ಕ್ಲಿಪ್ ಮಡಿದ ವೀಡಿಯೋವನ್ನು ಮಲ್ಲಿಕಾರ್ಜುನ ಖರ್ಗೆ ಅವರು 'ಕಾಂಗ್ರೆಸ್ ಮುಗಿದಿದೆ' ಎಂದು ಹೇಳಿದ್ದಾರೆಂದು ಹಂಚಿಕೊಳ್ಳಲಾಗಿದೆ
ಸಾರಾಂಶ:
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿರುವ ವೀಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲಾಗಿದೆ ಮತ್ತು ಇನ್ನು ಮುಂದೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ ಎಂಬ ಹೇಳಿಕೆಯನ್ನು ಹಂಚಿಕೊಳ್ಳಲಾಗಿದೆ. ಆದರೆ, ಮೇ ೩, ೨೦೨೪ ರಂದು ಅಹಮದಾಬಾದ್‌ನಲ್ಲಿ ಮಾಡಿದ ತಮ್ಮ ಮೂಲ ಭಾಷಣದಲ್ಲಿ ಕಾಂಗ್ರೆಸ್ "ಮುಗಿದಿದೆ" ಎಂದು ಪ್ರತಿಪಾದಿಸಿದ ಗುಜರಾತ್‌ನ ರಾಜಕೀಯ ನಾಯಕರನ್ನು ಖರ್ಗೆ ಉಲ್ಲೇಖಿಸುತ್ತಿದ್ದರು. ಈ ಸಂದರ್ಭದ ಕೊರತೆಯು ಹೇಳಿಕೆಯು ತಪ್ಪುದಾರಿಗೆಳೆಯುವಂತೆ ಮಾಡುತ್ತದೆ.
ಹೇಳಿಕೆ:
ಎಕ್ಸ್ (ಹಿಂದಿನ ಟ್ವಿಟರ್) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಷ್ಟ್ ಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿಯಲ್ಲಿ "ಕಾಂಗ್ರೆಸ್ ಮುಗಿದಿದೆ, ಕಾಂಗ್ರೆಸ್ ಸತ್ತಿದೆ, ಮತ್ತು ಈಗ ನೀವು ಕಾಂಗ್ರೆಸ್ ಅನ್ನು ಎಲ್ಲಿಯೂ ನೋಡುವುದಿಲ್ಲ" (ಅನುವಾದಿಸಲಾಗಿದೆ) ಎಂದು ಹೇಳುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಕ್ಲಿಪ್ ಜೊತೆಗೆ ಹಂಚಿಕೊಂಡಿರುವ ಶೀರ್ಷಿಕೆಗಳು ಕಾಂಗ್ರೆಸ್ ನ ಅಂತ್ಯಕ್ರಿಯೆಯ ಸಮಯ ಬಂದಿದೆ ಎಂದು ಹೇಳುತ್ತವೆ.
ಮೇ ೧೪, ೨೦೨೪ ರಂದು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್.
ಪುರಾವೆ:
ನಾವು ಕೀವರ್ಡ್ ಸರ್ಚ್ ನಡೆಸಿದ್ದೇವೆ ಮತ್ತು ಗುಜರಾತ್‌ನ ಅಹಮದಾಬಾದ್‌ನಲ್ಲಿ ಖರ್ಗೆಯವರ ಮೂಲ ಭಾಷಣವನ್ನು ಮೇ ೩, ೨೦೨೪ ರಂದು ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಲೈವ್-ಸ್ಟ್ರೀಮ್ ಮಾಡಲಾಗಿದೆ ಎಂದು ಕಂಡುಕೊಂಡಿದ್ದೇವೆ.
ಮೇ ೩, ೨೦೨೪ ರಂದು ಯೂಟ್ಯೂಬ್ ನಲ್ಲಿ ಲೈವ್-ಸ್ಟ್ರೀಮ್ ಮಾಡಲಾದ ಅಹಮದಾಬಾದ್ ನಲ್ಲಿ ಖರ್ಗೆಯವರು ಮಡಿದ ಮೂಲ ಭಾಷಣದ ಸ್ಕ್ರೀನ್‌ಶಾಟ್.
