Begin typing your search above and press return to search.
    Others

    ಮುಂಬೈ ಮೊಹರಂ ಮೆರವಣಿಗೆಯಲ್ಲಿ ಬಣ್ಣ ಹಚ್ಚಿದ ಕುದುರೆಯ ವೀಡಿಯೋವನ್ನು ಪ್ರಾಣಿ ಹಿಂಸೆಯ ಆರೋಪದೊಂದಿಗೆ ಹಂಚಿಕೊಳ್ಳಲಾಗಿದೆ

    IDTU - Karnataka
    30 July 2024 9:30 AM GMT
    ಮುಂಬೈ ಮೊಹರಂ ಮೆರವಣಿಗೆಯಲ್ಲಿ ಬಣ್ಣ ಹಚ್ಚಿದ ಕುದುರೆಯ ವೀಡಿಯೋವನ್ನು ಪ್ರಾಣಿ ಹಿಂಸೆಯ ಆರೋಪದೊಂದಿಗೆ ಹಂಚಿಕೊಳ್ಳಲಾಗಿದೆ
    x

    ಸಾರಾಂಶ:

    ಇತ್ತೀಚೆಗೆ ಮುಂಬೈನಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ ಕುದುರೆಯನ್ನು ಉದ್ದೇಶಪೂರ್ವಕವಾಗಿ ಗಾಯಗೊಳಿಸಿ ಮೆರವಣಿಗೆ ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ಜುಲೈ ೧೭, ೨೦೨೪ ರಂದು ಅಶುರಾ ಆಚರಣೆಯ ಸಮಯದಲ್ಲಿ ಕೆಂಪು ಬಣ್ಣದೊಂದಿಗೆ ಚಿತ್ರಿಸಿದ ಗುರುತುಗಳನ್ನು ಹೊಂದಿರುವ ಕುದುರೆಯನ್ನು ವೀಡಿಯೋ ತೋರಿಸುತ್ತದೆ, ನಿಜವಾದ ಗಾಯಗಳಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪು.


    ಹೇಳಿಕೆ:

    ಜುಲೈ ೧೮, ೨೦೨೪ ರಂದು, ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ದೇಹದ ಮೇಲೆ ಕೆಂಪು ಗುರುತುಗಳನ್ನು ಹೊಂದಿರುವ ಬಿಳಿ ಕುದುರೆಯನ್ನು ಕಿಕ್ಕಿರಿದ ರಸ್ತೆಯ ಮೂಲಕ ಕರೆದೊಯ್ಯುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದರ ಶೀರ್ಷಿಕೆ ಹೀಗಿದೆ - "ಭಾರತದಲ್ಲಿ ಅಶುರಾ...ಈ ವರ್ಷ, ಮುಂಬೈನ ಬೀದಿಗಳಲ್ಲಿ, ಮುಸ್ಲಿಮರು ಭಯಭೀತರಾದ, ಮುಗ್ಧ ಕುದುರೆಯನ್ನು ತೆಗೆದುಕೊಂಡು, ಅದನ್ನು ಚಾಕುವಿನಿಂದ ಪದೇ ಪದೇ ಕತ್ತರಿಸುತ್ತಾರೆ ಮತ್ತು ರಕ್ತಸಿಕ್ತ, ಗಾಯಗೊಂಡ ಪ್ರಾಣಿಯನ್ನು ಪ್ರವಾದಿಯವರ ಮೊಮ್ಮಗನ ಮರಣದ ಸ್ಮರಣಾರ್ಥವಾಗಿ ಮೆರವಣಿಗೆ ಮಾಡುತ್ತಾರೆ ಮುಗ್ಧ ಪ್ರಾಣಿಯನ್ನು ಗುರಿಯಾಗಿಸುವುದು ಹೇಗೆ?" (ಅನುವಾದಿಸಲಾಗಿದೆ). ಈ ಪೋಷ್ಟ್ ಗೆ ಸುಮಾರು ೧೯ ಲಕ್ಷ ವೀಕ್ಷಣೆಗಳು ಮತ್ತು ೨೪,೦೦೦ ಕ್ಕೂ ಹೆಚ್ಚು ಇಷ್ಟಗಳು ಬಂದಿವೆ.

