Begin typing your search above and press return to search.
    ಉನ್ನತ ಹಕ್ಕು ವಿಮರ್ಶೆ

    ಇಂಡಿಯಾ ಮೈತ್ರಿ ಕೂಟಕ್ಕೆ ಬಹುಮತ ಸಿಗಲಿದೆ ಎಂದು ಬಿಬಿಸಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹೇಳಿಲ್ಲ

    IDTU - Karnataka
    19 May 2024 1:00 PM GMT
    ಇಂಡಿಯಾ ಮೈತ್ರಿ ಕೂಟಕ್ಕೆ ಬಹುಮತ ಸಿಗಲಿದೆ ಎಂದು ಬಿಬಿಸಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹೇಳಿಲ್ಲ
    x

    ಸಾರಾಂಶ :

    ಬಿಬಿಸಿ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಇಂಡಿಯಾ ಮೈತ್ರಿ ಕೂಟ ಭಾರೀ ಬಹುಮತ ಸಾಧಿಸಲಿದೆ ಎಂದು ಹೇಳಲಾಗಿದೆ ಎಂಬ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಬಿಬಿಸಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಇಂಡಿಯಾ ಮೈತ್ರಿಕೂಟ ಭಾರೀ ಬಹುಮತ ಸಾಧಿಸಲಿದೆ ಎಂದು ಹೇಳಲಾಗಿದೆ ಎಂಬುದು ಸುಳ್ಳು. ಇಂತಹ ಯಾವುದೇ ಸಮೀಕ್ಷೆಯನ್ನು ಬಿಬಿಸಿ ನಡೆಸುವುದಿಲ್ಲ ಎಂದು ಬಿಬಿಸಿ ಸ್ಪಷ್ಟಪಡಿಸಿದೆ.

    ಹೇಳಿಕೆ :

    ‘ಲೋಕಸಭಾ ಚುನಾವಣೆಯ 543 ಸ್ಥಾನಗಳ ಪೈಕಿ ಇಂಡಿಯಾ ಮೈತ್ರಿ ಕೂಟ ಬಹುಮತಕ್ಕೆ ಸಮೀಪ ಬರಲಿದೆ ಎಂದು ಹೇಳಲಾಗಿದೆ. ಫೇಸ್‌ಬುಕ್‌ನಲ್ಲಿ ಯೂಟ್ಯೂಬ್ ಲಿಂಕ್ (ಸಂಗ್ರಹ) ಒಂದನ್ನು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು 2024ರ ಲೋಕಸಭಾ ಚುನಾವಣೆಗೆ ಬಿಬಿಸಿ ಸರ್ವೆ ಎಂದು ಬರೆದುಕೊಂಡಿದ್ದಾರೆ.


    ಇನ್ನು ಸೋಶಿಯಲ್ ಮೀಡಿಯಾ ಬಳಕೆದಾರರು ಹಂಚಿಕೊಂಡಿರುವ ಸ್ಕ್ರೀನ್ ಶಾಟ್ ಫೋಟೋದಲ್ಲಿ ಟಿವಿ ಪತ್ರಕರ್ತ ರವೀಶ್ ಕುಮಾರ್ ಅವರ ಫೋಟೋ ಮತ್ತು ಬಿಬಿಸಿ ಇಂಡಿಯಾ ಲೋಗೋ ವನ್ನು ಒಳಗೊಂಡಿದೆ.

    fact bbc body

    ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಪ್ರತಿಪಾದಿಸದಂತೆ ಬಿಬಿಸಿ ಇಂಡಿಯಾ ನಿಜವಾಗಿಯೂ 2024ರ ಲೋಕಸಭಾ ಚುನಾವಣೆಯ (ಚುನಾವಣಾ ಪೂರ್ವ) ಸಮೀಕ್ಷೆಯನ್ನು ನಡೆಸಿದೆಯೇ ಎಂದು ಪರಿಶೀಲಿಸೋಣ.

    ಫ್ಯಾಕ್ಟ್‌ಚೆಕ್ :

    ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ 2024ರ ಲೋಕಸಭಾ ಚುನಾವಣೆ ಸಂಬಂಧ ಬಿಬಿಸಿ ಯಾವುದಾದರೂ ವರದಿ ಮಾಡಿದೆಯೇ ಎಂದು ಸರ್ಚ್ ಮಾಡಿದಾಗಗ, ಅಂತಹ ಯಾವುದೇ ವರದಿ ಲಭ್ಯವಾಗಿಲ್ಲ. ಇನ್ನು ರವೀಶ್ ಕುಮಾರ್ ಅವರ ಯೂಟ್ಯೂಬ್ ಚಾನಲ್‌ನಲ್ಲೂ ಬಿಬಿಸಿ ಚುನಾವಣಾ ಪೂರ್ವ ಸಮೀಕ್ಷೆ ಕುರಿತಾದ ವಿಡಿಯೋ ಲಭ್ಯವಿಲ್ಲ.

