- Home
- /
- ಸತ್ಯ ಪರಿಶೀಲನೆಗಳು
- /
- ಹಗರಣ ಎಚ್ಚರಿಕೆ
- /
- ಇಲ್ಲ, ಕರ್ನಾಟಕ ಸೈಬರ್...
ಇಲ್ಲ, ಕರ್ನಾಟಕ ಸೈಬರ್ ಕ್ರೈಂ ಪೊಲೀಸರು ಲಸಿಕೆ ಪ್ರತಿಕ್ರಿಯೆ ಕರೆಗಳ ವಿರುದ್ಧ ಹಗರಣದ ಎಚ್ಚರಿಕೆಯನ್ನು ನೀಡಿಲ್ಲ
ಸಾರಾಂಶ:
ಕೋವಿಡ್ ಲಸಿಕೆ ಕುರಿತು ಪ್ರತಿಕ್ರಿಯೆಯನ್ನು ಕೇಳಲು ನಿರ್ದಿಷ್ಟ ಸಂಖ್ಯೆಯನ್ನು ಒತ್ತಿ ಕೇಳುವ ಮೂಲಕ ಜನರ ಬ್ಯಾಂಕ್ ಖಾತೆಗಳಿಂದ ಹಣವನ್ನು ಕದಿಯುವ ಫೋನ್ ಕರೆಗಳ ವಿರುದ್ಧ ಹಗರಣ ಎಚ್ಚರಿಕೆಯನ್ನು ನೀಡುವ ಸೈಬರ್ ಕ್ರೈಮ್ ಪೋಲೀಸರ ಪ್ರಕಟಣೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ಪಠ್ಯ ಸಂದೇಶವನ್ನು ಪ್ರಸಾರ ಮಾಡಿದ್ದಾರೆ. ಆದರೆ, ರಾಜ್ಯದ ಸೈಬರ್ ಕ್ರೈಮ್ ಪೊಲೀಸರು ಅಂತಹ ಎಚ್ಚರಿಕೆಯನ್ನು ನೀಡಿಲ್ಲ ಮತ್ತು ಈ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ, ಇದು ಈ ಹೇಳಿಕೆಯನ್ನು ತಪ್ಪಾಗಿಸುತ್ತದೆ.
ಹೇಳಿಕೆ:
ಸೈಬರ್ ಕ್ರೈಂ ಪೊಲೀಸರು ಮಾಡಿರುವ ಘೋಷಣೆಯೊಂದು ಯೂಟ್ಯೂಬ್ ಮತ್ತು ವಾಟ್ಸಾಪ್ ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೈರಲ್ ಸಂದೇಶವು ಹೀಗೆ ಹೇಳುತ್ತದೆ, “ತುರ್ತು ಮಾಹಿತಿ ದಯವಿಟ್ಟು ಗಮನ ಕೊಡಿ. ನಿಮಗೆ ಕರೆ ಬಂದರೆ ಮತ್ತು ನೀವು ಕರೋನಾ ಲಸಿಕೆ ತೆಗೆದುಕೊಂಡಿದ್ದೀರಾ ಎಂದು ಕೇಳಿದರೆ ನಂತರ ೧ ಅನ್ನು ಒತ್ತಿ ಇಲ್ಲದಿದ್ದರೆ ೨ ಅನ್ನು ಒತ್ತಲು ನಿಮಗೆ ಆಯ್ಕೆಯನ್ನು ನೀಡಲಾಗುತ್ತದೆ ಆದರೆ ನೀವು ಒಂದು ಅಥವಾ ಎರಡು ಸಂಖ್ಯೆಗಳನ್ನು ಒತ್ತಿದರೆ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗುತ್ತದೆ ಮತ್ತು ನಿಮ್ಮ ಬ್ಯಾಂಕ್‌ನಲ್ಲಿರುವ ಎಲ್ಲಾ ಮಾಹಿತಿ ಖಾತೆಯು ಕಣ್ಮರೆಯಾಗುತ್ತದೆ, ಆದ್ದರಿಂದ ತಕ್ಷಣ ಫೋನ್ ಸಂಪರ್ಕ ಕಡಿತಗೊಳಿಸಿ. ಈ ಸಂದೇಶವನ್ನು ಸಾಧ್ಯವಾದಷ್ಟು ಕಳುಹಿಸಿ. ಎಲ್ಲಾ ಮೊಬೈಲ್‌ಗಳಿಗೂ ವೇಗವಾಗಿ ಹರಡಬೇಕು."
ಇತ್ತೀಚೆಗೆ ವಾಟ್ಸಪ್ಪ್ ಮತ್ತು ಇತರ ವೇದಿಕೆಗಳಲ್ಲಿ ಹಂಚಿಕೊಳ್ಳಲಾದ ವೈರಲ್ ಸಂದೇಶ.