    ಜೂನ್ ೧೮, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಇತರ ಎಕ್ಸ್ ಬಳಕೆದಾರರು ಈ ಭಾವನೆಗಳನ್ನು ಪ್ರತಿಧ್ವನಿಸಿದರು, ಪ್ರಾಣಿಯನ್ನು ಗಾಯಗೊಳಿಸಲು ಚಾಕುಗಳು ಮತ್ತು ಬ್ಲೇಡ್‌ಗಳನ್ನು ಬಳಸಿದ್ದಾರೆಂದು ಮುಸ್ಲಿಂ ಸಮುದಾಯವನ್ನು ಟೀಕಿಸಿದರು. ವೀಡಿಯೋವು ವಿವಿಧ ವೇದಿಕೆಗಳಲ್ಲಿ ವೇಗವಾಗಿ ಹರಡಿತು, ಅನೇಕರು ಆಪಾದಿತ ಕ್ರೌರ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಪುರಾವೆ:

    ಕೀವರ್ಡ್ ಸರ್ಚ್ ಮತ್ತು ರಿವರ್ಸ್ ಇಮೇಜ್ ಹುಡುಕಾಟದ ಮೂಲಕ, ಜುಲೈ ೧೭, ೨೦೨೪ ರಂದು 'ಷಿಯಾ ಏಜೆನ್ಸಿ' ಹೆಸರಿನ ಯೂಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿದ ವಿಸ್ತೃತ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ವಿಸ್ತೃತ ವೀಡಿಯೋ ಸಂದರ್ಭದ ವಿವರವನ್ನು ಒದಗಿಸುತ್ತದೆ; ಬಿಳಿ ಕುದುರೆಯ ದೇಹಕ್ಕೆ ಕೆಂಪು ಬಣ್ಣವನ್ನು ಅನ್ವಯಿಸುವ ವ್ಯಕ್ತಿಗಳನ್ನು ತೋರಿಸುತ್ತದೆ, ಗಾಯಗಳು ಕೃತಕವಾಗಿವೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ವೀಡಿಯೋದಲ್ಲಿ ೦:೧೬ ನಿಮಿಷಗಳ ಅವಧಿಯಲ್ಲಿ ಒಬ್ಬ ವ್ಯಕ್ತಿಯು ಕುದುರೆಯ ದೇಹದ ಮೇಲೆ ಕೆಂಪು ಬಣ್ಣವನ್ನು ಸಿಂಪಡಿಸುವುದನ್ನು ಕಾಣಬಹುದು, ಇದು ಆ ಕೆಂಪು ಗುರುತುಗಳ ರಚನೆಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ.

    ಜುಲೈ ೧೭, ೨೦೨೪ ದಿನಾಂಕದ ಶಿಯಾ ಏಜೆನ್ಸಿಯ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.

    ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೀಟಾ) ಇಂಡಿಯಾ ಮ್ಯಾನೇಜರ್ ಮೀತ್ ಅಶರ್ ಅವರ ಹೇಳಿಕೆಯನ್ನು ನಾವು ಎಕ್ಸ್ ನಲ್ಲಿ ಕಂಡುಕೊಂಡಿದ್ದೇವೆ, ಅವರು ಕುದುರೆಗೆ ಗಾಯವಾಗಿಲ್ಲ ಎಂದು ದೃಢಪಡಿಸಿದ್ದಾರೆ. ವೈರಲ್ ವೀಡಿಯೋ ಹಾಗು ಹೇಳಿಕೆಯನ್ನು ಹಂಚಿಕೊಳ್ಳುವ ಒಂದು ಎಕ್ಸ್ ಪೋಷ್ಟ್ ಗೆ ಪ್ರತಿಕ್ರಿಯೆಯಾಗಿ ಅಶಾರ್ ಅವರು ಈ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಅದರಲ್ಲಿ ಅಶರ್ ಅವರು ಮೆರವಣಿಗೆಯ ಅನೇಕ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಒಬ್ಬ ವ್ಯಕ್ತಿ ಬಿಳಿ ಕುದುರೆಯ ದೇಹದ ಮೇಲೆ ಚಿತ್ರಿಸುತ್ತಿರುವುದನ್ನು ತೋರಿಸಲಾಗಿದೆ. "ಮೆರವಣಿಗೆಯ ಸಮಯದಲ್ಲಿ ಯಾವುದೇ ಪ್ರಾಣಿಯನ್ನು ಬಳಸುವುದನ್ನು ನಾವು ವಿರೋಧಿಸುತ್ತೇವೆ. ಈ ಸಂದರ್ಭದಲ್ಲಿ, ಕುದುರೆಗೆ ಬಣ್ಣ ಬಳಿಯಲಾಗಿದೆ ಎಂದು ಡೋಂಗ್ರಿ ಪೊಲೀಸರು ನಮಗೆ ಹೇಳಿದ್ದಾರೆ. ಇದು ಅತ್ಯಂತ ಆಕ್ಷೇಪಾರ್ಹವಾಗಿದೆ, ಆದರೆ ಕುದುರೆಯು ಗಾಯಗೊಂಡಿಲ್ಲ" (ಅನುವಾದಿಸಲಾಗಿದೆ) ಎಂದು ಪೋಷ್ಟ್ ನಲ್ಲಿ ಹೇಳಿದ್ದಾರೆ. ಈ ಅಧಿಕೃತ ಹೇಳಿಕೆಯು ದೃಶ್ಯ ಸಾಕ್ಷ್ಯದೊಂದಿಗೆ ಹೊಂದಿಕೆಯಾಗುತ್ತದೆ.

