ಭಾರತೀಯ ಸೇನೆಯ ಅಧಿಕಾರಿಗಳ ಹಳೆಯ ಮತ್ತು ಸಂಬಂಧವಿಲ್ಲದ ಚಿತ್ರವನ್ನು ಬ್ರಿಗೇಡಿಯರ್ ಬಂಧನವನ್ನು ತೋರಿಸುತ್ತದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

Update: 2024-05-25 13:40 GMT

ಸಾರಾಂಶ:

ಸೈನಿಕರ ಪಿಂಚಣಿ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಭಾರತೀಯ ಸೇನೆಯ ಬ್ರಿಗೇಡಿಯರ್‌ನನ್ನು ಬಂಧಿಸಲಾಗಿದೆ ಎಂದು ಹೇಳುವ ಚಿತ್ರವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಆರೋಪವನ್ನು ತೋರಿಸಲು ಬಳಸಿರುವ ಚಿತ್ರವು ೨೦೨೩ ರದ್ದಾಗಿದೆ ಮತ್ತು ಅಂತಹ ಯಾವುದೇ ಬಂಧನಗಳ ಅಧಿಕೃತ ದೃಢೀಕರಣವಿಲ್ಲದ ಕಾರಣ ಈ ಹೇಳಿಕೆ ತಪ್ಪು.


ಹೇಳಿಕೆ:

ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಭ್ರಷ್ಟಾಚಾರದ ಆರೋಪದ ಮೇಲೆ ಭಾರತೀಯ ಸೇನೆಯ ಬ್ರಿಗೇಡಿಯರ್‌ನ ಬಂಧನವನ್ನು ಪ್ರತಿಪಾದಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ವೆರಿಫೈಎಡ್ ಬಳಕೆದಾರರು ಮೇ ೨೨, ೨೦೨೪ ರಂದು ಫೋಟೋವನ್ನು ಈ ಶೀರ್ಷಿಕೆಯೊಂದಿಗೆ ಪೋಷ್ಟ್ ಮಾಡಿದ್ದಾರೆ, "ಸೈನಿಕರ ಪಿಂಚಣಿ ಕಾರ್ಯಕ್ರಮದಲ್ಲಿ ಭಾರಿ ಭ್ರಷ್ಟಾಚಾರಕ್ಕಾಗಿ ಭಾರತೀಯ ಸೇನೆಯ ಬ್ರಿಗೇಡಿಯರ್ ಅನ್ನು ಬಂಧಿಸಲಾಗಿದೆ. ಆಘಾತಕಾರಿ ಬಹಿರಂಗಪಡಿಸುವಿಕೆಯಲ್ಲಿ, ದೊಡ್ಡ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದ್ದಕ್ಕಾಗಿ ಭಾರತೀಯ ಸೇನೆಯ ಬ್ರಿಗೇಡಿಯರ್ ಅವರನ್ನು ಬಂಧಿಸಲಾಗಿದೆ ಸೈನಿಕರ ಪಿಂಚಣಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಹಗರಣ" (ಅನುವಾದಿಸಲಾಗಿದೆ). ನಿವೃತ್ತ ಮತ್ತು ಅಂಗವಿಕಲ ಸೈನಿಕರ ಪಿಂಚಣಿಗಾಗಿ ಗಣನೀಯ ಮೊತ್ತದ ಹಣವನ್ನು ದುರುಪಯೋಗಪಡಿಸಿಕೊಂಡು ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಅಂದಾಜು ೪.೩ ಕೋಟಿ ಡಾಲರ್ ಗಳಿಗೆ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರೋಪವನ್ನು ಅಧಿಕಾರಿಯ ಮೇಲೆ ಹೊರಿಸಲಾಗಿದೆ ಎಂದು ಪೋಷ್ಟ್ ಸೂಚಿಸುತ್ತದೆ.

ಮೇ ೨೨, ೨೦೨೪ ರಂದು ಭಾರತೀಯ ಸೇನೆಯ ಬ್ರಿಗೇಡಿಯರ್‌ನ ಬಂಧನವಾಗಿದೆ ಎಂದು ಹೇಳಿ ಹಂಚಿಕೊಳ್ಳದ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಇನ್ನೊಬ್ಬ ಬಳಕೆದಾರರು ಮೇ ೨೨, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ರೆಡ್ಡಿಟ್‌ನಂತಹ ಸಾಮಾಜಿಕ ಮಾಧ್ಯಮದ ಬಳಕೆದಾರರು ಮೇ ೨೩, ೨೦೨೪ ರಂದು ಚಿತ್ರವನ್ನು ಹಂಚಿಕೊಂಡಿದ್ದಾರೆ.


