ಹಳೆಯ ಮಹಿಳಾ ದಿನದ ಜಾಹೀರಾತನ್ನು ಕಾಂಗ್ರೆಸ್ ಪಕ್ಷದ ಮಹಾಲಕ್ಷ್ಮಿ ಯೋಜನೆಯ ಪ್ರಚಾರ ಎಂದು ಹೇಳಿಕೊಂಡು ಹಂಚಿಕೊಳ್ಳಲಾಗಿದೆ

Update: 2024-05-26 10:30 GMT

ಸಾರಾಂಶ:

ಕಾಂಗ್ರೆಸ್ ಪಕ್ಷದ ಮಹಾಲಕ್ಷ್ಮಿ ಯೋಜನೆಯ ಜಾಹೀರಾತು ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಆದರೆ, ಇದು ಮಹಿಳಾ ದಿನವನ್ನು ಆಚರಿಸಲು ಪ್ರೆಗಾ ನ್ಯೂಸ್‌ನ ಜಾಹೀರಾತಾಗಿದ್ದು, ಇದನ್ನು ೨೦೨೨ ರಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋವನ್ನು ಕಾಂಗ್ರೆಸ್ ಪಕ್ಷದ ಮಹಾಲಕ್ಷ್ಮಿ ಯೋಜನೆಯ ಜಾಹೀರಾತು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಹೇಳಿಕೆ:

ಸಾಮಾಜಿಕ ಮಾಧ್ಯಮದಲ್ಲಿ ಜನರು ಕಾಂಗ್ರೆಸ್‌ನ ಮಹಾಲಕ್ಷ್ಮಿ ಯೋಜನೆಯ ಜಾಹೀರಾತು e ಂದು ಹೇಳಿಕೊಂಡು ಒಂದು ಉದ್ದೇಶಿತ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕಾಂಗ್ರೆಸ್ ಪಕ್ಷವು ಬಡ ಕುಟುಂಬಗಳ ಮಹಿಳೆಯರಿಗೆ ವಾರ್ಷಿಕವಾಗಿ ರೂ.೧ ಲಕ್ಷದವರೆಗೆ ಆರ್ಥಿಕ ನೆರವು ನೀಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಂಡಿರುವ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಕಾಂಗ್ರೆಸ್ ಪಕ್ಷವು ಮಹಾಲಕ್ಷ್ಮಿ ಯೋಜನೆಯ ಒಂದು ಭಾರೀ ಜಾಹೀರಾತನ್ನು ಹಂಚಿಕೊಂಡಿದೆ ಖಾತಾ ಖಾತಾ ಖಾತ್ 🤙🏻🔥 ಹೊಸ ಹಾರ್ಡ್ ಹಿಟ್ ಪ್ರಚಾರ ಜಾಹೀರಾತನ್ನು ಬಿಡುಗಡೆ ಮಾಡಿದೆ 🤙🏻🔥 ಪ್ರಶಾಂತ್ ಕಿಶೋರ್ ಅಂತಹ ಅದ್ಭುತ ಜಾಹೀರಾತುಗಳು ಮತ್ತು ಯೋಜನೆಗಳನ್ನು ಎಂದಿಗೂ ಉಲ್ಲೇಖಿಸುವುದಿಲ್ಲ ಆದರೆ ಯಾವಾಗಲೂ ದುರ್ಬಲರ ಬಗ್ಗೆ ಅಳುತ್ತಾರೆ. ಪ್ರಶಾಂತ್ ಕಿಶೋರ್ ತಲುಪುವವರೆಗೆ ಶೇರ್ ಮಾಡಿ. (ಕನ್ನಡಕ್ಕೆ ಅನುವಾದಿಸಲಾಗಿದೆ)"

ಮಹಾಲಕ್ಷ್ಮಿ ಯೋಜನೆಯ ಜಾಹೀರಾತು ಎಂದು ಹೇಳಿಕೊಂಡು ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಎಕ್ಸ್ ಮತ್ತು ಫೇಸ್‌ಬುಕ್ ನಲ್ಲಿ ಇದೇ ರೀತಿಯ ಹೇಳಿಕೆಗಳೊಂದಿಗೆ ಇತರರು ಅದೇ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಪುರಾವೆ:

ನಾವು ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಮಾರ್ಚ್ ೮, ೨೦೨೨ ರಂದು ಡಿ ಪ್ರಶಾಂತ್ ನಾಯರ್ ಎಂಬ ಬಳಕೆದಾರರಿಂದ ಎಕ್ಸ್ ನಲ್ಲಿ ಅದೇ ವೀಡಿಯೋವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಈ ಪೋಷ್ಟ್ ನ ಶೀರ್ಷಿಕೆಯು, “@PregaNews ನ ಒಂದು ಉತ್ತಮ ಜಾಹೀರಾತು ಕೊನೆಯವರೆಗೂ ವೀಕ್ಷಿಸಿ. #WorkLifeBalance - ದೃಷ್ಟಿಕೋನದ ವಿಷಯ ವಾಟ್ಸಪ್ಪ್ ನಲ್ಲಿ ಕಂಡುಬಂದಿದೆ(ಕನ್ನಡಕ್ಕೆ ಅನುವಾದಿಸಲಾಗಿದೆ).” ಈ ವೀಡಿಯೋದ ಮೇಲಿನ ಬಲ ಮೂಲೆಯಲ್ಲಿ “ಪ್ರೆಗಾ ನ್ಯೂಸ್” ಲೋಗೋವನ್ನು ನಾವು ಕಂಡುಕೊಂಡಿದ್ದೇವೆ.