    ಜುಲೈ ೧೯, ೨೦೨೪ ರಂದು ಎಕ್ಸ್ ನಲ್ಲಿ ಹಂಚಿಕೊಂಡ ವೈರಲ್ ವೀಡಿಯೋದ ಕುರಿತು ಮೀತ್ ಅಶರ್ ಅವರ ಸ್ಪಷ್ಟೀಕರಣದ ಸ್ಕ್ರೀನ್‌ಶಾಟ್.


    ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು, ಮತ್ತು ಅಶುರಾ ಮೊಹರಂನ ಹತ್ತನೇ ದಿನವಾಗಿದೆ, ಇದು ಕರ್ಬಲಾ ಕದನದಲ್ಲಿ ಇಮಾಮ್ ಹುಸೇನ್ ಅವರ ಮರಣವನ್ನು ಸೂಚಿಸುತ್ತದೆ. ಅಶುರಾದಲ್ಲಿ, ಕೆಲವು ಶಿಯಾ ಮುಸ್ಲಿಮರು ಯುದ್ಧದ ಸಮಯದಲ್ಲಿ ತೀವ್ರವಾಗಿ ಗಾಯಗೊಂಡ ಇಮಾಮ್ ಹುಸೇನ್ ಅವರ ಕುದುರೆಯ ಗೌರವಾರ್ಥವಾಗಿ ಕುದುರೆಯನ್ನು ಮೆರವಣಿಗೆ ಮಾಡುವ ಆಚರಣೆಯನ್ನು ಆಚರಿಸುತ್ತಾರೆ. ವೈರಲ್ ಪೋಷ್ಟ್ ಗಳು ಈ ಸಂಪ್ರದಾಯವನ್ನು ಪ್ರಾಣಿ ಹಿಂಸೆಯ ಕೃತ್ಯ ಎಂದು ತಪ್ಪಾಗಿ ನಿರೂಪಿಸಿವೆ.


    ತೀರ್ಪು:

    ಈ ವೈರಲ್ ವೀಡಿಯೋದ ವಿಶ್ಲೇಷಣೆಯು ಜುಲೈ ೧೭, ೨೦೨೪ ರಂದು ಮುಂಬೈನಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ ಕೆಂಪು ಬಣ್ಣದ ಗುರುತುಗಳನ್ನು ಹೊಂದಿರುವ ಕುದುರೆಯನ್ನು ತೋರಿಸುತ್ತದೆ ಎಂದು ಬಹಿರಂಗಪಡಿಸುತ್ತದೆ. ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ ಹೇಳುವಂತೆ ಕುದುರೆಗೆ ಗಾಯವಾಗಿಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪಾಗಿದೆ.

    Claim Review :   Video of painted horse in Mumbai Muharram procession shared with claim of animal cruelty
    Claimed By :  X user
    Fact Check :  False
    IDTU - Karnataka

    IDTU - Karnataka