‘ಅರವಿಂದ್ ಕೇಜ್ರಿವಾಲ್ ಮೇಲೆ ಹಲ್ಲೆ’ ಎಂದು 2019ರ ವಿಡಿಯೋ ವೈರಲ್

Update: 2024-05-19 10:20 GMT


ಸಾರಾಂಶ :

ಅರವಿಂದ್ ಕೇಜ್ರಿವಾಲ್ ಅವರು ರೋಡ್ ಶೋ ನಡೆಸುತ್ತಿರುವಾಗ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾರೆ” ಎಂಬ ಪೋಸ್ಟ್‌ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಘಟನೆ ಇತ್ತೀಚಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದ್ದು ಎಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಪ್ರಕರಣ 2019ರಲ್ಲಿ ನಡೆದಿತ್ತು.ಈ ದಾಳಿಗೂ 2024ರ ಲೋಕಸಭೆ ಚುನಾವಣೆಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಈ ವಿಡಿಯೋ ತಪ್ಪುದಾರಿಗೆಳೆಯುತ್ತದೆ.

ಹೇಳಿಕೆ :

ರೋಡ್ ಶೋ ವೇಳೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ ವ್ಯಕ್ತಿಯೊಬ್ಬರು ಕಪಾಳಮೋಕ್ಷ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಸಿಎಂ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ 2024 ರ ಚುನಾವಣೆಯ ಸಮಯದಲ್ಲಿ ಪಕ್ಷದ ಪ್ರಚಾರದ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಆಕ್ರೈವ್ ಮಾಡಲಾದ ಲಿಂಕ್ ಅನ್ನು ಇಲ್ಲಿ ನೋಡಬಹುದು.

 ಬಳಕೆದಾರರೊಬ್ಬರು ಮೇ 11, 2024 ರಂದು ವಿಡಿಯೋ ಒಂದನ್ನು ಪೋಸ್ಟ್‌ ಮಾಡಿದ್ದು, ಪ್ರಸಕ್ತ ನಡೆಯುತ್ತಿರುವ ಚುನಾವಣೆಗಳಿಗೆ ಲಿಂಕ್ ಮಾಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂಧು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕೀ ಪ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 4 ಮೇ 2019 ರಂದು ಹಿಂದುಸ್ತಾನ್ ಟೈಮ್ಸ್ ಸುದ್ದಿ ಮಾಧ್ಯಮದ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋವೊಂದು ಲಭ್ಯವಾಗಿದೆ. ಈ ವಿಡಿಯೋದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಮೋಟಿ ನಗರದ ರೋಡ್ ಶೋನಲ್ಲಿ ಕಪಾಳ ಮೋಕ್ಷಕ್ಕೆ ಒಳಗಾದರು ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಇದಲ್ಲದೆ,  ಮೇ 5, 2019 ರಂದು NDTV ಯಲ್ಲಿ ಪ್ರಕಟಗೊಂಡ 'ದೆಹಲಿಯಲ್ಲಿ ರೋಡ್‌ಶೋ ಸಮಯದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಕಪಾಳಮೋಕ್ಷವಾಯಿತು, ಪ್ರಕರಣ ಸಂಬಂಧ AAP ಬಿಜೆಪಿಯನ್ನು ದೂಷಿಸಿದೆ' ಎಂಬ ಶೀರ್ಷಿಕೆಯ ವರದಿ ಲಭ್ಯವಾಗಿದೆ.

ಆಮ್ ಆದ್ಮಿ ಪಕ್ಷದ ಮುಖ್ಯಸ್ಥರಾದ ಕೇಜ್ರಿವಾಲ್  ನ್ಯೂ ಡೆಲ್ಲಿ ಲೋಕಸಭಾ ಕ್ಷೇತ್ರದಲ್ಲಿ, ತೆರೆದ ಜೀಪಿನಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಅರವಿಂದ್ ಕೆಜ್ರಿವಾಲ್ ಅವರ ಮೇಲೆ ದಾಳಿ ನಡೆಸಿದ್ದಾನೆ. ಈತ 33 ವರ್ಷದ ಸುರೇಶ್ ಎಂದು ಮಾಹಿತಿ ಲಭ್ಯವಾಗಿದೆ. ಈತ ವಾಹನದ ಬಿಡಿ ಭಾಗಗಳನ್ನು ಮಾರಾಟ ಮಾಡುವವನು ಎಂಬುದು ತಿಳಿದು ಬಂದಿದ್ದು, ಈತ ಬಿಜೆಪಿಯ ಬೆಂಬಲಿಗ ಎಂದು ಹೇಳಲಾಗಿದೆ.” ಎಂದು  NDTV  ವರದಿ ಮಾಡಿದೆ.

ಮೇ 10, 2019 ರಂದು,  Deccan chronicle ವರದಿಯಲ್ಲಿ ಕೇಜ್ರಿವಾಲ್‌ ಮೇಲೆ ಹಲ್ಲೆ ನಡೆಸಿದ ಸುರೇಶ್ ಎಂಬ ವ್ಯಕ್ತಿ ತನ್ನ ಕೃತ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿ ತಾನು ಮುಖ್ಯಮಂತ್ರಿಯ ಮೇಲೆ ಏಕೆ ದಾಳಿದೆ ಎಂಬುದೆ ನನಗೆ ಅರ್ತವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇದೇ ವರದಿಯನ್ನು ಇಂಡಿಯಾ ಟುಡೆ,  ದ ಇಂಡಿಯನ್ ಎಕ್ಸ್‌ಪ್ರೆಸ್‌, ಬಿಜಿ಼ನೆಸ್‌ ಸ್ಟ್ಯಾಂಡರ್ಡ್, ಫಸ್ಟ್ ಪೋಸ್ಟ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಮಾಧ್ಯಮಗಳು ಕೂಡ ಪ್ರಕಟಿಸಿದೆ. ಈ ವರದಿಯಲ್ಲೂ NDTV ಯಲ್ಲಿ ಉಲ್ಲೇಖಿಸಿದ ಅಂಶಗಳನ್ನೆ ಹಂಚಿಕೊಳ್ಳಲಾಗಿದ್ದು, ಈ ಘಟನೆಯೂ 2019ರಂದು ಎಂಬುದು ಕೂಡ ಈ ವರದಿಗಳಿಂದ ಸ್ಪಷ್ಟವಾಗಿದೆ.

ತೀರ್ಪು :

ಒಟ್ಟಾರೆಯಾಗಿ ಹೇಳುವುದಾದರೆ, ಕೇಜ್ರಿವಾಲ್‌ಗೆ ವ್ಯಕ್ತಿಯೊಬ್ಬ ಹಲ್ಲೆ ಮಾಡುತ್ತಿರುವ ವಿಡಿಯೋ  5 ವರ್ಷಗಳಷ್ಟು ಹಳೆಯದಾಗಿದೆ. 2024 ರ ಲೋಕಸಭೆ ಚುನಾವಣೆಯ ಕೇಜ್ರಿವಾಲ್ ಅವರ ಪ್ರಚಾರಕ್ಕೂವೈರಲ್ ವಿಡಿಯೋಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


Claim :  Arvind Kejriwal slapped by BJP supporter is not from 2024 election campaign
Claimed By :  X user
Fact Check :  Misleading
Tags:    

Similar News