Begin typing your search above and press return to search.
    Others

    ರಿಷಿಕೇಶದಲ್ಲಿ ನಡೆದ ಜಗಳವೊಂದರ ವೀಡಿಯೋ ತಪ್ಪಾದ ಕೋಮು ನಿರೂಪಣೆಗಳೊಂದಿಗೆ ವೈರಲ್ ಆಗಿದೆ

    IDTU - Karnataka
    15 Jun 2024 10:40 AM GMT
    ರಿಷಿಕೇಶದಲ್ಲಿ ನಡೆದ ಜಗಳವೊಂದರ ವೀಡಿಯೋ ತಪ್ಪಾದ ಕೋಮು ನಿರೂಪಣೆಗಳೊಂದಿಗೆ ವೈರಲ್ ಆಗಿದೆ
    x

    ಸಾರಾಂಶ:

    ಉತ್ತರಾಖಂಡದ ರಿಷಿಕೇಶದಲ್ಲಿನ ನದಿ ತೀರದಲ್ಲಿ ನಡೆದ ಘರ್ಷಣೆಯೊಂದರ ವೀಡಿಯೋವನ್ನು ಮುಸ್ಲಿಂ ರಾಫ್ಟಿಂಗ್ ಮಾರ್ಗದರ್ಶಕರು ರಿಷಿಕೇಶದಲ್ಲಿ ಹಿಂದೂ ಪ್ರವಾಸಿಗರನ್ನು ಥಳಿಸುತ್ತಿದ್ದಾರೆ ಎಂಬ ಕೋಮು ನಿರೂಪಣೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ರಾಫ್ಟಿಂಗ್ ಪಾಯಿಂಟ್‌ಗೆ ತೆರಳುವಾಗ ತೆಪ್ಪವೊಂದು ಸಿಕ್ಕಿಹಾಕಿಕೊಳ್ಳುವ ವಿಚಾರವಾಗಿ ಪ್ರವಾಸಿ ಮತ್ತು ಮಾರ್ಗದರ್ಶಕರ ನಡುವೆ ಜಗಳ ನಡೆದಿತ್ತು. ಅದಲ್ಲದೆ, ಉತ್ತರಾಖಂಡ ಪೊಲೀಸರು ಘಟನೆಗೆ ಯಾವುದೇ ಕೋಮು ಕೋನವಿರುವುದಾಗಿ ಹೇಳಿಕೊಂಡಿಲ್ಲ. ಆದ್ದರಿಂದ, ಆನ್‌ಲೈನ್ ನಲ್ಲಿ ಈ ಬಗ್ಗೆ ಕೋಮು ನಿರೂಪಣೆಗಳೊಂದಿಗೆ ಮಾಡಿರುವ ಹೇಳಿಕೆಗಳು ತಪ್ಪು.

    ಹೇಳಿಕೆ:

    ಉತ್ತರಾಖಂಡದ ರಿಷಿಕೇಶದಲ್ಲಿ ನಡೆದ ಜಗಳದಲ್ಲಿ ಮುಸ್ಲಿಂ ಮಾರ್ಗದರ್ಶಕರು ಹಿಂದೂ ಪ್ರವಾಸಿಗರನ್ನು ಥಳಿಸುತ್ತಿರುವುದನ್ನು ತೋರಿಸುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಜೂನ್ ೧೩, ೨೦೨೪ ರಂದು ವೀಡಿಯೊವನ್ನು ಹಿಂದಿ ಶೀರ್ಷಿಕೆಯೊಂದಿಗೆ ಹೀಗೆ ಹೇಳಿಕೊಂಡು ಹಂಚಿಕೊಂಡಿದ್ದಾರೆ, "ರಿಷಿಕೇಶ್: ಜಿಹಾದಿಗಳು ಹಿಂದೂಗಳ ಪ್ರತಿಯೊಂದು ಪವಿತ್ರ ಪ್ರವಾಸಿ ತಾಣಗಳನ್ನು ತಲುಪಿ ಎಲ್ಲಾ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಅಲ್ಲಿನ ಮುಸ್ಲಿಂ ಬೋಟ್ ರಾಫ್ಟಿಂಗ್ ಜನರು ಹಿಂದೂಗಳನ್ನು ಹೊಡೆಯುತ್ತಿದ್ದಾರೆ. ಕೆಟ್ಟದಾಗಿ (ಅನುವಾದಿಸಲಾಗಿದೆ)." ಈ ಪೋಸ್ಟ್ ೧.೧ ಸಾವಿರ ವೀಕ್ಷಣೆಗಳನ್ನು ಗಳಿಸಿದೆ.

    ವೈರಲ್ ವೀಡಿಯೋದೊಂದಿಗೆ ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಮತ್ತೊಬ್ಬ ಪರಿಶೀಲಿಸಿದ ಬಳಕೆದಾರರು ಇದೇ ರೀತಿಯ ಶೀರ್ಷಿಕೆಯೊಂದಿಗೆ ಜೂನ್ ೧೧, ೨೦೨೪ ರಂದು ಇದೇ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಬಳಕೆದಾರರು ಸಹ ಇದೇ ರೀತಿಯ ಕೋಮು ನಿರೂಪಣೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ (ಇಲ್ಲಿ ಮತ್ತು ಇಲ್ಲಿ).

