- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಉತ್ತರ ಪ್ರದೇಶದ...
ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಥಳಿಸುವ ಹಳೆಯ ವೀಡಿಯೋವನ್ನು ಆರ್‌ಎಸ್‌ಎಸ್ ಶಿಬಿರದ ದೃಶ್ಯಗಳಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶಿಬಿರದಲ್ಲಿ ಮಕ್ಕಳ ವಿರುದ್ಧ ಕ್ರೌರ್ಯವನ್ನು ತೋರಿಸವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ಈ ವೀಡಿಯೋ ೨೦೨೩ ರಲ್ಲಿ ಉತ್ತರ ಪ್ರದೇಶದ ಸೀತಾಪುರದ ಶಾಲೆಯೊಂದರಲ್ಲಿ ನಡೆದ ಘಟನೆಯದಾಗಿದೆ. ಆದ್ದರಿಂದ, ಇದು ಆರ್‌ಎಸ್‌ಎಸ್ ಶಿಬಿರದ ಘಟನೆ ಎಂಬ ಹೇಳಿಕೆ ತಪ್ಪು.
ಹೇಳಿಕೆ:
ಬಾಲಕನೊಬ್ಬನನ್ನು ದೊಣ್ಣೆಯಿಂದ ಅಮಾನುಷವಾಗಿ ಥಳಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರೆ. ವ್ಯಕ್ತಿಯೊಬ್ಬ ಬಾಲಕನನ್ನು ನೆಲಕ್ಕೆ ತಳ್ಳುತ್ತಿರುವುದನ್ನು ಮತ್ತು ಕೋಲಿನಿಂದ ನಿರಂತರವಾಗಿ ಥಳಿಸುತ್ತಿರುವುದನ್ನು ಈ ವೀಡಿಯೋ ತೋರಿಸುತ್ತದೆ. ಇದು ಆರ್‌ಎಸ್‌ಎಸ್ ತರಬೇತಿ ಶಿಬಿರದಲ್ಲಿ ಮಕ್ಕಳ ಮೇಲಿನ ದೌರ್ಜನ್ಯವನ್ನು ತೋರಿಸುವುದಾಗಿ ಹೇಳಿಕೊಂಡಿದೆ.
ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಒಬ್ಬ ಬಳಕೆದಾರರು ಜೂನ್ ೧೯, ೨೦೨೪ ರಂದು “RSS ಟ್ರೈನಿಂಗ್ ಕ್ಯಾಂಪ್ ನಲ್ಲಿ ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿರುವ ಭಯಾನಕ ದೃಶ್ಯ ಬಹಿರಂಗ… RSS ಉಗ್ರಗಾಮಿಗಳ ಸ್ಫೋಟಕ ಸುದ್ದಿ..” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಪೋಷ್ಟ್ ೧೦,೫೦೦ ವೀಕ್ಷಣೆಗಳು, ೨೩೩ ಲೈಕ್ಸ್ ಗಳು ಮತ್ತು ೮೫ ಮರುಪೋಷ್ಟ್ ಗಳನ್ನು ಗಳಿಸಿದೆ. ಫೇಸ್‌ಬುಕ್ ನ ಬಳಕೆದಾರರು ಸಹ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಜೂನ್ ೧೯, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದ ಕೀಫ್ರೇಮ್ಸ್ ಗಳ ರಿವರ್ಸ್ ಇಮೇಜ್ ಸರ್ಚ್ ಅಕ್ಟೋಬರ್ ೯, ೨೦೨೩ ರ ಅಮರ್ ಉಜಾಲಾ ವರದಿಗೆ ನಮ್ಮನ್ನು ಕರೆದೊಯ್ಯಿತು. ಹಿಂದಿಯಲ್ಲಿ ಅ ವರದಿಯ ಶೀರ್ಷಿಕೆಯು “ಸೀತಾಪುರ ಗುರುಕುಲದ ಆಚಾರ್ಯರ ಕ್ರೌರ್ಯದ ವೀಡಿಯೋ, ಅದನ್ನು ನೋಡಿ ನಿಮ್ಮ ಆತ್ಮ ಕಂಪಿಸುತ್ತದೆ” (ಅನುವಾದಿಸಲಾಗಿದೆ) ಎಂದು ಓದುತ್ತದೆ.
ಅಕ್ಟೋಬರ್ ೯, ೨೦೨೩ ರ ಅಮರ್ ಉಜಾಲಾ ವರದಿಯ ಸ್ಕ್ರೀನ್‌ಶಾಟ್.