ಯೂಟ್ಯೂಬ್ ವೀಡಿಯೋ ದ ೧೨:೦೨ ನಿಮಿಷದ ಅವಧಿಯಿಂದ ಪ್ರಾರಂಭಿಸಿ, ಖರ್ಗೆ ಹೀಗೆ ಹೇಳುತ್ತಾರೆ, “ಅಹಮದಾಬಾದ್ ಅಷ್ಟು ದೊಡ್ಡ ಮತ್ತು ಪ್ರಸಿದ್ಧ ನಗರವಾಗಿದೆ. ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್, ದಾದಾಭಾಯಿ ನೌರೋಜಿ ಮತ್ತು ಇತರ ಅನೇಕ ಮಹಾನ್ ನಾಯಕರು ಇಲ್ಲಿ ಜನಿಸಿದರು ಮತ್ತು ಅವರು ಗುಜರಾತ್‌ನ ಹಿರಿಮೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಗಾಂಧೀಜಿ, ಸರ್ದಾರ್ ಪಟೇಲರಿಂದ ಹಿಡಿದು ಭೂಲಾಭಾಯಿ ದೇಸಾಯಿ, ವಿಠಲಭಾಯ್ ಪಟೇಲ್, ಮತ್ತು ನಮ್ಮ ಲೋಕಸಭೆಯ ಸ್ಪೀಕರ್ ಮಾವಲಂಕರ್ ಅವರಂತಹ ಈ ಎಲ್ಲಾ ಗಮನಾರ್ಹ ನಾಯಕರು ನಮ್ಮ ದೇಶವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಲ್ಲಿ, ಮೂವರು ವ್ಯಕ್ತಿಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದಾರೆ - ಸರ್ದಾರ್ ಪಟೇಲ್, ಮಹಾತ್ಮ ಗಾಂಧಿ ಮತ್ತು ಯುಎನ್ ಧೇಬರ್. ಅವರು ಈ ಪಾತ್ರವನ್ನು ಅಲಂಕರಿಸಿದರು ಮತ್ತು ನಮ್ಮ ಪಕ್ಷವನ್ನು ಬಲಪಡಿಸಿದರು” (ಅನುವಾದಿಸಲಾಗಿದೆ).
ನಂತರ ಅವರು ಮುಂದುವರೆದು, "ಹಾಗಾದರೆ, ಇದು ಕಾಂಗ್ರೆಸ್ ಪಕ್ಷದ ಅಡಿಪಾಯ ಎಂದು ನಾನು ಹೇಳಲು ಬಯಸುತ್ತೇನೆ, ಅಹಮದಾಬಾದ್‌ನಲ್ಲಿ ಆ ಅಡಿಪಾಯ ತುಂಬಾ ಪ್ರಬಲವಾಗಿದೆ, ಅದನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ನಾವು ಕಾಂಗ್ರೆಸ್ ಅನ್ನು ಮುಗಿಸುತ್ತೇವೆ ಎಂದು ಹೇಳಲು ಯಾರಿಗೂ ಧೈರ್ಯವಿಲ್ಲ. ಕಾಂಗ್ರೆಸ್ ಮುಗಿದುಹೋಗಿದೆ, ಕಾಂಗ್ರೆಸ್ ಸತ್ತುಹೋಗಿದೆ ಎಂದು ಕೆಲವರು ಹೇಳುತ್ತಾರೆ, ಮತ್ತು ಅದನ್ನು ಎಲ್ಲಿಯೂ ನೋಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇಲ್ಲಿಂದ ಬಂದಿರುವ ನಾಯಕರಿಗೆ ನಾನು ಇಷ್ಟೇ ಕೇಳುತ್ತೇನೆ. ಅಹಮದಾಬಾದ್ ಮಹಾತ್ಮಾ ಗಾಂಧೀಜಿಯವರ ಪುಣ್ಯ ಕ್ಷೇತ್ರ, ಆದರೆ ಗಾಂಧೀಜಿಯವರ ವಿಚಾರಧಾರೆಗಳನ್ನು ನಾಶಮಾಡಲು ಯೋಚಿಸುತ್ತಿರುವ ಇಂತಹ ವಿಚಾರಧಾರೆಯುಳ್ಳವರು ಈ ನೆಲದಲ್ಲಿ ಹುಟ್ಟಿರುವುದು ಆಶ್ಚರ್ಯಕರವಾಗಿದೆ” (ಅನುವಾದಿಸಲಾಗಿದೆ).
ವೈರಲ್ ವೀಡಿಯೋ ಕ್ಲಿಪ್ ಖರ್ಗೆ ಅವರ ಮೂಲ ಭಾಷಣದಿಂದ ಹುಟ್ಟಿಕೊಂಡಿದೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ, ಇದರ ಪರಿಣಾಮವಾಗಿ ಅವರ ಬಗ್ಗೆ ತಪ್ಪುದಾರಿಗೆಳೆಯುವ ಹೇಳಿಕೆ ಬಂದಿದೆ. ಎಡಿಟ್ ಮಾಡದ ಭಾಷಣದಲ್ಲಿ ಕಾಂಗ್ರೆಸ್ ಪಕ್ಷವನ್ನು "ಮುಗಿದಿದೆ" ಎಂದು ಆರೋಪಿಸಿದ ಗುಜರಾತ್‌ನ ನಾಯಕರನ್ನು ಖರ್ಗೆ ಚರ್ಚಿಸಿದ್ದಾರೆ ಮತ್ತು ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಆರೋಪಗಳನ್ನು ಖರ್ಗೆಯವರು ಅವರ ಮೇಲೆ ಮಾಡಿದ್ದಾರೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಖರ್ಗೆಯವರ ಮೂಲ ಭಾಷಣದಿಂದ ಕ್ಲಿಪ್ ಮಾಡಿದ ಭಾಗವನ್ನು ಸಂದರ್ಭಕ್ಕೆ ಮೀರಿ ಹಂಚಿಕೊಳ್ಳಲಾಗಿದೆ ಎಂದು ತೋರಿಸುತ್ತದೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.