ಕೋನವನ್ನೂ ನೀಡಿದ್ದಾರೆ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ನಡೆಸಿದ ಉತ್ತಮ ಪ್ರದರ್ಶನದ ನಂತರ ಈ ಘಟನೆ ಸಂಭವಿಸಿದೆ ಎಂದು ಗಮನಿಸಿದರು.

    ಈ ಪೋಷ್ಟ್ ಗಳಲ್ಲಿ ಒಂದರ ಶೀರ್ಷಿಕೆ ಹೀಗಿದೆ: “ಬುಲ್ಡೋಜರ್ ಚಾಲಕನಾದ ಮುಸ್ಲಿಂ ಯುವಕ ಮೊಹಮ್ಮದ್ ಸಾಜಿದ್ ಅಲಿ ಇಂದು ಬೆಳಿಗ್ಗೆ ಉತ್ತರ ಪ್ರದೇಶದ ಹಾಪುರ್‌ನಲ್ಲಿರುವ ದೆಹಲಿ-ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು ಕೇಳಿದಾಗ ಟೋಲ್ ಬೂತ್ ಅನ್ನು ನಾಶಪಡಿಸಿದನು. ಯುಪಿ ಪೊಲೀಸರು ಸಾಜಿದ್‌ನನ್ನು ಬಂಧಿಸಿ ಚಿಕಿತ್ಸೆ ನೀಡಿದ್ದಾರೆ (ಅನುವಾದಿಸಲಾಗಿದೆ)." ಬಂಧನದ ನಂತರ ಇಬ್ಬರು ಪೊಲೀಸ್ ಸಿಬ್ಬಂದಿ ಆರೋಪಿಗಳು ನಡೆಯಲು ಸಹಾಯ ಮಾಡುವ ಮತ್ತೊಂದು ವೀಡಿಯೋವನ್ನು ಈ ಪೋಷ್ಟ್ ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

    ವೈರಲ್ ವೀಡಿಯೋವನ್ನು ಹೊಂದಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಹಲವಾರು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

    ಪುರಾವೆ:

    ಉತ್ತರ ಪ್ರದೇಶದಲ್ಲಿ ಟೋಲ್ ಪ್ಲಾಜಾವನ್ನು ಜೆಸಿಬಿ ಚಾಲಕ ಧ್ವಂಸಗೊಳಿಸಿದ ಘಟನೆಯ ಕುರಿತು ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಈ ಬಗ್ಗೆ ಹಲವಾರು ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ. ಜೂನ್ ೧೧, ೨೦೨೪ ರಂದು ದಿ ಫ್ರೀ ಪ್ರೆಸ್ ಜರ್ನಲ್‌ ನ ಅಂತಹ ಒಂದು ವರದಿಯು "ಹಾಪುರ್‌ನ ಛಜರ್ಸಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ಸಂಭವಿಸಿದ್ದು, ಬುಲ್ಡೋಜರ್‌ನ ಚಾಲಕ ಟೋಲ್ ಉದ್ಯೋಗಿಯ ಮುಂದೆಯೇ ಎರಡು ಬೂತ್‌ಗಳನ್ನು ನಾಶಪಡಿಸಿದನು (ಅನುವಾದಿಸಲಾಗಿದೆ)," ಎಂದು ಹೇಳಿಕೊಂಡಿದೆ. ಈ ವರದಿಯು ಹಾಪುರ್ ಪೋಲೀಸರ ಎಕ್ಸ್ ಪೋಷ್ಟ್ ಅನ್ನು ಕೂಡ ಒಳಗೊಂಡಿತ್ತು. ಈ ಎಕ್ಸ್ ಪೋಷ್ಟ್ ಘಟನೆಯನ್ನು ದೃಢೀಕರಿಸುವ ಹಾಪುರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಶರ್ಮಾ ಅವರ ವೀಡಿಯೋ ಸಂದೇಶವನ್ನು ಒಳಗೊಂಡಿದೆ.

    ಜೂನ್ ೧೧, ೨೦೨೪ರ ದಿ ಫ್ರೀ ಪ್ರೆಸ್ ಜರ್ನಲ್ ಲೇಖನದ ಸ್ಕ್ರೀನ್‌ಶಾಟ್.


