೨೦೨೨ ರಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಶವದ ಹಳೆಯ ವೀಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ
ಪ್ರಚೋದಕ ಎಚ್ಚರಿಕೆ: ಈ ಫ್ಯಾಕ್ಟ್-ಚೆಕ್ ಕೆಲವು ಅಸಮಾಧಾನಗೊಳಿಸುವ ದೃಶ್ಯಗಳು ಮತ್ತು ಅಂತಹ ದೃಶ್ಯಗಳತ್ತ ಕರೆದೊಯ್ಯುವ ಲಿಂಕ್ ಗಳನ್ನು ಒಳಗೊಂಡಿದ್ದು, ಓದುಗರ ವಿವೇಚನೆಯನ್ನು ಕೋರುತ್ತೇವೆ.
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವವನ್ನು ತೋರಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಪುರುಷರನ್ನು ಗುರಿಯಾಗಿಸುವ ಕೋಮುವಾದ ಪಿತೂರಿ ಸಿದ್ಧಾಂತವಾದ "ಲವ್ ಜಿಹಾದ್" ಪ್ರಕರಣವನ್ನು ವೀಡಿಯೋ ತೋರಿಸುತ್ತದೆ ಎಂದು ವಿಡಿಯೋದೊಂದಿಗೆ ಇತ್ತೀಚೆಗೆ ಹಂಚಿಕೊಂಡಿರುವ ಶೀರ್ಷಿಕೆಗಳು ಸೂಚಿಸುತ್ತವೆ. ಆದರೆ, ೨೦೨೨ ರಲ್ಲಿ ಉತ್ತರಾಖಂಡ್‌ನ ಪಿರಾನ್ ಕಲಿಯಾರ್ ನಲ್ಲಿ ನಡೆದ ಘಟನೆಯನ್ನು ವೀಡಿಯೋ ತೋರಿಸುತ್ತದೆ, ಅಲ್ಲಿ ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಧಾರ್ಮಿಕ ಸಮುದಾಯಕ್ಕೆ ಸೇರಿದವರು. ಆದ್ದರಿಂದ, ಈ ಕೋಮುವಾದಿ ಹೇಳಿಕೆ ತಪ್ಪು.
ಹೇಳಿಕೆ:
ಸಾಮಾಜಿಕ ಮಾಧ್ಯಮ ಬಳಕೆದಾರರು ಇತ್ತೀಚಿನ "ಲವ್ ಜಿಹಾದ್" ಘಟನೆಯನ್ನು ತೋರಿಸುತ್ತದೆ ಎಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಲವ್ ಜಿಹಾದ್ ಒಂದು ಪಿತೂರಿ ಸಿದ್ಧಾಂತವಾಗಿದ್ದು, ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಜುಲೈ ೨೮, ೨೦೨೪ ರಂದು ವೀಡಿಯೋವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ - "ನನ್ನ ಅಬ್ದುಲ್ ಆ ರೀತಿ ಅಲ್ಲ.. ಮತ್ತೊಂದು ಅಬ್ದುಲ್, ಮತ್ತೊಂದು ಪ್ರಕರಣ.." (ಅನುವಾದಿಸಲಾಗಿದೆ). ಸಾಮಾಜಿಕ ಮಾಧ್ಯಮ ಬಳಕೆದಾರರು ಸಾಮಾನ್ಯವಾಗಿ ಮುಸ್ಲಿಂ ಪುರುಷರು ಮತ್ತು ಹಿಂದೂ ಮಹಿಳೆಯರ ನಡುವಿನ ಅಂತರಧರ್ಮದ ಸಂಬಂಧಗಳು ಮತ್ತು ವಿವಾಹಗಳನ್ನು ಗುರಿಯಾಗಿಸಲು "ನನ್ನ ಅಬ್ದುಲ್ ಆ ರೀತಿ ಅಲ್ಲ" ಎಂಬಂತಹ (ಇಂಗ್ಲಿಷ್) ಹೇಳಿಕೆಗಳನ್ನು ಬಳಸುತ್ತಾರೆ. ಎಕ್ಸ್ ನಲ್ಲಿನ ಇತರ ಬಳಕೆದಾರರು ಇತ್ತೀಚೆಗೆ ಇದೇ ರೀತಿಯ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಜುಲೈ ೨೮, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಅದು ೨೦೨೨ ರಲ್ಲಿ ತಪ್ಪು ಕೋಮು ನಿರೂಪಣೆಯೊಂದಿಗೆ ವೈರಲ್ ಆಗಿತ್ತು ಎಂಬುದನ್ನು ಕಂಡುಕೊಂಡಿದ್ದೇವೆ.
