ಇಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಪಟಾನ್‌ನಲ್ಲಿ ತಮ್ಮ ಭಾಷಣದ ವೇಳೆ ಕೆಟ್ಟಮಾತು ಬಳಸಿಲ್ಲ
ಸಾರಾಂಶ:
ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಗುಜರಾತ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ನಿಂದನೀಯ ಭಾಷೆಯನ್ನು ಬಳಸಿದ್ದಾರೆ ಎಂದು ಹೇಳುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ವೈರಲ್ ವೀಡಿಯೋವು ಏಪ್ರಿಲ್ ೨೧, ೨೦೧೯ ರಂದು ಗುಜರಾತ್‌ನ ಪಟಾನ್‌ನಲ್ಲಿ ಪ್ರಧಾನ ಮಂತ್ರಿಯವರ ಭಾಷಣವನ್ನು ತೋರಿಸುತ್ತದೆ, ಅಲ್ಲಿ ಯಾವುದೇ ಅನುಚಿತ ಪದಗಳನ್ನು ಬಳಸಲಾಗಿಲ್ಲ. ಆದ್ದರಿಂದ ಈ ವೈರಲ್ ಹೇಳಿಕೆ ತಪ್ಪು.
ಹೇಳಿಕೆ:
ಗುಜರಾತ್‌ನಲ್ಲಿ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಅನುಚಿತ ಪದವನ್ನು ಬಳಸಿದ್ದಾರೆ ಎಂದು ಆರೋಪಿಸುವುದಕ್ಕಾಗಿ ಎಕ್ಸ್ ಬಳಕೆದಾರರು ವೀಡಿಯೋವನ್ನು ಮೇ ೨೪, ೨೦೨೪ ರಂದು ಹಂಚಿಕೊಂಡಿದ್ದಾರೆ. ಅದರ ಹಿಂದಿ ಶೀರ್ಷಿಕೆ ಹೀಗಿದೆ - "ದೇವರು ಕಳುಹಿಸಿದ ಈ 'ಮನವರಿಕೆ' ಪ್ರತಿನಿಧಿಯು ಉದ್ದೇಶಪೂರ್ವಕವಾಗಿ ವೇದಿಕೆಯಿಂದ ಅಂತಹ ಯೋಗ್ಯ ಭಾಷೆಯನ್ನು ಮಾತನಾಡುತ್ತಾರೆಯೇ ಅಥವಾ ಇದು ಕೇವಲ ಕಾಕತಾಳೀಯವೇ?" (ಅನುವಾದಿಸಲಾಗಿದೆ). ವೀಡಿಯೋದೊಳಗಿನ ಪಠ್ಯವು ಹೀಗಿದೆ - "ಮೋದಿ ಅವರು ರ್‍ಯಾಲಿಯಲ್ಲಿ 'BC' ಎಂದು ಹೇಳಿದರು" (ಅನುವಾದಿಸಲಾಗಿದೆ).
ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ನಿಂದನೀಯ ಪದವನ್ನು ಬಳಸುವುದನ್ನು ತೋರಿಸುತ್ತದೆ ಎಂದು ಎಕ್ಸ್‌ನಲ್ಲಿ ಹಂಚಿಕೊಂಡಿರುವ ವೀಡಿಯೋದ ಸ್ಕ್ರೀನ್‌ಶಾಟ್.
