ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗೆ ಬೆಂಕಿ ತಗುಲಿರುವುದು ಅತಿಯಾದ ಬಿಸಿಯಿಂದಾಗಿಯೇ ಹೊರತು ಮ್ಯಾಗ್ನೆಟಿಕ್ ಬಾಂಬ್ ನಿಂದ ಅಲ್ಲ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನಲ್ಲಿ ಹೊತ್ತಿ ಉರಿಯುತ್ತಿರುವ ಬಸ್‌ನ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಮೂರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಎಂಜಿನಿಯರ್‌ಗಳನ್ನು ಕೊಂದ ಮ್ಯಾಗ್ನೆಟಿಕ್ ಬಾಂಬ್‌ಗೆ ಗುರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಪರಿಶೀಲಿಸಿದ ವರದಿಗಳ ಪ್ರಕಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಎಂಜಿನ್ ಅಧಿಕ ಬಿಸಿಯಾದ ಕಾರಣ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದು ಹೇಳಿಕೆಯನ್ನು ತಪ್ಪಾಗಿಸುತ್ತದೆ.
ಹೇಳಿಕೆ:
ಬೆಂಗಳೂರಿನ ಜನನಿಬಿಡ ರಸ್ತೆಯಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ. ಮ್ಯಾಗ್ನೆಟಿಕ್ ಬಾಂಬ್ ಬಸ್ ಅನ್ನು ಗುರಿಯಾಗಿಸಿಕೊಂಡು ಡಿಆರ್‌ಡಿಒದ ಮೂವರು ಇಂಜಿನಿಯರ್‌ಗಳನ್ನು ಕೊಂದಿದೆ ಎಂದು ವೀಡಿಯೋದೊಂದಿಗೆ ಹಂಚಿಕೊಂಡ ಶೀರ್ಷಿಕೆ ಹೇಳುತ್ತದೆ. ಎಕ್ಸ್ ಬಳಕೆದಾರರಾದ @Pak1stTeam ಜುಲೈ ೯, ೨೦೨೪ ರಂದು ಇದನ್ನು ಹಂಚಿಕೊಂಡಿದೆ: "ಭಾರತದ ಬೆಂಗಳೂರಿನಲ್ಲಿ ಡಿಆರ್‌ಡಿಒದ ೩ ಇಂಜಿನಿಯರ್‌ಗಳು ಪ್ರಯಾಣಿಸುತ್ತಿದ್ದ ಬಸ್ ಅನ್ನು ಮ್ಯಾಗ್ನೆಟಿಕ್ ಬಾಂಬ್ ಗುರಿಯಾಗಿಸಿಕೊಂಡಿದೆ. ಮೂವರೂ ಡಿಆರ್‌ಡಿಒ ಎಂಜಿನಿಯರ್‌ಗಳು ಸಾವನ್ನಪ್ಪಿದ್ದಾರೆ. ಘಟನೆ ಡಿಆರ್‌ಡಿಒ ಎಚ್‌ಎಎಲ್ ತೇಜಸ್ ಫ್ಲೈಟ್ ಟೆಸ್ಟಿಂಗ್ ಸೌಲಭ್ಯದ ಪಶ್ಚಿಮಕ್ಕೆ ೪ ಕಿಮೀ ದೂರದಲ್ಲಿ ನಡೆದಿದೆ" (ಅನುವಾದಿಸಲಾಗಿದೆ). ಈ ಪೋಷ್ಟ್ ೨೯,೩೦೦ ಕ್ಕೂ ಮೀರಿದ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮತ್ತೊಂದು ಎಕ್ಸ್ ಖಾತೆ, @SAnPerspective, ಅದೇ ದಿನ ಇದೇ ರೀತಿಯ ಹೇಳಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದೆ, ೧,೩೦೦ ಕ್ಕೂ ಮೀರಿದ ವೀಕ್ಷಣೆಗಳನ್ನು ಗಳಿಸಿದೆ.
ಜುಲೈ ೯, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ಹೇಳಿಕೆಯನ್ನು ಪರಿಶೀಲಿಸಲು, ನಾವು "ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಬೆಂಕಿ" ನಂತಹ ಪದಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಇದು ನಮ್ಮನ್ನು ಘಟನೆಯ ಕುರಿತು ಇಂಡಿಯಾ ಟುಡೆ ಮತ್ತು ಹಿಂದೂಸ್ತಾನ್ ಟೈಮ್ಸ್‌ನ ಬಹು ಸುದ್ದಿ ವರದಿಗಳಿಗೆ ಕರೆದೊಯ್ಯಿತು. ಜುಲೈ ೯, ೨೦೨೪ ರ ದಿ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಎಂಜಿನ್ ಅಧಿಕ ಬಿಸಿಯಾದ ಕಾರಣ ಬಿಎಂಟಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿತು ಮತ್ತು ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
ಜುಲೈ ೯, ೨೦೨೪ ರ ದಿ ಟೈಮ್ಸ್ ಆಫ್ ಇಂಡಿಯಾ ವರದಿಯ ಸ್ಕ್ರೀನ್‌ಶಾಟ್.