ಮಾರ್ಚ್ ೮, ೨೦೨೨ ರಂದು ಹಂಚಿಕೊಳ್ಳಲಾದ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಈ ಪೋಷ್ಟ್ ನಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು ಮತ್ತಷ್ಟು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಫೆಬ್ರವರಿ ೧೯, ೨೦೨೪ ರಂದು ಯೂಟ್ಯೂಬ್ ನಲ್ಲಿ ಪ್ರೆಗಾ ನ್ಯೂಸ್ ಹಂಚಿಕೊಂಡಿರುವ ಮೂಲ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಅದರ ಶೀರ್ಷಿಕೆಯು ಹೀಗೆ ಹೇಳುತ್ತದೆ, “೨೦೨೨ ಮಹಿಳಾ ದಿನಾಚರಣೆಯನ್ನು ಪ್ರೆಗಾ ನ್ಯೂಸ್ ಜೊತೆಗೆ ಆಚರಿಸಿ | #SheCanCarryBoth | ಸಯಂತನಿ ಘೋಷ್.” ಅವರ ಯೂಟ್ಯೂಬ್ ಚಾನಲ್‌ನ “ಅಬೌಟ್” ವಿಭಾಗವು ಪ್ರೆಗಾ ನ್ಯೂಸ್ ಗರ್ಭಧಾರಣೆಯ ಆರೈಕೆ ಪಾಲುದಾರ ಮತ್ತು ಉತ್ಪನ್ನಗಳ ವಿವರಗಳನ್ನು ಸೂಚಿಸುತ್ತದೆ. ಕಾಂಗ್ರೆಸ್ ತನ್ನ ೨೦೨೪ ರ ಪ್ರಣಾಳಿಕೆಯಲ್ಲಿ ಘೋಷಿಸಿದ ಮಹಾಲಕ್ಷ್ಮಿ ಯೋಜನೆಗೂ ಈ ವಿಡಿಯೋವಿಗೂ ಯಾವುದೇ ಸಂಬಂಧವಿಲ್ಲ ಎಂದು ಇದು ದೃಢಪಡಿಸುತ್ತದೆ.

ಪ್ರೆಗಾ ನ್ಯೂಸ್ ಹಂಚಿಕೊಂಡ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.


ಮಹಾಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಯೂಟ್ಯೂಬ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಂಚಿಕೊಂಡ ಅನೇಕ ವೀಡಿಯೋಗಳನ್ನು ಸಹ ನಾವು ಕಂಡುಕೊಂಡಿದ್ದೇವೆ. ಈ ಯಾವುದೇ ವಿಡಿಯೋಗಳು ಪ್ರೆಗಾ ನ್ಯೂಸ್ ಜಾಹೀರಾತಿನ ದೃಶ್ಯಗಳನ್ನು ಒಳಗೊಂಡಿಲ್ಲ. ಮಹಾಲಕ್ಷ್ಮಿ ಯೋಜನೆಯದು ಎಂದು ಹೇಳಿಕೊಳ್ಳುವ ವೈರಲ್ ವೀಡಿಯೋ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಸಂಬಂಧಿಸಿಲ್ಲ ಮತ್ತು ೨೦೨೨ ರ ಮಹಿಳಾ ದಿನಾಚರಣೆಯ ಜಾಹೀರಾತು ಎಂದು ಇದು ದೃಢಪಡಿಸುತ್ತದೆ.

ತೀರ್ಪು:

ಕಾಂಗ್ರೆಸ್ ಪಕ್ಷದ ಮಹಾಲಕ್ಷ್ಮಿ ಯೋಜನೆಯ ಜಾಹೀರಾತನ್ನು ತೋರಿಸಲು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೋವನ್ನು ಕಾಂಗ್ರೆಸ್ ಪಕ್ಷ ಹಂಚಿಕೊಂಡಿಲ್ಲ. ಈ ವೀಡಿಯೋ ಪ್ರೆಗಾ ನ್ಯೂಸ್‌ನ ೨೦೨೨ ರ ಮಹಿಳಾ ದಿನದ ಜಾಹೀರಾತಾಗಿದೆ ಮತ್ತು ಕಾಂಗ್ರೆಸ್ ಪಕ್ಷದ ಮಹಾಲಕ್ಷ್ಮಿ ಯೋಜನೆಯ ಜಾಹೀರಾತು ಎಂದು ಹೇಳಿಕೊಂಡು ತಪ್ಪಾಗಿ ಹಂಚಿಕೊಳ್ಳಲಾಗಿದೆ.


Claim :  Old Women’s Day ad shared as Congress party’s Mahalakshmi Scheme campaign
Claimed By :  X user
Fact Check :  False
Tags:    

Similar News