    ಪುರಾವೆ:

    ವೈರಲ್ ಪೋಷ್ಟ್ ಗಳಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು "ರಿಷಿಕೇಶ್," "ರಾಫ್ಟಿಂಗ್," ಮತ್ತು "ಜಗಳ" ಮೊದಲಾದ ಪದಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಇದು ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಹೊಂದಿರುವ ಜೂನ್ ೮, ೨೦೨೪ ರ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗೆ ನಮ್ಮನ್ನು ಕರೆದೊಯ್ಯಿತು.

    ಜೂನ್ ೮, ೨೦೨೪ ರ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಸ್ಕ್ರೀನ್‌ಶಾಟ್.


    ವರದಿಯ ಪ್ರಕಾರ, ಜೂನ್ ೭, ೨೦೨೪ ರಂದು ಉತ್ತರಾಖಂಡದ ರಿಷಿಕೇಶದಲ್ಲಿರುವ ಬ್ರಹ್ಮಪುರಿ ರಾಫ್ಟಿಂಗ್ ಪಾಯಿಂಟ್‌ನಲ್ಲಿ ಈ ಘಟನೆ ಸಂಭವಿಸಿದೆ ಮತ್ತು ಸುರಕ್ಷತಾ ಪ್ರೋಟೋಕಾಲ್‌ನ ವಿವಾದವು ಸಮಸ್ಯೆಯನ್ನು ಉಲ್ಬಣಗೊಳಿಸಿರಬಹುದು.

    ಈಟಿವಿ ಭಾರತ್‌ ನಂತಹ ಇತರ ಮಾಧ್ಯಮಗಳು ಕೂಡ ಘಟನೆಯನ್ನು ವರದಿ ಮಾಡಿವೆ.

    ಘಟನೆಯ ಬಗ್ಗೆ ಯಾವುದೇ ಪಕ್ಷಗಳು ಔಪಚಾರಿಕವಾಗಿ ದೂರು ನೀಡದಿದ್ದರೂ, ಉತ್ತರಾಖಂಡ ಪೊಲೀಸರು ವೈರಲ್ ವೀಡಿಯೋವನ್ನು ಗಮನದಲ್ಲಿಟ್ಟುಕೊಂಡು ಮೂವರನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅವರು ಜೂನ್ ೭, ೨೦೨೪ ರಂದು ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

    ಜೂನ್ ೦೭, ೨೦೨೪ ರಂದು ಉತ್ತರಾಖಂಡ್ ಪೋಲೀಸರ ಇನ್ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಹೇಳಿಕೆಯ ಪ್ರಕಾರ, ಆರೋಪಿಗಳು ಆಶಿಶ್ ಜೋಶಿ, ಕಮಲೇಶ್ ರಾಜ್‌ಭರ್ ಮತ್ತು ಗಂಗಾ ತ್ಯಾಗಿ, ಮತ್ತು ಘಟನೆಯಲ್ಲಿ ಭಾಗಿಯಾದ ಇತರ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ರಾಫ್ಟಿಂಗ್ ಪಾಯಿಂಟ್‌ಗೆ ಕೊಂಡೊಯ್ಯುವಾಗ ತೆಪ್ಪ ಸಿಕ್ಕಿಹಾಕಿಕೊಂಡ ನಂತರ ಮತ್ತೊಂದು ಕಂಪನಿಯ ಕ್ಲೈಂಟ್‌ನೊಂದಿಗಿನ ವಿವಾದದ ಕುರಿತು ರಾಫ್ಟಿಂಗ್ ಗೈಡ್‌ಗಳು ಮತ್ತು ಪ್ರವಾಸಿಗರ ನಡುವೆ ಹೊಡೆದಾಟ ನಡೆಯಿತು. ರಾಫ್ಟಿಂಗ್ ಮತ್ತು ಸಾಹಸ ಕಂಪನಿಗಳಾದ ರಿಷಿ ಗಂಗಾ ಮತ್ತು ಪೆಡ್ಲರ್ ಹಿಮಾಲಯ ಮತ್ತು ಅವರ ಮಾರ್ಗದರ್ಶಕರಿಗೆ ಪರವಾನಗಿ ರದ್ದುಪಡಿಸುವ ಕುರಿತು ತೆಹ್ರಿ ಗರ್ವಾಲ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಪೊಲೀಸರು ರಿಪೋರ್ಟ್ ಕಳುಹಿಸಿದ್ದಾರೆ.

    ತೀರ್ಪು:

    ರಿಷಿಕೇಶದಲ್ಲಿ ನಡೆದ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಒಂದೇ ಸಮುದಾಯಕ್ಕೆ ಸೇರಿದವರು ಎಂದು ವೀಡಿಯೋದ ಸುತ್ತಲಿನ ವೈರಲ್ ಹೇಳಿಕೆಯ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ, ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿರುವ ಕೋಮು ನಿರೂಪಣೆಗಳು ಸುಳ್ಳು.


    Claim Review :   Visuals of brawl in Rishikesh viral with false communal narrative
    Claimed By :  X user
    Fact Check :  False
    IDTU - Karnataka

    IDTU - Karnataka