ಶ್ರೀ ರಾಮ ಸೇನೆ ಸದಸ್ಯರು ಉಡುಪಿಯ ಮುಸ್ಲಿಂ ಕುಟುಂಬಕ್ಕೆ ಎಚ್ಚರಿಕೆ ನೀಡಿದ ಹಳೆಯ ವೀಡಿಯೋವನ್ನು ಇತ್ತೀಚೆಗೆ ಕೋಮುವಾದದ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ
ಸಾರಾಂಶ:
ಉಡುಪಿಯ ಹಿಂದೂ ದೇವಾಲಯದ ಆವರಣದಲ್ಲಿ ಮಾಂಸಾಹಾರ ತಯಾರಿಸಿ ಅಲ್ಪಸಂಖ್ಯಾತ ಸಮುದಾಯದ ಕುಟುಂಬವೊಂದು ಸಿಕ್ಕಿಬಿದ್ದಿತೆಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಶ್ರೀ ರಾಮ ಸೇನೆಯ (ಬಲಪಂಥೀಯ ಸಜ್ಜು) ಸದಸ್ಯರು ಕುಟುಂಬವನ್ನು ಪ್ರಶ್ನಿಸುವುದನ್ನು ಮತ್ತು ಅವರನ್ನು ತೊರೆಯುವಂತೆ ಕೇಳುವುದನ್ನು ದೃಶ್ಯಾವಳಿ ತೋರಿಸುತ್ತದೆ. ಆದರೆ, ವೀಡಿಯೋವು ೨೦೨೨ ರದು ಮತ್ತು ಅಲ್ಪಸಂಖ್ಯಾತ ಸಮುದಾಯದ ಕುಟುಂಬವು ಸೀತಾ ನದಿಯ ದಡದಲ್ಲಿ ಪಿಕ್ನಿಕ್ ಮಾಡುತ್ತಿತ್ತು ಮತ್ತು ದೇವಾಲಯದ ಆವರಣದೊಳಗೆ ಅಲ್ಲ. ಆದ್ದರಿಂದ, ಇತ್ತೀಚೆಗೆ ಹಂಚಿಕೊಂಡ ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.
ಹೇಳಿಕೆ:
ಉಡುಪಿಯ ಸೀತಾ ನದಿಯ ದಡದಲ್ಲಿರುವ ದೇವಸ್ಥಾನದ ಬಳಿ ವಿಹಾರ ಮಾಡುತ್ತಿದ್ದ ಮುಸ್ಲಿಂ ಕುಟುಂಬವನ್ನು ಗುರಿಯಾಗಿಸಿಕೊಂಡು ಶ್ರೀ ರಾಮ ಸೇನೆ ಸದಸ್ಯರು ಕ್ಲಿಪ್ ಮಾಡಿದ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಉಡುಪಿಯಲ್ಲಿ ಮುಸ್ಲಿಂ ಕುಟುಂಬವೊಂದು ಉದ್ದೇಶಪೂರ್ವಕವಾಗಿ ಹಿಂದೂ ದೇವಾಲಯದ ಆವರಣದಲ್ಲಿ ಮಾಂಸಾಹಾರವನ್ನು ತಯಾರಿಸಿ “ಅದರ ಪಾವಿತ್ರ್ಯತೆಯನ್ನು ಹಾಳುಮಾಡಿದೆ” ಎಂದು ವೀಡಿಯೋದ ಶೀರ್ಷಿಕೆ ಆರೋಪಿಸಿದೆ.
ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ೨೦೨೪ ರ ಜುಲೈ ೮ ರಂದು ಈ ಹಿಂದಿ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ - "ಕರ್ನಾಟಕದ ಉಡುಪಿಯಲ್ಲಿ, ಮುಸ್ಲಿಂ ಕುಟುಂಬವು ಮಾಂಸಾಹಾರಿ ಅಡುಗೆ ಮಾಡುವ ಮೂಲಕ ದೇವಾಲಯದ ಆವರಣದ ಪಾವಿತ್ರ್ಯತೆಯನ್ನು ಹಾಳುಮಾಡುತ್ತಿದೆ. ಅವರನ್ನು ನಿಲ್ಲಿಸಲಾಯಿತು ಹಾಗು ತಕ್ಷಣ ಸ್ಥಳವನ್ನು ತೊರೆಯುವಂತೆ ಒತ್ತಾಯಿಸಲಾಯಿತು. (ಅನುವಾದಿಸಲಾಗಿದೆ). ಎಕ್ಸ್ ಖಾತೆ @ajaychauhan41 ಆನ್‌ಲೈನ್‌ನಲ್ಲಿ ಸುಳ್ಳು ಕೋಮು ನಿರೂಪಣೆಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದೆ. ಪೋಷ್ಟ್ ಸುಮಾರು ೮೫,೫೦೦ ವೀಕ್ಷಣೆಗಳು, ೪,೧೦೦ ಇಷ್ಟಗಳು ಮತ್ತು ೨,೨೦೦ ಮರು ಪೋಷ್ಟ್ ಗಳನ್ನು ಗಳಿಸಿದೆ. ಇನ್ನೊಬ್ಬ ಎಕ್ಸ್ ಬಳಕೆದಾರರು ಜುಲೈ ೯, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಜುಲೈ ೮, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿ ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ, ಅದು ನಮ್ಮನ್ನು ಮೇ ೧೧, ೨೦೨೨ ರ ಒಂದು ಎಕ್ಸ್ ಪೋಷ್ಟ್ ಗೆ ಕರೆದೊಯ್ಯಿತು. ಆ ಎಕ್ಸ್ ಬಳಕೆದಾರರು ಇಮ್ರಾನ್ ಖಾನ್ ಹೆಸರಿನ ಪತ್ರಕರ್ತರಾಗಿದ್ದಾರೆ ಮತ್ತು ವೈರಲ್ ವೀಡಿಯೋವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, "#sriramsene ಸದಸ್ಯರು #Muslim ಕುಟುಂಬದ ಮೇಲೆ ಆರೋಪ ಮಾಡಿದ್ದಾರೆ #Mangaloreನಿಂದ ಪಿಕ್ನಿಕ್ ಮಾಡಲೆಂದು ಬಂದಿದ್ದ ಕುಟುಂಬ #temple ಮತ್ತು ನಾಗದೇವಸ್ಥಾನದ ಪಾವಿತ್ರ್ಯವನ್ನು ಹಾಳುಮಾಡಿದ್ದಕ್ಕಾಗಿ #Udupiಯ ಸೀತಾನದಿಯ ದಡದಲ್ಲಿ ಬೀಡುಬಿಟ್ಟಿದ್ದರು" (ಅನುವಾದಿಸಲಾಗಿದೆ).
