Begin typing your search above and press return to search.
    ಚುನಾವಣೆ

    ಚುನಾವಣೆ ಸಂದರ್ಭದಲ್ಲಿ Congress ನೀಡಿದ್ದ ಭರವಸೆಗಳ ಬಗ್ಗೆ ರಾಹುಲ್ ಗಾಂಧಿ ಕ್ಷಮೆಯಾಚಿಸಿದ್ದಾರೆ ಎಂಬುದು ಸುಳ್ಳು

    IDTU - Karnataka
    13 Jun 2024 1:27 PM GMT
    ಚುನಾವಣೆ ಸಂದರ್ಭದಲ್ಲಿ Congress ನೀಡಿದ್ದ ಭರವಸೆಗಳ ಬಗ್ಗೆ ರಾಹುಲ್ ಗಾಂಧಿ ಕ್ಷಮೆಯಾಚಿಸಿದ್ದಾರೆ ಎಂಬುದು ಸುಳ್ಳು
    x

    ಚುನಾವಣೆ ಮುಗಿದು ಫಲಿತಾಂಶ ಹೊರಬಂದು NDA ಮಿತ್ರಕೂಟ ಸರ್ಕಾರ ರಚಿಸಿ, ಕೆಲವರಿಗೆ ಮಂತ್ರಿ ಸ್ಥಾನಗಳನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಚುನಾವಣೆಯಲ್ಲಿ ಮತದಾರರನ್ನು ದಾರಿ ತಪ್ಪಿಸುವ ಸುಳ್ಳು ಭರವಸೆಗಳನ್ನು ನೀಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

    X ಪೋಸ್ಟ್‌ನಲ್ಲಿ ಬಳಕೆದಾರರು ಚುನಾವಣಾ ಭರವಸೆಗಳಿಗಾಗಿ ಕಾಂಗ್ರೆಸ್ ನಾಯಕ ಕ್ಷಮೆಯಾಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ಮಾಸಿಕ 8,500 ಮತ್ತು ಯುವಕರಿಗೆ ತಿಂಗಳಿಗೆ 1,00,000 ಸಂಬಳ ನೀಡುವ ಚುನಾವಣಾ ಭರವಸೆ ನೀಡಿದ್ದಕ್ಕೆ ರಾಹುಲ್ ಗಾಂಧಿ ಕ್ಷಮೆಯಾಚಿಸಿದ್ದಾರೆ. ಈ ಸುಳ್ಳುಗಳನ್ನು ಹೇಳಿದ್ದ ಪರಿಣಾಮ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ 99 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಇದು ಚುನಾವಣಾ ವಂಚನೆ ಮತ್ತು ಮತದಾರರನ್ನು ದಾರಿ ತಪ್ಪಿಸುವ ಸುಳ್ಳು ಭರವಸೆಗಳ ಸ್ಪಷ್ಟ ಪ್ರಕರಣವಾಗಿದೆ, ”ಎಂದು X ಬಳಕೆದಾರರು ಆರೋಪ ಮಾಡಿದ್ದಾರೆ. (ಆರ್ಕೈವ್ ಮಾಡಿದ ಲಿಂಕ್‌ ಇಲ್ಲಿ ನೋಡಬಹುದು) ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

    ಫ್ಯಾಕ್ಟ್‌ಚೆಕ್ :

    ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ ಬಳಸಿ ಸರ್ಚ್ ಮಾಡಿದಾಗ, ಚುನಾವಣೆಯಲ್ಲಿ ಕಾಂಗ್ರೆಸ್‌ ನೀಡಿದ್ದ ಭರವಸೆಗಳಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕ್ಷಮೆ ಕೇಳಿದ ಯಾವುದೇ ಸುದ್ದಿ ವರದಿಗಳು ಲಭ್ಯವಾಗಿಲ್ಲ.

    ಇದಲ್ಲದೆ, ಕಾಂಗ್ರೆಸ್ ತಿಂಗಳಿಗೆ 1 ಲಕ್ಷ ರೂಪಾಯಿ ಭರವಸೆ ನೀಡಿದೆ ಎಂಬ ಹೇಳಿಕೆ ಸುಳ್ಳು. ಕಾಂಗ್ರೆಸ್ ನೀಡಿದ ನಿಜವಾದ ಭರವಸೆಗಳೆಂದರೆ ಯುವಕರಿಗೆ ಶಿಷ್ಯವೃತ್ತಿಗಾಗಿ ರೂ 1 ಲಕ್ಷ ಮತ್ತು ಬಡ ಕುಟುಂಬಗಳ ಮಹಿಳಾ ಸದಸ್ಯರಿಗೆ ವಾರ್ಷಿಕ ರೂ 1 ಲಕ್ಷ, ಅಂದರೆ ತಿಂಗಳಿಗೆ ಅಂದಾಜು ರೂ 8,500.

