Begin typing your search above and press return to search.
    Others

    ಆಂಧ್ರಪ್ರದೇಶದಲ್ಲಿ ನಡೆದ ಕ್ರೂರ ಕೃತ್ಯವೊಂದರ ವೀಡಿಯೋವನ್ನು ಕರ್ನಾಟಕದಲ್ಲಿ ನಡೆದ ಘಟನೆಯೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

    IDTU - Karnataka
    25 July 2024 3:24 PM GMT
    ಆಂಧ್ರಪ್ರದೇಶದಲ್ಲಿ ನಡೆದ ಕ್ರೂರ ಕೃತ್ಯವೊಂದರ ವೀಡಿಯೋವನ್ನು ಕರ್ನಾಟಕದಲ್ಲಿ ನಡೆದ ಘಟನೆಯೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
    x

    ಪ್ರಚೋದಕ ಎಚ್ಚರಿಕೆ: ಈ ಫ್ಯಾಕ್ಟ್-ಚೆಕ್ ಕೆಲವು ಅಸಮಾಧಾನಗೊಳಿಸುವ ದೃಶ್ಯಗಳು ಮತ್ತು ಅಂತಹ ದೃಶ್ಯಗಳತ್ತ ಕರೆದೊಯ್ಯುವ ಲಿಂಕ್ ಗಳನ್ನು ಒಳಗೊಂಡಿದ್ದು, ಓದುಗರ ವಿವೇಚನೆಯನ್ನು ಕೋರುತ್ತೇವೆ.


    ಸಾರಾಂಶ:

    ಸಾಮಾಜಿಕ ಮಾಧ್ಯಮ ಬಳಕೆದಾರರು ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಂದಿರುವ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಕರ್ನಾಟಕದಲ್ಲಿ ಎಂದು ಇಂತಹ ಪೋಷ್ಟ್ ಗಳ ಶೀರ್ಷಿಕೆ ಸೂಚಿಸುತ್ತದೆ. ಆದರೆ, ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಓರ್ವ ಆಪಾದಿತ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತನನ್ನು ಸಾರ್ವಜನಿಕವಾಗಿ ಹತ್ಯೆ ಮಾಡಲು ಯತ್ನಿಸುವುದನ್ನು ವೀಡಿಯೋ ತೋರಿಸುತ್ತದೆ. ಹಾಗಾಗಿ ಈ ವೀಡಿಯೋ ಕರ್ನಾಟಕದಲ್ಲಿ ನಡೆದ ಘಟನೆಯದ್ದು ಎಂಬ ಆರೋಪಗಳು ತಪ್ಪು.

    ಹೇಳಿಕೆ:

    ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಒಬ್ಬ ವ್ಯಕ್ತಿಯನ್ನು ರಸ್ತೆಯ ಮಧ್ಯದಲ್ಲಿ ಮಚ್ಚಿನಿಂದ ಇರಿದು ಕೊಂದಿರುವ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಕರ್ನಾಟಕದಲ್ಲಿ ಎಂದು ವೀಡಿಯೋದ ಶೀರ್ಷಿಕೆ ಹೇಳಿಕೊಂಡಿದ್ದು, ಬಳಕೆದಾರರು ಜುಲೈ ೧೮, ೨೦೨೪ ರಂದು ಈ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ. ಹಿಂದಿಯಲ್ಲಿರುವ ಇದರ ಶೀರ್ಷಿಕೆ ಹೀಗೆ ಹೇಳಿಕೊಂಡಿದೆ, "ಇದು ಹೃದಯ ವಿದ್ರಾವಕ ವೀಡಿಯೋ. ಕರ್ನಾಟಕದಲ್ಲಿ ವ್ಯಕ್ತಿಯೊಬ್ಬರು ಚೌಕದ ಮಧ್ಯದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಜೀವಂತವಾಗಿ ಇರಿದುಹಾಕಿದ್ದರೆ (ಅನುವಾದಿಸಲಾಗಿದೆ)."

    ಜುಲೈ ೧೮, ೨೦೨೪ ರಂದು ವೀಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಪುರಾವೆ:

    ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿ ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಅದು ನಮ್ಮನ್ನು ಜುಲೈ ೧೮, ೨೦೨೪ ರ ಒಂದು ಎಕ್ಸ್ ಪೋಷ್ಟ್‌ ನತ್ತ ಕರೆದೊಯ್ಯಿತು. ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಕ್ರೂರ ಘಟನೆಯೊಂದು ಸಂಭವಿಸಿದೆ ಎಂದು ಸೂಚಿಸುವ ಶೀರ್ಷಿಕೆಯೊಂದಿಗೆ ಈ ಪೋಷ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಶೇಖ್ ಜಿಲಾನಿ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ, ಶೇಖ್ ರಶೀದ್ ಎಂಬಾತನನ್ನು ಮಚ್ಚಿನಿಂದ ಕೊಚ್ಚಿ ಹಾಕಿದ್ದಾನೆ ಎಂದು ಕೂಡ ಇಲ್ಲಿ ಹೇಳಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ಅಧಿಕಾರಿಯವರು ಈ ಘಟನೆಯ ಹಿಂದೆ ಯಾವುದೇ ರಾಜಕೀಯ ಒಳಗೊಂಡಿಲ್ಲ ಎಂದು ಹೇಳಿಕೊಳ್ಳುವ ವೀಡಿಯೋವನ್ನು ಕೂಡ ಈ ಪೋಷ್ಟ್ ನೊಂದಿಗೆ ಹಂಚಿಕೊಳ್ಳಲಾಗಿದೆ.

