Begin typing your search above and press return to search.
    Others

    ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕೋಪಗೊಂಡ ಹಳೆಯ ವೀಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

    IDTU - Karnataka
    14 Jun 2024 9:50 AM GMT
    ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕೋಪಗೊಂಡ ಹಳೆಯ ವೀಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
    x

    ಸಾರಾಂಶ:

    ಸಾಮಾಜಿಕ ಮಾಧ್ಯಮ ಬಳಕೆದಾರರು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಜೂನ್ ೯, ೨೦೨೪ ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮುನ್ನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ವಿರುದ್ಧ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೊಳ್ಳಲಾಗಿದೆ. ಆದರೆ, ವೈರಲ್ ವೀಡಿಯೋ ನವೆಂಬರ್ ೧೯, ೨೦೨೧ರಲ್ಲಿ ನಡೆದ ಘಟನೆಯದ್ದು. ಆದ್ದರಿಂದ ಇತ್ತೀಚಿನ ವೀಡಿಯೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಆರೋಪಗಳು ತಪ್ಪು.

    ಹೇಳಿಕೆ:

    ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಿತ್ರಪಕ್ಷಗಳು ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ), ವಿಶೇಷವಾಗಿ ಜನತಾ ದಳ (ಯುನೈಟೆಡ್) (ಜೆಡಿಯು) ಬಿಹಾರ ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ), ಎನ್‌ಡಿಎ ಅಧಿಕಾರದ ಮುಂದುವರಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಆಂಧ್ರಪ್ರದೇಶದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ನಂತರ ವಿಧಾನಸಭೆಯಿಂದ ಹೊರನಡೆದಿರುವ ವೀಡಿಯೋವೊಂದನ್ನು ಫೇಸ್‌ಬುಕ್‌ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ. ಜೂನ್ ೯, ೨೦೨೪ ರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮೊದಲು ಎನ್‌ಡಿಎ ಜೊತೆ ಟಿಡಿಪಿಯ ಭಿನ್ನಾಭಿಪ್ರಾಯವನ್ನು ಕ್ಲಿಪ್ ತೋರಿಸುತ್ತದೆ ಎಂದು ಬಳಕೆದಾರರು ಹೇಳಿದ್ದಾರೆ. ಫೇಸ್‌ಬುಕ್ ಬಳಕೆದಾರರು ಜೂನ್ ೧೩, ೨೦೨೪ ರಂದು ಹಿಂದಿ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹೀಗೆ ಹೇಳಿಕೊಂಡು ಹಂಚಿಕೊಂಡಿದ್ದಾರೆ, "ಎನ್‌ಡಿಎ ಸಮ್ಮಿಶ್ರ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮೊದಲು, ಚಂದ್ರಬಾಬು ನಾಯ್ಡು ಅವರು ತುಂಬಾ ಕೋಪಗೊಂಡಿದ್ದರು; ಇದು ಅವರಿಗೆ ಬಿಜೆಪಿಯನ್ನು ಬೆಂಬಲಿಸಲು ಇಷ್ಟವಿರಲಿಲ್ಲ ಎಂಬುದನ್ನು ತೋರಿಸುತ್ತದೆ (ಅನುವಾದಿಸಲಾಗಿದೆ)."

    ಜೂನ್ ೧೩, ೨೦೨೪ ರಂದು ಫೇಸ್‌ಬುಕ್‌ನಲ್ಲಿ ಪೋಷ್ಟ್ ಮಾಡಿದ ವೀಡಿಯೋದ ಸ್ಕ್ರೀನ್‌ಶಾಟ್.


    ಮತ್ತೊಬ್ಬ ಫೇಸ್‌ಬುಕ್‌ ಬಳಕೆದಾರರು ಇದೇ ರೀತಿಯ ಶೀರ್ಷಿಕೆಯೊಂದಿಗೆ ಜೂನ್ ೧೧, ೨೦೨೪ ರಂದು ಇದೇ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಲ್ಲಿ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

    ಪುರಾವೆ:

    ಚಂದ್ರಬಾಬು ನಾಯ್ಡು ಅವರು ಆಕ್ರೋಶ ವ್ಯಕ್ತಪಡಿಸಿ ವಿಧಾನಸಭೆಯಿಂದ ಹೊರನಡೆದಿರುವುದನ್ನು ತೋರಿಸುವ ವೈರಲ್ ವೀಡಿಯೋವನ್ನು ನಾವು ವಿಶ್ಲೇಷಿಸಿದ್ದೇವೆ. ನಂತರ "ಟಿಡಿಪಿ," "ಚಂದ್ರಬಾಬು ನಾಯ್ಡು," ಮತ್ತು "ವಾಕ್ಔಟ್" ಮೊದಲಾದ ಪದಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ನವೆಂಬರ್ ೧೯, ೨೦೨೧ ರಂದು ಮಹಾ ನ್ಯೂಸ್ ಹಂಚಿಕೊಂಡ "ಚಂದ್ರಬಾಬು ಅಸೆಂಬ್ಲಿಯಲ್ಲಿ ವಾಕ್ಔಟ್ (ಅನುವಾದಿಸಲಾಗಿದೆ)," ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೋವಿಗೆ ನಮ್ಮನ್ನು ಕರೆದೊಯ್ಯಿತು.

