Begin typing your search above and press return to search.
    ಉನ್ನತ ಹಕ್ಕು ವಿಮರ್ಶೆ

    ವೈರಲ್ ಆಗಿರುವ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ರಾಜೀನಾಮೆ ಪತ್ರ ನಕಲಿ

    IDTU - Karnataka
    6 Jun 2024 12:10 PM GMT
    ವೈರಲ್ ಆಗಿರುವ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ರಾಜೀನಾಮೆ ಪತ್ರ ನಕಲಿ
    x

    ಸಾರಾಂಶ:

    ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ರಾಜೀನಾಮೆ ಪತ್ರವನ್ನು ತೋರಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ವೈರಲ್ ಪತ್ರವು ನಕಲಿಯಾಗಿದ್ದು, ಸುದ್ದಿ ವರದಿಗಳು ಇದನ್ನು ಖಚಿತಪಡಿಸಲು ಶಾಸಕ ಮತ್ತು ಸ್ಪೀಕರ್ ಕಚೇರಿಯ ಆಪ್ತ ಮೂಲಗಳನ್ನು ಉಲ್ಲೇಖಿಸಿವೆ.

    ಹೇಳಿಕೆ:

    ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ರಾಜೀನಾಮೆ ಪತ್ರವನ್ನು ತೋರಿಸಲು ವಾಟ್ಸಾಪ್‌ನಲ್ಲಿ ಚಿತ್ರವೊಂದು ವೈರಲ್ ಆಗಿದೆ. ಈ ಉದ್ದೇಶಿತ ಪತ್ರವನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆದ ಯು.ಟಿ. ಖಾದರ್ ಅವರಿಗೆ ಬರೆದಿರುವುದಾಗಿ ತೋರಿಸುತ್ತದೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಂಡ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಬಿಜೆಪಿಗೆ ಇನ್ನೂ ಒಂದು ಎಂಎಲ್‌ಎ ಸ್ಥಾನ ಸಿಗುತ್ತದೆ…😂😂😂😂😂😂😂😂😂ಕಾಂಗ್ ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ಸಂಸದ ಅಭ್ಯರ್ಥಿ @DrSudhakar_ ಅವರು ೧ ಮತ ಹೆಚ್ಚಾಗಿ ಪಡೆದರೂ ಕೂಡ ಅವರು ಹೇಳಿದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಚಿಕ್ಕಬಳ್ಳಾಪುರದಲ್ಲಿ 🔥🔥🔥೧೬೩ ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ (ಅನುವಾದಿಸಲಾಗಿದೆ)." ಇದು ಪ್ರದೀಪ್ ಈಶ್ವರ್ ಅವರು ಸಚಿವ ಸ್ಥಾನದಿಂದ ರಾಜೀನಾಮೆ ನೀಡಿದ್ದಾರೆ ಎಂದು ಸೂಚಿಸುತ್ತದೆ.

    ಎಕ್ಸ್ ನಲ್ಲಿ ಹಂಚಿಕೊಂಡ ವೈರಲ್ ಚಿತ್ರದ ಸ್ಕ್ರೀನ್‌ಶಾಟ್.


    ಹಲವಾರು ಮಂದಿ ಇದೇ ಪತ್ರವನ್ನು ಫೇಸ್‌ಬುಕ್‌ನಲ್ಲಿ ಕೂಡ ಹಂಚಿಕೊಂಡಿದ್ದಾರೆ.

    ಪುರಾವೆ:

    ಪ್ರದೀಪ್ ಈಶ್ವರ್ ಅವರ ರಾಜೀನಾಮೆಯನ್ನು ಖಚಿತಪಡಿಸುವ ಸುದ್ದಿ ವರದಿಗಳನ್ನು ಹುಡುಕಿದಾಗ ನಮಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಕರ್ನಾಟಕದ ಕಾಂಗ್ರೆಸ್‌ನ ಯಾವುದೇ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳು ಪ್ರದೀಪ್ ಈಶ್ವರ್ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿಕೊಂಡಿಲ್ಲ. "ವೈರಲ್ ಲೆಟರ್," "ರಾಜೀನಾಮೆ," ಮತ್ತು "ಶಾಸಕ ಪ್ರದೀಪ್ ಈಶ್ವರ್" ನಂತಹ ಪದಗಳನ್ನು ಬಳಸಿಕೊಂಡು ನಡೆಸಿದ ಮತ್ತಷ್ಟು ಕೀವರ್ಡ್ ಹುಡುಕಾಟವು, ಕರ್ನಾಟಕ ಮೂಲದ ಸುದ್ದಿ ಮಾಧ್ಯಮವಾದ ಉದಯವಾಣಿಯ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ಯಿತು.

    ವೈರಲ್ ಪತ್ರವು ನಕಲಿ ಎಂದು ಖಚಿತಪಡಿಸುವ ಜೂನ್ ೬, ೨೦೨೪ ರ ಉದಯವಾಣಿ ಸುದ್ದಿ ವರದಿಯ ಸ್ಕ್ರೀನ್‌ಶಾಟ್.