ಪುರಾವೆ:

ನಾವು ವೈರಲ್ ಚಿತ್ರವನ್ನು ಬಳಸಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಅದು ಫೆಬ್ರವರಿ ೨೨, ೨೦೨೩ ರ ಅಡಿಷನಲ್ ಡೈರೆಕ್ಟೊರೇಟ್ ಜನರಲ್ ಆಫ್ ಪಬ್ಲಿಕ್ ಇನ್ಫಾರ್ಮಶನ್ ನ (ಎಂ ಓಡಿ) (ಸೇನೆ) ಇಂಟಿಗ್ರೇಟೆಡ್ ಹೆಡ್‌ಕ್ವಾರ್ಟರ್ಸ್ ಮಡಿದ ವೈರಲ್ ಚಿತ್ರವನ್ನು ಒಳಗೊಂಡಿರುವ ಎಕ್ಸ್ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು. ಅದರ ಶೀರ್ಷಿಕೆಯು, "ಜನರಲ್ ಮನೋಜ್ ಪಾಂಡೆ, #COAS HQ @NorthernComd_IA ಗೆ ಭೇಟಿ ನೀಡಿದರು ಮತ್ತು ಕಾರ್ಯಾಚರಣೆಯ ಸನ್ನದ್ಧತೆ ಮತ್ತು ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು. #COAS ಅವರ ಉನ್ನತ ವೃತ್ತಿಪರತೆ ಮತ್ತು ಕರ್ತವ್ಯದ ಮೇಲಿನ ಭಕ್ತಿಗಾಗಿ ಎಲ್ಲಾ ಶ್ರೇಣಿಗಳನ್ನು ಅಭಿನಂದಿಸಿದೆ. #IndianArmy #OnPathToTransformation" (ಅನುವಾದಿಸಲಾಗಿದೆ).

ಫೆಬ್ರವರಿ ೨೨, ೨೦೨೩ ರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಫೆಬ್ರವರಿ ೨೨, ೨೦೨೩ ರ ಎಎನ್‌ಐ ವರದಿಯು ವೈರಲ್ ಚಿತ್ರವನ್ನು ಹೊಂದಿರುವ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿರುವ ಉತ್ತರ ಕಮಾಂಡ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿದರು ಮತ್ತು ಕಾರ್ಯಾಚರಣೆಯ ಸನ್ನದ್ಧತೆ ಮತ್ತು ಪ್ರದೇಶದ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು ಎಂದು ಹೇಳುತ್ತದೆ. ಹಿಂದೂಸ್ತಾನ್ ಟೈಮ್ಸ್ ಸಹ ಫೆಬ್ರವರಿ ೨೩, ೨೦೨೩ ರಂದು ಜನರಲ್ ಮನೋಜ್ ಪಾಂಡೆ ಉಧಂಪುರಕ್ಕೆ ಭೇಟಿ ನೀಡಿದ್ದರು ಎಂದು ವರದಿ ಮಾಡಿದೆ.

ನಾವು ವೈರಲ್ ಹೇಳಿಕೆಯನ್ನು ಮತ್ತಷ್ಟು ವಿಶ್ಲೇಷಿಸಿದ್ದೇವೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಭಾರತೀಯ ಸೇನೆಯ ಬ್ರಿಗೇಡಿಯರ್‌ನನ್ನು ಬಂಧಿಸುವಂತೆ ಸೂಚಿಸುವ ಯಾವುದೇ ವರದಿಗಳು ಕಂಡುಬಂದಿಲ್ಲ.


ತೀರ್ಪು:

ಫೆಬ್ರವರಿ ೨೨, ೨೦೨೩ ರಂದು ಜಮ್ಮು ಮತ್ತು ಕಾಶ್ಮೀರದ ಉಧಂಪುರ್‌ನಲ್ಲಿರುವ ಉತ್ತರ ಕಮಾಂಡ್ ಪ್ರಧಾನ ಕಚೇರಿಗೆ ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಅವರು ಭೇಟಿ ನೀಡಿದ ಸಮಯಕ್ಕೆ ಹಿಂದಿನದು ಎಂದು ಚಿತ್ರದ ವಿಶ್ಲೇಷಣೆಯು ಬಹಿರಂಗಪಡಿಸುತ್ತದೆ. ಆದ್ದರಿಂದ, ಸೈನಿಕರ ಪಿಂಚಣಿ ಕಾರ್ಯಕ್ರಮಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಭಾರತೀಯ ಸೇನೆಯ ಬ್ರಿಗೇಡಿಯರ್‌ನನ್ನು ಬಂಧಿಸಲಾಗಿದೆ ಎಂದು ಆರೋಪಿಸುವ ಹೇಳಿಕೆ ತಪ್ಪು.

Claim :  Old and unrelated image of Indian Army officials falsely claims the arrest of Brigadier
Claimed By :  X user
Fact Check :  False
Tags:    

Similar News