ಅದೇ ವೈರಲ್ ವೀಡಿಯೋವನ್ನು ೨೦೨೨ ರಲ್ಲಿ ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
ಉತ್ತರಾಖಂಡದ ಪಿರಾನ್ ಕಲಿಯಾರ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಶೀರ್ಷಿಕೆಗಳು ಸೂಚಿಸುತ್ತವೆ. ನಂತರ ನಾವು "ಪಿರಾನ್ ಕಲಿಯಾರ್," "ಉತ್ತರಾಖಂಡ್," "ಕೊಲೆ," ಮತ್ತು "ಸೂಟ್‌ಕೇಸ್" ನಂತಹ ಪದಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದ್ದೇವೆ, ಇದು ಮಾರ್ಚ್ ೨೬, ೨೦೨೨ ರ ನ್ಯೂಸ್18 ಹಿಂದಿ ವರದಿಗೆ ನಮ್ಮನ್ನು ಕರೆದೊಯ್ಯಿತು, ಅದು ಸೂಟ್ಕೇಸ್ ಒಳಗಿನ ಶವದ ಅದೇ ಫೋಟೋವನ್ನು ಹೊಂದಿದೆ.
ವರದಿಯ ಪ್ರಕಾರ, ಮಾರ್ಚ್ ೨೪, ೨೦೨೨ ರಂದು ಉತ್ತರಾಖಂಡ್‌ನ ಪಿರಾನ್ ಕಲಿಯಾರ್‌ನಲ್ಲಿ ಈ ಘಟನೆ ಸಂಭವಿಸಿದೆ. ಗುಲ್ಶೇರ್ ಎಂಬ ವ್ಯಕ್ತಿ ಮಹಿಳೆಯನ್ನು ಪಿರಾನ್ ಕಲಿಯಾರ್‌ನಲ್ಲಿರುವ ಅತಿಥಿ ಗೃಹಕ್ಕೆ ಕರೆದಿದ್ದ. ಸ್ವಲ್ಪ ಸಮಯದ ನಂತರ, ಹುಡುಗ ಸೂಟ್‌ಕೇಸ್‌ನೊಂದಿಗೆ ಹೋಟೆಲ್‌ನಿಂದ ಹೊರಬಂದನು, ಅದು ಅಸಾಮಾನ್ಯವಾಗಿ ಭಾರವಾಗಿತ್ತು. ಅನುಮಾನಗೊಂಡ ಸಿಬ್ಬಂದಿ ಆತನನ್ನು ಹಿಡಿದು ಸೂಟ್‌ಕೇಸ್ ತೆರೆಯುವಂತೆ ಮಾಡಿದ್ದಾರೆ. ಅದರಲ್ಲಿ ಹುಡುಗಿಯ ಶವ ಪತ್ತೆಯಾಯಿತು. ಈ ಸಂಪೂರ್ಣ ಘಟನೆಯ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ಬಂದು ವಿಚಾರಿಸಿದಾಗ ಹುಡುಗ ಮೊದಲು ಆತ್ಮಹತ್ಯೆಯ ಕಥೆ ಕಟ್ಟಿದ್ದು, ನಂತರ ಅದು ಕೊಲೆ ಪ್ರಕರಣ ಎಂಬುದು ಬೆಳಕಿಗೆ ಬಂದಿದೆ.
ಮಾರ್ಚ್ ೨೬, ೨೦೨೨ ರ ನ್ಯೂಸ್18 ಹಿಂದಿ ವರದಿಯ ಸ್ಕ್ರೀನ್‌ಶಾಟ್.
ಮಾರ್ಚ್ ೨೬, ೨೦೨೨ ರ ಟೈಮ್ಸ್ ಆಫ್ ಇಂಡಿಯಾ ವರದಿಯು ಸಂತ್ರಸ್ತೆಯನ್ನು ರಮ್ಸಾ ಅನ್ಸಾರಿ ಎಂದು ಗುರುತಿಸಿದೆ ಮತ್ತು ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ದೂರದ ಸಂಬಂಧಿಗಳು ಎಂದು ಹೇಳಿದೆ. ಈಟಿವಿ ಭಾರತ್ ಮತ್ತು ಜಾಗ್ರಣ್ ದಂತಹ ಇತರ ಸುದ್ದಿ ಮಾಧ್ಯಮಗಳು ಮಾರ್ಚ್ ೨೦೨೨ ರಲ್ಲಿ ಘಟನೆಯನ್ನು ವರದಿ ಮಾಡಿವೆ. ಈ ವರದಿಗಳು ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಧಾರ್ಮಿಕ ಸಮುದಾಯಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸುತ್ತವೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಮಾರ್ಚ್ ೨೦೨೨ ರಿಂದ ಉತ್ತರಾಖಂಡದ ಪಿರಾನ್ ಕಲಿಯಾರ್‌ನಲ್ಲಿ ಅದೇ ಧಾರ್ಮಿಕ ಸಮುದಾಯದ ವ್ಯಕ್ತಿಗಳನ್ನು ಒಳಗೊಂಡ ಘಟನೆಯನ್ನು ತೋರಿಸುತ್ತದೆ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ, ಈ ವೀಡಿಯೋದೊಂದಿಗೆ ಹಂಚಿಕೊಳ್ಳಲಾದ ಕೋಮು ನಿರೂಪಣೆಯು ತಪ್ಪು.