ಬೆಂಗಳೂರಿನ ಅಧಿಕೃತ ಸಾರಿಗೆ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಬೆಂಕಿ ಆಕಸ್ಮಿಕ ಎಂದು ಖಚಿತಪಡಿಸಿದ್ದಾರೆ. ಮ್ಯಾಗ್ನೆಟಿಕ್ ಬಾಂಬ್ ಒಳಗೊಂಡಿರುವ ಸಮರ್ಥನೆಯನ್ನು ಯಾವುದೇ ಪುರಾವೆಗಳು ಬೆಂಬಲಿಸುವುದಿಲ್ಲ ಅಥವಾ ಡಿಆರ್‌ಡಿಒ ಎಂಜಿನಿಯರ್‌ಗಳಿಗೆ ಯಾವುದೇ ಸಂಬಂಧವಿಲ್ಲ. ಬಸ್ ರಸ್ತೆಯಲ್ಲಿ ನಿಂತಿತು ಮತ್ತು ಮರುಪ್ರಾರಂಭಿಸಲು ಪ್ರಯತ್ನಿಸಿದಾಗ, ಚಾಲಕನು ಹೊಗೆಯನ್ನು ಗಮನಿಸಿದನು ಎಂದು ಬಿಎಂಟಿಸಿ ವಕ್ತಾರರು ದಿ ಹಿಂದೂಗೆ ತಿಳಿಸಿದರು. ಅವರು ತಕ್ಷಣ ಪರಿಸ್ಥಿತಿಯನ್ನು ಪರಿಶೀಲಿಸಿದರು ಮತ್ತು ಎಲ್ಲಾ ಪ್ರಯಾಣಿಕರಿಗೆ ಇಳಿಯಲು ಸೂಚಿಸಿದರು. ನಂತರ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಬೆಂಕಿಯನ್ನು ಹತ್ತಿಕ್ಕಲು ಅಗ್ನಿಶಾಮಕ ಸಾಧನಗಳನ್ನು ಬಳಸಿದರು.
ಡಿಆರ್‌ಡಿಒ ಇಂಜಿನಿಯರ್‌ಗಳು ಘಟನೆಯಲ್ಲಿ ಭಾಗಿಯಾಗಿದ್ದಾರೆ ಅಥವಾ ಬಾಂಬ್ ದಾಳಿ ನಡೆದಿದೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಅಧಿಕೃತ ಹೇಳಿಕೆಗಳು ನಮಗೆ ಕಂಡುಬಂದಿಲ್ಲ.
ತೀರ್ಪು:
ಬೆಂಗಳೂರಿನಲ್ಲಿ ಬಸ್‌ನಲ್ಲಿ ಮ್ಯಾಗ್ನೆಟಿಕ್ ಬಾಂಬ್ ಬಳಸಲಾಗಿದ್ದು, ಮೂವರು ಡಿಆರ್‌ಡಿಒ ಎಂಜಿನಿಯರ್‌ಗಳನ್ನು ಕೊಂದಿದ್ದಾರೆ ಎಂಬ ಹೇಳಿಕೆಯು ಗಾಬರಿ ಮತ್ತು ಭಾರತ ವಿರೋಧಿ ಪ್ರಚಾರವನ್ನು ಹರಡುವ ಗುರಿಯನ್ನು ಹೊಂದಿದೆ. ಸ್ಥಳೀಯ ಅಧಿಕಾರಿಗಳು ಮತ್ತು ಸುದ್ದಿವಾಹಿನಿಗಳ ಪರಿಶೀಲಿಸಿದ ವರದಿಗಳು ಬಿಎಂಟಿಸಿ ಬಸ್‌ಗೆ ಇಂಜಿನ್ ಅಧಿಕ ಬಿಸಿಯಾದ ಕಾರಣ ಬೆಂಕಿ ಕಾಣಿಸಿಕೊಂಡಿದೆ ಎಂದು ದೃಢಪಡಿಸುತ್ತದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಯಾವುದೇ ಬಾಂಬ್ ದಾಳಿ ಅಥವಾ ಡಿಆರ್‌ಡಿಒ ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪು.