ವಕ್ಫ್ ಬೋರ್ಡ್ ಕರ್ನಾಟಕದಲ್ಲಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಯಾವುದೇ ವರದಿಗಳು ಹೇಳುವುದಿಲ್ಲ

Update: 2024-06-05 12:40 GMT

ಸಾರಾಂಶ:

ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತರೊಬ್ಬರ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಅದು ದರ್ಗಾಕ್ಕೆ ಸೇರಿದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಷ್ಟ್ ನಲ್ಲಿರುವ ಚಿತ್ರವು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ದರ್ಗಾದ ಚಿತ್ರವಾಗಿದ್ದು, ಯಾದಗಿರಿ ಜಿಲ್ಲೆಯಲ್ಲಿ ಅಂತಹ ಯಾವುದೇ ಭೂಸ್ವಾಧೀನದ ದಾಖಲೆಗಳಿಲ್ಲ. ಹೀಗಾಗಿ, ಈ ಹೇಳಿಕೆ ತಪ್ಪು.


ಹೇಳಿಕೆ:

ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದ ಅರ್ಜುನಪ್ಪ ಎಂಬುವವರ ಜಮೀನು ದರ್ಗಾಕ್ಕೆ ಸೇರಿದ್ದು ಎಂದು ಘೋಷಿಸಿ ವಕ್ಫ್ ಬೋರ್ಡ್ ರೈತನ ಜಮೀನನ್ನು ವಶಪಡಿಸಿಕೊಂಡಿದೆ ಎಂದು ಎಕ್ಸ್ (ಹಿಂದೆ ಟ್ವಿಟರ್) ನ ಸಾಮಾಜಿಕ ಮಾಧ್ಯಮ ಬಳಕೆದಾರರು ವೈರಲ್ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಷ್ಟ್ ಹಿನ್ನೆಲೆಯಲ್ಲಿ ದರ್ಗಾದ ಚಿತ್ರವನ್ನು ಒಳಗೊಂಡಿದೆ.

ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯ ಭಾಗವು ಹೀಗಿದೆ, “ಯಾದಗಿರಿ ಜಿಲ್ಲೆ ಶಾಬಾದ್ ಗ್ರಾಮದಲ್ಲಿ ಕರ್ನಾಟಕದ ರೈತ ಅರ್ಜುನಪ್ಪ ಎಂಬುವರು ತಮ್ಮ ಜಮೀನು ವಕ್ಫ್ ಮಂಡಳಿಗೆ ಸೇರಿದೆ ಎಂಬ ಮಾಹಿತಿ ಮೇರೆಗೆ ಹೋರಾಟ ನಡೆಸುತ್ತಿದ್ದಾರೆ. ತಮಿಳುನಾಡು, ತೆಲಂಗಾಣ, ಕರ್ನಾಟಕ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ವಕ್ಫ್ ಭೂ ಕಬಳಿಕೆಯ ನೈಜತೆಯನ್ನು ಎತ್ತಿ ಹಿಡಿದ ಅವರು ಬೆಂಬಲವಿಲ್ಲದೆ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.”

ವಕ್ಫ್ ಬೋರ್ಡ್ ಕರ್ನಾಟಕದಲ್ಲಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು.


ಪುರಾವೆ:

ಸುದ್ದಿ ಮೂಲಗಳು ಮತ್ತು ಸರ್ಕಾರಿ ಪತ್ರಿಕಾ ಪ್ರಕಟಣೆಗಳ ವ್ಯಾಪಕ ಹುಡುಕಾಟಗಳು ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂಬ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವರದಿಗಳು ಅಥವಾ ಪುರಾವೆಗಳು ಸಿಗಲ್ಲಿಲ. ಯಾದಗಿರಿ ಜಿಲ್ಲೆಯ ಅಧಿಕೃತ ಪೋರ್ಟಲ್ ಮತ್ತು ೨೦೧೧ ರ ಜನಗಣತಿಯ ದತ್ತಾಂಶವನ್ನು ಪರಿಶೀಲಿಸಿದಾಗ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಶಾಬಾದ್ ಎಂಬ ಹೆಸರಿನ ಯಾವುದೇ ಗ್ರಾಮವಿಲ್ಲ ಎಂದು ತಿಳಿದುಬಂದಿದೆ, ಇದು ಈ ಹೇಳಿಕೆಯ ಭೌಗೋಳಿಕ ನಿಖರತೆಯ ಮೇಲೆ ಅನುಮಾನವನ್ನು ಉಂಟುಮಾಡುತ್ತದೆ.

ರಿವರ್ಸ್ ಇಮೇಜ್ ಸರ್ಚ್ ವೈರಲ್ ಪೋಷ್ಟ್ ನಲ್ಲಿರುವ ಚಿತ್ರವನ್ನು ಮಹಾರಾಷ್ಟ್ರದ ಇಸಾಸಾನಿಯ ನಾಗ್ಪುರದಲ್ಲಿರುವ ದರ್ಗಾ ಬಾಬಾ ಆಶಿಕ್ ಶಾ ಮಶುಕ್ ಶಾ ದರ್ಗಾ ಮತ್ತು ಮಸೀದಿ ಸಮಿತಿ ಎಂದು ಗುರುತಿಸಿದೆ. ಹೆಚ್ಚಿನ ಹುಡುಕಾಟವು ಈ ಫೇಸ್‌ಬುಕ್‌ ಪುಟಕ್ಕೆ ಕರೆದೊಯ್ಯಿತು - ‘ದರ್ಗಾ ಬಾಬಾ ಆಶಿಕ್ ಶಾ ಮಶೂಕ್ ಶಾ ರಹಮತುಲ್ ಅಲೈಹ್ ಇಸಾಸಾನಿ ತೆಕ್ಡಿ’, ಇದು ದರ್ಗಾದ ಇದೇ ರೀತಿಯ ಚಿತ್ರವನ್ನು ಹೊಂದಿದೆ, ಇದು ನಾಗ್ಪುರದಲ್ಲಿ ಅದರ ಸ್ಥಳವನ್ನು ದೃಢೀಕರಿಸುತ್ತದೆ.

ಗೂಗಲ್ ಮ್ಯಾಪ್‌ನಲ್ಲಿ ಕಂಡುಬರುವ ನೈಜ ಚಿತ್ರ ಮತು ವೈರಲ್ ಚಿತ್ರ ದ ಹೋಲಿಕೆ.


ವೈರಲ್ ಚಿತ್ರ ಮತ್ತು ಗೂಗಲ್ ಮ್ಯಾಪ್‌ನಲ್ಲಿ ಕಂಡುಬರುವ ನೈಜ ಚಿತ್ರವನ್ನು ಹೋಲಿಸಿದಾಗ, ನಾವು ಕಂಡ ಏಕೈಕ ವ್ಯತ್ಯಾಸವೆಂದರೆ ದರ್ಗಾದ ಮುಂದೆ ನಿಂತಿರುವ ಒಬ್ಬ ವ್ಯಕ್ತಿ ಇಲ್ಲದಿರುವುದು. ಆದ್ದರಿಂದ, ವೈರಲ್ ಚಿತ್ರವು ಎಡಿಟ್ ಮಾಡಲಾಗಿದೆ ಎಂದು ಕಂಡುಬಂದಿದೆ.


ತೀರ್ಪು:

ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ಅರ್ಜುನಪ್ಪ ಎಂಬ ರೈತನ ಜಮೀನನ್ನು ವಕ್ಫ್ ಮಂಡಳಿ ಸ್ವಾಧೀನಪಡಿಸಿಕೊಂಡಿದೆ ಎಂಬ ಆರೋಪ ತಪ್ಪು. ಈ ಹೇಳಿಕೆಗೆ ಸಂಬಂಧಿಸಿದ ವೈರಲ್ ಚಿತ್ರವು ವಾಸ್ತವವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ದರ್ಗಾವನ್ನು ಚಿತ್ರಿಸುತ್ತದೆ. ಭೂಸ್ವಾಧೀನದ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ಪುರಾವೆಗಳು ಅಥವಾ ಅಧಿಕೃತ ದಾಖಲೆಗಳಿಲ್ಲ ಮತ್ತು ಶಾಬಾದ್ ಎಂಬ ಗ್ರಾಮವು ಯಾದಗಿರಿ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿಲ್ಲ.

Claim :  No reports claim that Waqf Board acquired a farmer’s land in Karnataka
Claimed By :  X user
Fact Check :  False
Tags:    

Similar News