೨೦೧೯ ರಲ್ಲಿ ಇದೇ ವೀಡಿಯೋವನ್ನು ವ್ಯಾಪಕವಾಗಿ ಪ್ರಸಾರ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ನಾವು ವೈರಲ್ ವೀಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ಇದು ಗುಜರಾತ್‌ನ ಪಟಾನ್‌ನಲ್ಲಿ ಪ್ರಧಾನಿ ಮೋದಿಯವರ ಭಾಷಣದ ಕ್ಲಿಪ್ ಮಾಡಿದ ಸ್ಕ್ರೀನ್ ರೆಕಾರ್ಡಿಂಗ್ ಎಂದು ಕಂಡುಬಂದಿದೆ, ಇದನ್ನು ದಿ ಕ್ವಿಂಟ್ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ. ವೀಡಿಯೋದ ಶೀರ್ಷಿಕೆಯು, "ಪಿಎಂ ಮೋದಿ ಗುಜರಾತ್‌ನ ಪಟಾನ್‌ನಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ" (ಅನುವಾದಿಸಲಾಗಿದೆ) ಎಂದು ಹೇಳುತ್ತದೆ. ನಾವು ಏಪ್ರಿಲ್ ೨೧, ೨೦೧೯ ರಿಂದ ದಿ ಕ್ವಿಂಟ್‌ನ ಯೂಟ್ಯೂಬ್ ಚಾನೆಲ್‌ಗೆ ನಮ್ಮನ್ನು ಕರೆದೊಯ್ದ "ಪಿಎಂ ಮೋದಿ ಗುಜರಾತ್‌ನ ಪಟಾನ್‌ನಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ" ಮತ್ತು "ದಿ ಕ್ವಿಂಟ್" ನಂತಹ ಕೀವರ್ಡ್‌ಗಳನ್ನು ಬಳಸಿದ್ದೇವೆ. ಭಾರತೀಯ ಜನತಾ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್ ಸಹ ಏಪ್ರಿಲ್ ೨೧, ೨೦೧೯ ರಂದು ಪಟಾನ್‌ನಲ್ಲಿ ಪ್ರಧಾನಿ ಮೋದಿಯವರು ನೀಡಿದ ಭಾಷಣವನ್ನು ಹಂಚಿಕೊಂಡಿದೆ.
ಏಪ್ರಿಲ್ ೨೧, ೨೦೧೯ ರ ಬಿಜೆಪಿಯ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಯೂಟ್ಯೂಬ್ ವೀಡಿಯೋದ ೪೯:೦೭ ನಿಮಿಷಗಳ ಅವಧಿಯಲ್ಲಿ, ಪ್ರಧಾನಿ ಗುಜರಾತಿಯಲ್ಲಿ ಹೇಳುತ್ತಾರೆ, “ಭವಿಷ್ಯದಲ್ಲಿ ನಾವು ನೀರಿನ ಮೇಲೆ ಯುದ್ಧ ಮಾಡುತ್ತೇವೆ ಎಂದು ಜನರು ಹೇಳುತ್ತಾರೆ. ನೀರಿನ ಯುದ್ಧಗಳು ನಡೆಯುತ್ತವೆ ಎಂದು ಎಲ್ಲರೂ ಹೇಳಿದರೆ, ನಾವು ಈಗಲೇ ಏಕೆ ಅಣೆಕಟ್ಟುಗಳನ್ನು ನಿರ್ಮಿಸಬಾರದು?” (ಅನುವಾದಿಸಲಾಗಿದೆ). ವೈರಲ್ ವೀಡಿಯೋದ ೦:೧೩ ನಿಮಿಷಗಳ ಅವಧಿಯಲ್ಲಿ, ಪ್ರಧಾನ ಮಂತ್ರಿಯವರು ಗುಜರಾತಿ ನುಡಿಗಟ್ಟು "ತವಾನಿ ಚೆ" (ಇದರ ಅರ್ಥ "ಘಟಿಸುತ್ತದೆ") ಅನ್ನು ಮತ್ತೆ ಮತ್ತೆ ಕೇಳಿಬರುವಂತೆ ಮಾಡಲಾಗಿದೆ, ಅದನ್ನು ಅವರು ನಿಂದನೀಯ ಪದವನ್ನು ಬಳಸುತ್ತಿದ್ದಾರೆ ಎಂದು ತಪ್ಪಾಗಿ ಅರ್ಥೈಸಲಾಗಿದೆ.
ತೀರ್ಪು:
೨೦೧೯ ರ ಗುಜರಾತ್‌ನ ಪಟಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ವೀಡಿಯೋದಲ್ಲಿ ಗುಜರಾತಿ ಪದವೊಂದನ್ನು ಪುನರಾವರ್ತಿಸಲಾಗಿ ಅದು ಅನುಚಿತ ಪದವೆಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ವೈರಲ್ ವೀಡಿಯೋದ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ, ಈ ಹೇಳಿಕೆ ತಪ್ಪು.