    ‘ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಅವರ ನಕಲಿ ರಾಜೀನಾಮೆ ಪತ್ರ ವೈರಲ್‌’ ಎಂಬ ಹೆಡಿಂಗ್ ನೊಂದಿಗೆ ಉದಯವಾಣಿ ಸುದ್ದಿ ವರದಿಯೊಂದನ್ನು ಪ್ರಕಟಿಸಿತ್ತು. ಈ ಸುದ್ದಿ ವರದಿಯು ಶಾಸಕ ಮತ್ತು ಸ್ಪೀಕರ್ ಕಚೇರಿಗೆ ನಿಕಟವಾಗಿರುವ ಕೆಲವು ಮೂಲಗಳನ್ನು ಉಲ್ಲೇಖಿಸಿ ಈ ವೈರಲ್ ಪತ್ರ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ, ಎಂದು ಹೇಳಿಕೊಂಡಿದೆ. ೨೦೨೪ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಪ್ರದೀಪ್ ಈಶ್ವರ್ ಅವರು ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಅವರು ಕಾಂಗ್ರೆಸ್ ಅಭ್ಯರ್ಥಿಗಿಂತ ಒಂದು ಮತ ಕೂಡ ಹೆಚ್ಚು ಪಡೆದರೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದ್ದರು.

    ಅದೇ ರೀತಿ, ಜೂನ್ ೫, ೨೦೨೪ ರಂದು ನ್ಯೂಸ್ ಕರ್ನಾಟಕ ಪ್ರಕಟಿಸಿದ ಮತ್ತೊಂದು ಸುದ್ದಿ ವರದಿಯನ್ನು ನಾವು ನೋಡಿದ್ದೇವೆ. ಈ ವರದಿಯು "ರಾಜಕೀಯ ಒತ್ತಡದ ನಡುವೆ ರಾಜೀನಾಮೆಯ ಹೇಳಿಕೆಗಳನ್ನು ಶಾಸಕ ಪ್ರದೀಪ್ ಈಶ್ವರ್ ನಿರಾಕರಿಸಿದ್ದಾರೆ" ಎಂಬ ಹೆಡಿಂಗ್ ಹೊಂದಿದೆ. ಈ ವರದಿಯ ಪ್ರಕಾರ, ಪತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಚಿಕ್ಕಬಳ್ಳಾಪುರ ಶಾಸಕರು ತಮ್ಮ ರಾಜೀನಾಮೆಯ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಡಾ. ಸುಧಾಕರ್ ಗೆದ್ದ ನಂತರ, ಹಲವಾರು ಬಿಜೆಪಿ ನಾಯಕರು ಪ್ರದೀಪ್ ಈಶ್ವರ್ ಅವರ ರಾಜೀನಾಮೆಗೆ ಒತ್ತಾಯಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಾ. ಸುಧಾಕರ್ ಸವಾಲನ್ನು ಸ್ವೀಕರಿಸದ ಕಾರಣ ಶಾಸಕರು ತಮ್ಮ ರಾಜೀನಾಮೆಯನ್ನು ನೀಡಿಲ್ಲ ಮತ್ತು ಅವರ ರಾಜಿನಾಮೆಗೆ ಒತ್ತಾಯಿಸುವುದರ ಹಿಂದಿನ ತಾರ್ಕಿಕತೆಯನ್ನು ಸಹ ಪ್ರಶ್ನಿಸಿದ್ದಾರೆ ಎಂದು ಶಾಸಕರು ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಜೂನ್ ೫, ೨೦೨೪ ರ ನ್ಯೂಸ್ ಕರ್ನಾಟಕ ವರದಿಯ ಸ್ಕ್ರೀನ್‌ಶಾಟ್.


    ಜೂನ್ ೪, ೨೦೨೪ ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಾಗಿನಿಂದ ಡಾ.ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿರುವ ವೀಡಿಯೋ ವೈರಲ್ ಆಗಿದೆ. ಪ್ರದೀಪ್ ಈಶ್ವರ್ ಅವರ ಮನೆ ಮೇಲೆ ಕಲ್ಲು ತೂರಾಟದ ವರದಿಗಳು ಕೂಡ ಈ ಹಿನ್ನಲೆಯಲ್ಲಿ ಬಂದಿವೆ. ಪ್ರದೀಪ್ ಈಶ್ವರ್ ರಾಜೀನಾಮೆ ನೀಡಿರುವುದನ್ನು ರಾಜ್ಯದ ಯಾವುದೇ ಕಾಂಗ್ರೆಸ್ ನಾಯಕರು ಖಚಿತಪಡಿಸಿಲ್ಲ.

    ತೀರ್ಪು:

    ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಬರೆದಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ರಾಜೀನಾಮೆ ಪತ್ರವನ್ನು ತೋರಿಸುವುದಾಗಿ ಹೇಳಿರುವ ವೈರಲ್ ಪತ್ರ ನಕಲಿ. ಶಾಸಕ ಮತ್ತು ಸ್ಪೀಕರ್ ಕಚೇರಿಯ ಆಪ್ತ ಮೂಲಗಳು ಇದು ನಕಲಿಯೆಂದು ಖಚಿತಪಡಿಸಿವೆ ಎಂದು ಮಾಧ್ಯಮಗಳು ಗಮನಿಸಿವೆ. ಇದಲ್ಲದೆ, ಅವರ ರಾಜೀನಾಮೆ ಬಗ್ಗೆ ಶಾಸಕ ಅಥವಾ ಅವರ ಪಕ್ಷದ ಅಧಿಕಾರಿಗಳಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.


    Claim Review :   Viral resignation letter of Chikkaballapur MLA Pradeep Eshwar is fake
    Claimed By :  X user
    Fact Check :  Fake
    IDTU - Karnataka

    IDTU - Karnataka