    ನವೆಂಬರ್ ೧೯, ೨೦೨೧ರಂದು ಮಹಾ ನ್ಯೂಸ್ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.


    ಇತರ ಸುದ್ದಿ ಮಾಧ್ಯಮಗಳಾದ ವಿ೬ ನ್ಯೂಸ್, ಗ್ರೇಟ್ ತೆಲಂಗಾಣ ಮತ್ತು ಅಮ್ಮ ನ್ಯೂಸ್, ನವೆಂಬರ್ ೧೯, ೨೦೨೧ ರಂದು ಅದೇ ವೀಡಿಯೋವನ್ನು ಹಂಚಿಕೊಂಡಿವೆ.

    ನಾವು ಇನ್ನಷ್ಟು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ನವೆಂಬರ್ ೧೯, ೨೦೨೧ ರ ಘಟನೆಯನ್ನು ವಿವರಿಸುವ ಎನ್‌ಡಿಟಿವಿ ವರದಿಯೊಂದನ್ನು ಕಂಡುಕೊಂಡಿದ್ದೇವೆ.

    ನವೆಂಬರ್ ೧೯, ೨೦೨೧ ರ ಎನ್‌ಡಿಟಿವಿ ವರದಿಯ ಸ್ಕ್ರೀನ್‌ಶಾಟ್.


    ವರದಿಯ ಪ್ರಕಾರ, ಕೃಷಿ ಕ್ಷೇತ್ರದ ಚರ್ಚೆಯ ಸಂದರ್ಭದಲ್ಲಿ, ಆಗಿನ ಆಡಳಿತ ಪಕ್ಷವಾದ ಯುವಜನ ಶ್ರಮಿಕ ರೈತ (ವೈಎಸ್‌ಆರ್) ಕಾಂಗ್ರೆಸ್ ಪಕ್ಷ ಮತ್ತು ಟಿಡಿಪಿ ಸೇರಿದಂತೆ ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ವೈಎಸ್ಆರ್ ಕಾಂಗ್ರೆಸ್ ತನ್ನ ಪತ್ನಿಯನ್ನು ವೈಯಕ್ತಿಕ ಟೀಕೆಗಳಿಂದ ಗುರಿಯಾಗಿಸಿಕೊಂಡಿದೆ ಎಂದು ಚಂದ್ರಬಾಬು ಆರೋಪಿಸಿದ್ದಾರೆ. ಇದು ಅವರಿಗೆ ಕೋಪ ಮತ್ತು ಅಸಮಾಧಾನವನ್ನುಂಟುಮಾಡಿತ್ತು. ವರದಿಯ ಪ್ರಕಾರ, ಸ್ಪೀಕರ್ ತಮ್ಮಿನೇನಿ ಸೀತಾರಾಮ್ ನಾಯ್ಡು ಅವರ ಮೈಕ್ ಅನ್ನು ಕಟ್ ಮಾಡಿದರು, ಮತ್ತು ಅವರ ಪತ್ನಿಯನ್ನು ಸಮರ್ಥಿಸಿಕೊಳ್ಳುವ ಅವಕಾಶವನ್ನು ನಿರಾಕರಿಸಿದರು. ಇದರ ಪರಿಣಾಮವಾಗಿ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಟಿಡಿಪಿ ಮುಖ್ಯಸ್ಥರು ವಾಕ್ ಔಟ್ ಮಾಡಿದರು. ಸ್ವಲ್ಪ ಸಮಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ನೇರ ದೂರದರ್ಶನದಲ್ಲಿ ಕಣ್ಣೀರಿಟ್ಟರು.

    ತೀರ್ಪು:

    ವೀಡಿಯೋದ ವಿಶ್ಲೇಷಣೆಯು ನವೆಂಬರ್ ೧೯, ೨೦೨೧ ರಂದು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಸಂಭವಿಸಿದ ಘಟನೆಯದ್ದು ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ, ವೀಡಿಯೋ ಇತ್ತೀಚಿನದು ಎಂದು ಹೇಳುವ ಆನ್‌ಲೈನ್ ನಲ್ಲಿ ಕಂಡುಬಂದ ಆರೋಪಗಳು ತಪ್ಪು.


    Claim Review :   Video of TDP chief Chandrababu Naidu losing temper in Andhra Pradesh Assembly shared as recent
    Claimed By :  Facebook User
    Fact Check :  False
    IDTU - Karnataka

    IDTU - Karnataka