    ವೈರಲ್ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕಾಂಗ್ರೆಸ್ ಪಕ್ಷ (ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್) ಮತ್ತು ರಾಹುಲ್ ಗಾಂಧಿ (ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್) ಎರಡರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಚುನಾವಣಾ ಭರವಸೆಗಳಿಗೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ ಯಾವುದೇ ಟ್ವೀಟ್‌ಗಳು ಲಭ್ಯವಾಗಿಲ್ಲ.

    ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಎಐಸಿಸಿ ಸಂಯೋಜಕರಾಗಿರುವ ಗೌರವ್ ಪಾಂಡಿ ಪ್ರತಿಕ್ರಿಸಿದ್ದು, ಚುನಾವಣಾ ಪೂರ್ವ ಭರವಸೆಗಳಿಗಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸಿದ್ದಾರೆ ಎಂಬ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಎಂದು ಖಚಿತಪಡಿಸಿದ್ದಾರೆ.

    ಯುವ ನ್ಯಾಯ ಯೋಜನೆಯಡಿ ಡಿಪ್ಲೊಮಾ ಮತ್ತು ಪದವಿ ಪಡೆದವರಿಗೆ 1 ಲಕ್ಷ ರೂ.ಗಳ ಶಿಷ್ಯವೇತನ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು ಎಂದು ಸ್ಪಷ್ಟಪಡಿಸಿದರು, ನಾರಿ ನ್ಯಾಯ್ ಯೋಜನೆಯಡಿಯಲ್ಲಿ, ಪ್ರತಿ ಬಡ ಕುಟುಂಬದಲ್ಲಿನ ಹಿರಿಯ ಮಹಿಳೆಗೆ ವಾರ್ಷಿಕ 1 ಲಕ್ಷ ರೂ., ತಿಂಗಳಿಗೆ ಅಂದಾಜು 8,500 ರೂ.

    “ನಾವು ಸರ್ಕಾರ ರಚಿಸಿದ್ದರೆ ನಾವು ಈ ಭರವಸೆಗಳನ್ನು ಈಡೇರಿಸುತ್ತಿದ್ದೆವು. ಈ ಭರವಸೆಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಮತ್ತು ನಾವು ಕೇಂದ್ರದಲ್ಲಿ ಮುಂದಿನ ಸರ್ಕಾರವನ್ನು ರಚಿಸಿದಾಗ ಯುವಕರು ಮತ್ತು ಬಡವರಿಗೆ ಈ ಭರವಸೆಗಳನ್ನು ಈಡೇರಿಸುತ್ತೇವೆ ಇದರ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದ್ದಾರೆ.

    “ಈಗ ನಾವು ವಿರೋಧ ಪಕ್ಷದಲ್ಲಿರುವುದರಿಂದ, ಬಿಜೆಪಿ ಬೆಂಬಲಿಗರು ಅವರ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸಲಿದೆಯೇ ಎಂಬ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಸುಳ್ಳಿನ ಆಧಾರದ ಮೇಲೆ ಅದೇ ನಿರೂಪಣೆ-ಕಸರತ್ತುಗಳು ಬಿಜೆಪಿಗೆ 60 ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುವಂತೆ ಮಾಡಿದೆ. ಅವರು ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವ ಬದಲು ಅವರು ಭರವಸೆ ನೀಡಿದ್ದನ್ನು ಈಡೇರಿಸುವತ್ತ ಗಮನ ಹರಿಸಬೇಕು ಏಕೆಂದರೆ ಈ ಸುಳ್ಳುಗಳು ಮುಂದೆ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

    ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ಚುನಾವಣಾ ಭರವಸೆಗಳ್ನು ನೀಡಿದ್ದರಿಂದ ರಾಹುಲ್ ಗಾಂಧಿ ಕ್ಷಮೆಯಾಚಿಸಿದ್ದಾರೆ ಎಂಬ ಹೇಳಿಕೆ ಸುಳ್ಳು. ಅಂತಹ ಯಾವುದೇ ಹೇಳಿಕೆಯನ್ನು ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್‌ ಪಕ್ಷ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ.

    Claim Review :   Rahul Gandhi has not apologized for poll promises made to youths
    Claimed By :  X user
    Fact Check :  False
    IDTU - Karnataka

    IDTU - Karnataka