ಪುರಾವೆ:
ಈ ವೈರಲ್ ಸಂದೇಶಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಹೊರಡಿಸಿದ ಯಾವುದೇ ಪ್ರಕಟಣೆಯನ್ನು ಕರ್ನಾಟಕ ಪೊಲೀಸರ ಸೈಬರ್ ಕ್ರೈಂ ಸಿಐಡಿಯ ಅಧಿಕೃತ ಜಾಲತಾಣದಲ್ಲಿ ಹುಡುಕಿದಾಗ ಕಂಡುಬಂದಿಲ್ಲ. ರಾಜ್ಯದ ಸೈಬರ್ ಕ್ರೈಂ ವಿಭಾಗವು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹೆಚ್ಚು ಸಕ್ರಿಯವಾಗಿದೆ, ಅಲ್ಲಿ ಅವರು ಈ ರೀತಿಯ ಯಾವುದೇ ಪ್ರಮುಖ ಸಾರ್ವಜನಿಕ ಪ್ರಕಟಣೆಗಳನ್ನು ಹಂಚಿಕೊಂಡಿಲ್ಲ. ಇದು ಅವರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ಖಚಿತಪಡಿಸಿದೆ.
ವೈರಲ್ ಸಂದೇಶಕ್ಕೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ತನಿಖೆಯ ನಂತರ, ೨೦೨೧ ರಲ್ಲಿ ಲಸಿಕೆ ಪ್ರತಿಕ್ರಿಯೆ ಕರೆ ಮೂಲಕ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಫೋನ್ ಹ್ಯಾಕ್ ಕುರಿತು ಇದೇ ರೀತಿಯ ಸಂದೇಶವನ್ನು ಫ್ಯಾಕ್ಟ್-ಚೆಕ್ ಮಾಡಿದೆ ಮತ್ತು ಸಂದೇಶವನ್ನು ನಕಲಿ ಎಂದು ವರ್ಗೀಕರಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ.
ಮೇ ೨೨, ೨೦೨೧ ರಂದು ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ಪಿಐಬಿಯ ಫ್ಯಾಕ್ಟ್-ಚೆಕ್ ನ ಸ್ಕ್ರೀನ್‌ಶಾಟ್.
ಕರ್ನಾಟಕವಲ್ಲದೆ ಇತರ ರಾಜ್ಯಗಳಲ್ಲೂ ಇದೇ ರೀತಿಯ ಸಂದೇಶ ಹರಿದಾಡಿರುವುದು ತಿಳಿದುಬಂದಿದೆ. ತೆಲಂಗಾಣ ಟುಡೇ ಏಪ್ರಿಲ್ ೨೦೨೧ ರಲ್ಲಿ ವರದಿ ಮಾಡಿದ್ದು, ರಾಜ್ಯದ ಸೈಬರ್ ಪೊಲೀಸರು ಈ ಮಾಹಿತಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ಜನರು ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ನಾವು ಲಸಿಕೆ ಪ್ರತಿಕ್ರಿಯೆಗೆ ಸಂಬಂಧಿಸಿದ ಹಗರಣ ಕರೆಗಳ ಕುರಿತು ಇತ್ತೀಚಿನ ವರದಿಗಳನ್ನು ಹುಡುಕುವಾಗ ದೆಹಲಿ ಮತ್ತು ಕೋಲ್ಕತ್ತಾದ ಬಗ್ಗೆ ಮಾತ್ರ ಸಮಾನ ಹಗರಣದ ವರದಿಗಳನ್ನು ಕಂಡುಕೊಂಡಿದ್ದೇವೆ. ಅರೋಗ್ಯ ಇಲಾಖೆಗಳಿಂದ ಬರುತ್ತಿದೆ ಎಂದು ಹೇಳಿಕೊಳ್ಳುವ ಕರೆಗಳ ಸಮಯದಲ್ಲಿ ತಮ್ಮ ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳಂತಹ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸದಂತೆ ಆ ರಾಜ್ಯಗಳ ಸೈಬರ್ ಕ್ರೈಮ್ ಪೊಲೀಸರು ಎಚ್ಚರಿಸಿದ್ದಾರೆ ಎಂದು ದಿ ಎಕನಾಮಿಕ್ ಟೈಮ್ಸ್ ಮತ್ತು ನ್ಯೂಸ್18 ವರದಿ ಮಾಡಿವೆ.
ತೀರ್ಪು:
ವೈರಲ್ ಸಂದೇಶದ ವಿಶ್ಲೇಷಣೆಯು ಕರ್ನಾಟಕದ ಸೈಬರ್ ಕ್ರೈಮ್ ಪೊಲೀಸರು ಪ್ರತಿಕ್ರಿಯೆಯಾಗಿ ೧ ಅಥವಾ ೨ ಬಟನ್‌ಗಳನ್ನು ಒತ್ತುವ ಕೋವಿಡ್ ಲಸಿಕೆ ಪ್ರತಿಕ್ರಿಯೆ ಕರೆಗಳ ಕುರಿತು ಯಾವುದೇ ಹಗರಣ ಎಚ್ಚರಿಕೆಗಳನ್ನು ನೀಡಿಲ್ಲ ಎಂದು ತಿಳಿಸುತ್ತದೆ. ಆದ್ದರಿಂದ, ಈ ಹೇಳಿಕೆ ತಪ್ಪು.