ಮೇ ೧೧, ೨೦೨೨ ರ ಪತ್ರಕರ್ತರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಇದನ್ನು ಸುಳಿವಾಗಿ ತೆಗೆದುಕೊಂಡು, ಕೀವರ್ಡ್ ಸರ್ಚ್ ನಡೆಸಲು ನಾವು "ಉಡುಪಿ," "ಮುಸ್ಲಿಂ," "ಶ್ರೀ ರಾಮ ಸೇನೆ" ಎಂಬ ಪದಗಳನ್ನು ಬಳಸಿದ್ದೇವೆ, ಇದು ನಮ್ಮನ್ನು ಮೇ ೧೧, ೨೦೨೨ ರ ನಾನು ಗೌರಿ ವರದಿಗೆ ಕರೆದೊಯ್ಯುತ್ತದೆ.
ಮೇ ೧೧, ೨೦೨೨ ರ ನಾನು ಗೌರಿ ವರದಿಯ ಸ್ಕ್ರೀನ್‌ಶಾಟ್.
ವರದಿಯ ಪ್ರಕಾರ ಮಂಗಳೂರಿನ ಮುಸ್ಲಿಂ ಕುಟುಂಬವೊಂದು ಉಡುಪಿಯ ಸೀತಾ ನದಿಯ ದಡಕ್ಕೆ ವಿಹಾರಕ್ಕೆ ಬಂದಿತ್ತು. ಮಾಂಸಾಹಾರ ತಯಾರಿಸಿ ಸಮೀಪದ ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡಿದ್ದಾರೆ ಎಂದು ಶ್ರೀ ರಾಮ ಸೇನೆ ಕಾರ್ಯಕರ್ತರು ಆರೋಪಿಸಿದ ನಂತರ ಕುಟುಂಬಸ್ಥರು ಕ್ಷಮೆಯಾಚಿಸಿ ಅಲ್ಲಿಂದ ತೆರಳಿದರು. ತಮ್ಮ ಕ್ಯಾಂಪಿಂಗ್ ಸೈಟ್‌ನಿಂದ ದೇವಸ್ಥಾನವು ಸಾಕಷ್ಟು ದೂರದಲ್ಲಿದೆ ಎಂದು ಅವರು ಭಾವಿಸಿದ್ದರು ಎಂದು ಕುಟುಂಬದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಈ ಘಟನೆಯು ೨೦೨೨ ರ ಘಟನೆ ಎಂದು ಸ್ಪಷ್ಟಪಡಿಸುತ್ತದೆ ಮತ್ತು ಮುಸ್ಲಿಂ ಕುಟುಂಬವು ದೇವಾಲಯದ ಆವರಣದಲ್ಲಿ ಕ್ಯಾಂಪ್ ಮಾಡಲಿಲ್ಲ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಅದು ಮೇ ೨೦೨೨ ರಲ್ಲಿ ನಡೆದ ಘಟನೆಯನ್ನು ಬಹಿರಂಗಪಡಿಸುತ್ತದೆ. ಶ್ರೀ ರಾಮ ಸೇನೆಯ ಕಾರ್ಯಕರ್ತರು ಅಲ್ಪಸಂಖ್ಯಾತ ಸಮುದಾಯದ ಕುಟುಂಬವನ್ನು ಹಿಂದೂ ದೇವಾಲಯದ ಬಳಿ ವಿಹಾರ ಮತ್ತು ಮಾಂಸಾಹಾರವನ್ನು ತಯಾರಿಸಿದರೆಂದು ಎಚ್ಚರ ನೀಡಿದ್ದರು. ಆದರೆ, ಆ ಘಟನೆ ಯಾವುದೇ ದೇವಸ್ಥಾನದ ಆವರಣದಲ್ಲಿ ಸಂಭವಿಸಿಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.