    ಈ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ ಎಂದು ಸೂಚಿಸಿ ಜುಲೈ ೧೮, ೨೦೨೪ ರಂದು ಎಕ್ಸ್ ನಲ್ಲಿ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಈ ಪೋಷ್ಟ್ ನಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು "ವಿನುಕೊಂಡ," "ಪಲ್ನಾಡು," "ಕೊಲೆ" ಮತ್ತು "ಶೇಖ್ ರಶೀದ್" ಮೊದಲಾದ ಕೀವರ್ಡ್‌ಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಜುಲೈ ೧೮, ೨೦೨೪ ರ ಟೈಮ್ಸ್ ಆಫ್ ಇಂಡಿಯಾ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ಯಿತು.

    ಜುಲೈ ೧೮, ೨೦೨೪ ರ ಟೈಮ್ಸ್ ಆಫ್ ಇಂಡಿಯಾ ಸುದ್ದಿ ವರದಿಯ ಸ್ಕ್ರೀನ್‌ಶಾಟ್.


    ಈ ವರದಿಯ ಪ್ರಕಾರ, ಜುಲೈ ೧೭, ೨೦೨೪ ರಂದು ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜನನಿಬಿಡ ರಸ್ತೆಯ ಮಧ್ಯದಲ್ಲಿ ಟಿಡಿಪಿ ಕಾರ್ಯಕರ್ತರೊಬ್ಬರು ವೈಎಸ್‌ಆರ್‌ಸಿಪಿ ಪಕ್ಷದ ಸದಸ್ಯರನ್ನು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾರೆ. ಪೊಲೀಸ್ ಮುಖ್ಯಸ್ಥರು ವಿನುಕೊಂಡದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರು ಮತ್ತು ಸಂಭವನೀಯ ಗುಂಪು ಘರ್ಷಣೆಗಳನ್ನು ನಿರೀಕ್ಷಿಸಿ ನಿಷೇಧಾಜ್ಞೆಗಳನ್ನು ಜಾರಿಗೊಳಿಸಿದರು ಎಂದು ಕೂಡ ವರದಿಯು ಹೇಳಿಕೊಂಡಿದೆ.

    ಇತರ ಸುದ್ದಿ ಮಾಧ್ಯಮಗಳಾದ ಡೆಕ್ಕನ್ ಹೆರಾಲ್ಡ್ ಮತ್ತು ಇಂಡಿಯಾ ಟುಡೇ ಜುಲೈ ೧೮, ೨೦೨೪ ರಂದು ಈ ಘಟನೆಯನ್ನು ವರದಿ ಮಾಡಿವೆ. ವೈರಲ್ ವೀಡಿಯೋ ಆಂಧ್ರಪ್ರದೇಶದ ಘಟನೆಯನ್ನು ತೋರಿಸುತ್ತದೆ ಎಂದು ಈ ವರದಿಗಳು ಸ್ಪಷ್ಟಪಡಿಸುತ್ತವೆ.

    ತೀರ್ಪು:

    ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ವಿನುಕೊಂಡ ಪಟ್ಟಣದ ಜನನಿಬಿಡ ಬೀದಿಯಲ್ಲಿ ಆಪಾದಿತ ಟಿಡಿಪಿ ಕಾರ್ಯಕರ್ತ ವೈಎಸ್‌ಆರ್‌ಸಿಪಿ ಕಾರ್ಯಕರ್ತನನ್ನು ಮಚ್ಚಿನಿಂದ ಕೊಂದ ಘಟನೆಯನ್ನು ಇದು ತೋರಿಸುತ್ತದೆ ಎಂದು ವೀಡಿಯೋದ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ, ಘಟನೆಯು ಕರ್ನಾಟಕದಲ್ಲಿ ಸಂಭವಿಸಿದೆ ಎಂಬ ಆರೋಪಗಳು ತಪ್ಪು.


    Claim Review :   Video of alleged TDP worker hacking a YSRCP worker to death in public view in Andhra Pradesh shared as Karnataka
    Claimed By :  X user
    Fact Check :  False
    TagsMurder
    IDTU - Karnataka

    IDTU - Karnataka