    ಘಟನೆಯಲ್ಲಿ ಭಾಗಿಯಾಗಿರುವ ಜೆಸಿಬಿ ಚಾಲಕನ ಬಂಧನವನ್ನು ದೃಢೀಕರಿಸುವ ಹಾಪುರ್ ಪೋಲೀಸ್ ಹಂಚಿಕೊಂಡ ಇನ್ನಷ್ಟು ಕೆಲವು ಎಕ್ಸ್ ಪೋಷ್ಟ್ ಗಳನ್ನು ನಾವು ನೋಡಿದ್ದೇವೆ. ಇದಲ್ಲದೆ ಹಾಪುರದ ಪೊಲೀಸ್ ಅಧೀಕ್ಷಕರಾದ ಅಭಿಷೇಕ್ ವರ್ಮಾ ಐಪಿಎಸ್, ಅವರ ಎಕ್ಸ್ ಪೋಷ್ಟ್ ಅನ್ನು ನಾವು ನೋಡಿದ್ದೇವೆ. ಅದರಲ್ಲಿ ಅವರು ಜೆಸಿಬಿ ಚಾಲಕನ ಹೆಸರು ಧೀರಜ್ ಎಂದು ಗಮನಿಸಿದರು ಮತ್ತು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಜೂನ್ ೧೨, ೨೦೨೪ ರಂದು ಹಾಪುರ್ ಎಸ್ಪಿ ಅಭಿಷೇಕ್ ವರ್ಮಾ ಐಪಿಎಸ್ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.

    ಅದಲ್ಲದೆ , ಟೈಮ್ಸ್ ಆಫ್ ಇಂಡಿಯಾದ ಜೂನ್ ೧೧, ೨೦೨೪ರ ಮತ್ತೊಂದು ಎಕ್ಸ್ ಪೋಷ್ಟ್ ಅನ್ನು ನಾವು ನೋಡಿದ್ದೇವೆ. ಈ ಪೋಷ್ಟ್ ಜೆಸಿಬಿ ಚಾಲಕನ ಹೆಸರು ವಿದ್ಯಾರಾಮ್ ಅವರ ಮಗ ಧೀರಜ್ ಮತ್ತು ಅವರು ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯವರು ಎಂದು ಅಭಿಷೇಕ್ ವರ್ಮಾ ಐಪಿಎಸ್ ಅವರು ಹೇಳುವ ವೀಡಿಯೋವನ್ನು ಸಹ ಒಳಗೊಂಡಿದೆ. ಈ ವ್ಯಕ್ತಿ ಕೂಲಿ ಕಾರ್ಮಿಕನಾಗಿದ್ದು, ನಿಜವಾದ ಜೆಸಿಬಿ ಡ್ರೈವರ್ ಅಲ್ಲ ಎಂದು ಎಸ್‌ಪಿಯವರ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಆರೋಪಿ ಪಾನಮತ್ತನಾಗಿದ್ದ, ಕುಡಿದ ಅಮಲಿನಲ್ಲಿ ಜೆಸಿಬಿಯನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಕೂಡ ಅವರು ಧೃಡೀಕರಣ ನೀಡಿದ್ದಾರೆ.

    ಜೂನ್ ೧೧, ೨೦೨೪ ರ ಟೈಮ್ಸ್ ಆಫ್ ಇಂಡಿಯಾದ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಇದು ಧೀರಜ್ ಎಂಬಾತ ಕುಡಿದ ಅಮಲಿನಲ್ಲಿ ಜೆಸಿಬಿ ಊದಿಸಿದ್ದಾನೆ, ಮತ್ತು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಧೃಡಪಡಿಸುತ್ತದೆ.

    ತೀರ್ಪು:

    ಉತ್ತರ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಜೆಸಿಬಿ ಬಳಸಿ ಟೋಲ್ ಪ್ಲಾಜಾವನ್ನು ಧ್ವಂಸಗೊಳಿಸಿದ್ದಾನೆ ಎಂಬ ವೈರಲ್ ವೀಡಿಯೋ ತಪ್ಪಾಗಿದೆ. ಬಂಧನಕ್ಕೊಳಗಾಗಿ ರಿಮಾಂಡ್ ಗೆ ಕಳುಹಿಸಲಾಗಿರುವ ಜೆಸಿಬಿ ಓಡಿಸಿದ ವ್ಯಕ್ತಿ ಮುಸ್ಲಿಂ ಸಮುದಾಯದವನಲ್ಲ. ಟೋಲ್ ಪ್ಲಾಜಾವನ್ನು ಕೆಡವಲು ಕುಡುಕ ಕಾರ್ಮಿಕನೊಬ್ಬ ಜೆಸಿಬಿ ಬಳಸಿದ ಈ ಘಟನೆಯನ್ನು ಕೋಮು ನಿರೂಪಣೆಯನ್ನು ನೀಡುವ ಮೂಲಕ ತಪ್ಪಾಗಿ ಹಂಚಿಕೊಳ್ಳಲಾಗಿದೆ.


    Claim Review :   Video of a JCB driver destroying a toll plaza in UP falsely shared with a communal angle
    Claimed By :  X user
    Fact Check :  False
    IDTU - Karnataka

    IDTU - Karnataka