ವರದಿಯ ಪ್ರಕಾರ, ಉತ್ತರ ಪ್ರದೇಶದ ಸೀತಾಪುರದ ಸಿಧೌಲಿಯಲ್ಲಿರುವ ಶ್ರೀ ಕಿಶೋರಿ ಗರ್ಲ್ಸ್ ಸೆಕೆಂಡರಿ ಸ್ಕೂಲ್ ಈ ಘಟನೆ ಸಂಭವಿಸಿದೆ. ಕ್ರೌರ್ಯವನ್ನು ಬಹಿರಂಗಪಡಿಸಿದ ವೀಡಿಯೋ ಅಕ್ಟೋಬರ್ ೮, ೨೦೨೩ ರಂದು ವೈರಲ್ ಆಗಿತ್ತು. ಸೀತಾಪುರ ಪೊಲೀಸರು ಶಿಕ್ಷಕ ಸತೀಶ್ ಜೋಶಿ ವಿರುದ್ಧ ಹಲ್ಲೆ ಪ್ರಕರಣವನ್ನು ದಾಖಲಿಸಿ ಬಂಧಿಸಿದ್ದಾರೆ. ಅಕ್ಟೋಬರ್ ೯, ೨೦೨೪ ರಂದು ಎಕ್ಸ್ ನಲ್ಲಿ ಬಂಧನಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಅಕ್ಟೋಬರ್ ೧೦, ೨೦೨೩ ರ ಮತ್ತೊಂದು ಅಮರ್ ಉಜಾಲಾ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ, ಅದರಲ್ಲಿ ಶಾಲೆಯ ಶಿಕ್ಷಕ ಸತೀಶ್ ಜೋಶಿ ಐದನೇ ತರಗತಿಯ ವಿದ್ಯಾರ್ಥಿ ದೀಪಕ್‌ನನ್ನು ಅಮಾನುಷವಾಗಿ ಥಳಿಸುತ್ತಿರುವುದನ್ನು ಆ ವೀಡಿಯೋ ತೋರಿಸುತ್ತದೆ. ಆ ವೀಡಿಯೋ ವೈರಲ್ ಆದ ನಂತರ ಪೊಲೀಸರು ಮತ್ತು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಉತ್ತರ ಪ್ರದೇಶದ ಲಕ್ನೋನಿಂದ ಸಂಸ್ಕೃತ ಸಂಸ್ಥಾನಂ ನಡೆಸುತ್ತಿರುವ ಮೂರು ತಿಂಗಳ ಅರ್ಚಕ ತರಬೇತಿ ಶಿಬಿರವನ್ನು ಶಾಲೆಯಲ್ಲಿ ನಡೆಸುತ್ತಿರುವುದು ಬ್ಲಾಕ್ ಶಿಕ್ಷಣಾಧಿಕಾರಿ (ಬಿಈಇಓ) ಅವರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶಿಬಿರದಲ್ಲಿ ಮೂವತ್ತು ಮಕ್ಕಳು ಭಾಗವಹಿಸಿದ್ದರು. ಇದಕ್ಕೆ ಮೂಲ ಶಿಕ್ಷಣ ಇಲಾಖೆಯಿಂದ ವ್ಯವಸ್ಥಾಪಕರು ಅನುಮತಿ ಪಡೆದಿಲ್ಲ. ಇಲಾಖೆಗೆ ಈ ಮಾಹಿತಿ ನೀಡದೆ ತರಬೇತಿ ಶಿಬಿರ ನಡೆಸುತ್ತಿದ್ದರು. ಇದರಲ್ಲಿ ಮ್ಯಾನೇಜರ್‌ನ ಶಾಮೀಲಾಗಿರುವುದು ಕೂಡ ಬೆಳಕಿಗೆ ಬಂದಿದೆ, ಆಗಿನ ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಅಖಿಲೇಶ್ ಪ್ರತಾಪ್ ಸಿಂಗ್ ಮ್ಯಾನೇಜರ್ ಮತ್ತು ಪ್ರಾಂಶುಪಾಲರಿಗೆ ನೋಟಿಸ್ ಕಳುಹಿಸಿದ್ದಾರೆ.
ಲೈವ್ ಹಿಂದೂಸ್ತಾನ್, ಆಜ್ ತಕ್, ದೈನಿಕ್ ಭಾಸ್ಕರ್, ಮತ್ತು ಪತ್ರಿಕಾ ಮುಂತಾದ ಇತರ ಸುದ್ದಿ ಮಾಧ್ಯಮಗಳು ಈ ಘಟನೆಯನ್ನು ವರದಿ ಮಾಡಿವೆ. ವೈರಲ್ ವೀಡಿಯೋದಲ್ಲಿ ತೋರಿಸಿರುವ ಘಟನೆಯು ಆರ್‌ಎಸ್‌ಎಸ್ ಗೆ ಸಂಬಂಧಿಸಿಲ್ಲ ಎಂದು ಈ ವರದಿಗಳು ಸೂಚಿಸುತ್ತವೆ.
ತೀರ್ಪು:
ಈ ಘಟನೆಯು ೨೦೨೩ ರಲ್ಲಿ ಉತ್ತರ ಪ್ರದೇಶದ ಸೀತಾಪುರದ ಸಿಧೌಲಿಯಲ್ಲಿ ಅನುಮತಿಯಿಲ್ಲದೆ ಶಾಲೆಯೊಂದರಲ್ಲಿ ಅರ್ಚಕರ ತರಬೇತಿ ಶಿಬಿರದ ಸಂದರ್ಭದಲ್ಲಿ ನಡೆದ ಘಟನೆಯನ್ನು ವೈರಲ್ ವೀಡಿಯೋದ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ, ಆರ್‌ಎಸ್‌ಎಸ್ ತರಬೇತಿ ಶಿಬಿರಗಳಲ್ಲಿ ಮಕ್ಕಳ ವಿರುದ್ಧ ಕ್ರೌರ್ಯವನ್ನು ಆ ವೈರಲ್ ವೀಡಿಯೋ ತೋರಿಸುತ್ತದೆ ಎಂಬ ಹೇಳಿಕೆಗಳು ತಪ್ಪು.