    ವೈರಲ್ ಸಮೀಕ್ಷೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಮಾಡಿದಾಗ, ‘ಬಿಬಿಸಿ ಹೆಸರಲ್ಲಿ ವೈರಲ್ ಆಗಿರುವ ಸರ್ವೆ ಕುರಿತ ವಾಸ್ತವೇನು? ಎಂಬ ಮಾಹಿತಿ ಲಭ್ಯವಾಯಿತು. ಈ ವರದಿಯಲ್ಲಿ ಬಿಬಿಸಿ ತಾವು ಆ ರೀತಿಯ ಯಾವುದೇ ಚುನಾವಣಾ ಸರ್ವೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ನಾವು ಯಾವುದೇ ರೀತಿಯ ಚುನಾವಣಾ ಸರ್ವೆ ನಡೆಸಿಲ್ಲ. ಇದು ಬಿಬಿಸಿ ಹೆಸರಲ್ಲಿ ಹರಡಿರುವ ಸುಳ್ಳು ಸುದ್ದಿ ಎಂದು ನಾವು ಖಚಿತಪಡಿಸುತ್ತಿದ್ದೇವೆ’ ಎಂದು ಬಿಬಿಸಿ ಈ ವರದಿಯಲ್ಲಿ ಮಾಹಿತಿ ನೀಡಿದೆ.

    ಬಿಬಿಸಿಯು ಯಾವುದೇ ರೀತಿಯ ಚುನಾವಣಾ ಪೂರ್ವ ಸಮೀಕ್ಷೆ ಮಾಡುವುದಿಲ್ಲ ಇದನ್ನು ನಾವು ಹಲವು ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದೇವೆ. ಅಷ್ಟೇ ಅಲ್ಲ ನಾವು ಜನಾಭಿಪ್ರಾಯ ಸಂಗ್ರಹ ಅಥವಾ ಮತಗಟ್ಟೆ ಸಮೀಕ್ಷೆ ಕೂಡಾ ನಡೆಸೋದಿಲ್ಲ. ಈ ಬಾರಿಯೂ ನಾವು ಆ ರೀತಿಯ ಯಾವುದೇ ಸಮೀಕ್ಷೆ ನಡೆಸಿಲ್ಲ’ ಎಂದು ಬಿಬಿಸಿ ಹೇಳಿದೆ.

    ಕಲೆಕ್ಟೀವ್ ನ್ಯೂಸ ರೂಂನ ಸಹ ಸಂಸ್ಥಾಪಕರು ಹಾಗೂ ಸಿಇಒ ಆಗಿರುವ ರೂಪಾ ಝಾ ಅವರು ತಮ್ಮ ಪರಿಶೀಲಿಸಿದ ಎಕ್ಸ್‌ ಖಾತೆಯಲ್ಲಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ಬಿಬಿಸಿ ನ್ಯೂಸ್ ಭಾರತೀಯ ಭಾಷೆಗಳ ಪ್ರಕಾಶಕರೂ ಆಗಿರುವ ಅವರು, ಇದೊಂದು ನಕಲಿ ಸರ್ವೆ ಎಂದು ಖಚಿತಪಡಿಸಿದ್ದಾರೆ. ‘ಇದೊಂದು ನಕಲಿ ಸರ್ವೆ, ಬಿಬಿಸಿ ಆ ರೀತಿಯ ಯಾವುದೇ ಸರ್ವೆ ನಡೆಸಿಲ್ಲ, ನಡೆಸೋದಿಲ್ಲ’ ಎಂದು ಅವರು ಹೇಳಿದ್ದಾರೆ.

    ತೀರ್ಪು :

    ಒಟ್ಟಾರೆಯಾಗಿ ಹೇಳುವುದಾದರೆ, ಬಿಬಿಸಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಇಂಡಿಯಾ ಮೈತ್ರಿಕೂಟ ಭಾರೀ ಬಹುಮತ ಸಾಧಿಸಲಿದೆ ಎಂದು ಹೇಳಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಹಂಚಿಕೊಂಡಿರುವುದು ಸ್ಪಷ್ಟವಾಗಿದೆ. ಇಂತಹ ಯಾವುದೇ ಸಮೀಕ್ಷೆಯನ್ನು ಬಿಬಿಸಿ ನಡೆಸುವುದಿಲ್ಲ ಎಂಬುದನ್ನು ಬಿಬಿಸಿ ಸ್ಪಷ್ಟಪಡಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು.


    Claim Review :   The BBC pre-election poll did not say that the India Alliance would get a majority
    Claimed By :  Facebook User
    Fact Check :  Fake
    IDTU - Karnataka

    IDTU - Karnataka