- Home
- /
- ಉನ್ನತ ಹಕ್ಕು ವಿಮರ್ಶೆ
- /
- ಬೆಂಗಳೂರಿನಲ್ಲಿ ಆಟೋ...
ಬೆಂಗಳೂರಿನಲ್ಲಿ ಆಟೋ ರಿಕ್ಷಾ ಮೇಲಿನ ಇಸ್ಲಾಮಿಕ್ ಧ್ವಜವನ್ನು ಪಾಕಿಸ್ತಾನದ ಧ್ವಜ ಎಂದು ತಪ್ಪಾಗಿ ಗ್ರಹಿಸಲಾಗಿದೆ
ಸಾರಾಂಶ:
ಬೆಂಗಳೂರಿನಲ್ಲಿ ಆಟೋ ರಿಕ್ಷಾವೊಂದು ಪಾಕಿಸ್ತಾನದ ರಾಷ್ಟ್ರಧ್ವಜದೊಂದಿಗೆ ಸಂಚರಿಸಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ ಬಳಕೆದಾರರು ವೀಡಿಯೋ ಹಂಚಿಕೊಂಡಿದ್ದಾರೆ. ಆದರೆ, ಆಟೋ-ರಿಕ್ಷಾದಲ್ಲಿನ ಧ್ವಜವು ಮುಸಲ್ಮಾನರ ಹಬ್ಬಗಳಲ್ಲಿ ಹೆಚ್ಚಾಗಿ ಬಳಸಲಾಗುವ ಇಸ್ಲಾಮಿಕ್ ಧ್ವಜವಾಗಿದೆ. ಆದ್ದರಿಂದ, ಈ ಹೇಳಿಕೆ ತಪ್ಪು.
ಹೇಳಿಕೆ:
ಬೆಂಗಳೂರಿನಲ್ಲಿ ಆಟೋ ರಿಕ್ಷಾವೊಂದು ಪಾಕಿಸ್ತಾನದ ರಾಷ್ಟ್ರಧ್ವಜದೊಂದಿಗೆ ಕಾಣಿಸಿಕೊಂಡಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿನ ಪಠ್ಯವು ಹೀಗಿದೆ - "ಬೆಂಗಳೂರು ಆಟೋ ಮೇಲೆ ಪಾಕಿಸ್ತಾನ ಧ್ವಜ. ವಾಹನ ಸಂಖ್ಯೆ. KA-03-AH-5443" (ಅನುವಾದಿಸಲಾಗಿದೆ). ಇನ್‌ಸ್ಟಾಗ್ರಾಮ್ ಬಳಕೆದಾರರು ಜೂನ್ ೨೬, ೨೦೨೪ ರಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ಸೆಂಟ್ರಲ್‌ನ ಸಂಸದ ಪಿಸಿ ಮೋಹನ್, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ತು ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಸೂಕ್ತ ಕ್ರಮಕ್ಕೆ ವಿನಂತಿಸಿದ್ದಾರೆ. ಯೂಟ್ಯೂಬ್ ನಲ್ಲೂ ಜುಲೈ ೨, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಜೂನ್ ೨೬, ೨೦೨೪ ರಂದು ಹೇಳಿಕೆಯನ್ನು ಹಂಚಿಕೊಳ್ಳುವ ಇನ್ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಕನ್ನಡ ಸುದ್ದಿವಾಹಿನಿ 'ಈ ಸಂಜೆ' ಜುಲೈ ೩, ೨೦೨೪ ರಂದು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಧ್ವಜದ ಬಗ್ಗೆ ಊಹಾಪೋಹವನ್ನು ವರದಿ ಮಾಡಿದೆ ಮತ್ತು ವರದಿಯನ್ನು ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ (ಇಲ್ಲಿ ಮತ್ತು ಇಲ್ಲಿ) ಹಂಚಿಕೊಂಡಿದೆ. ವೈರಲ್ ವೀಡಿಯೋವನ್ನು ಹಂಚಿಕೊಳ್ಳಲು #pakistan, #flag, #autorickshaw, #autodriver, #pakistanflag, #pakistani, #muslim, #siddaramaiah, #dkshivakumar, #congresskarnataka, #inckarnataka ಮತ್ತು #nammabengaluru ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವುದನ್ನು ನಾವು ಗುರುತಿಸಿದ್ದೇವೆ.
ಪುರಾವೆ:
ನಾವು ವೈರಲ್ ವೀಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ಅದರಲ್ಲಿರುವುದು ಇಸ್ಲಾಮಿಕ್ ಧ್ವಜವೆಂದು ಕಂಡುಕೊಂಡಿದ್ದೇವೆ. ಈ ಧ್ವಜವು ಮೊಹರಂ ಅಥವಾ ಈದ್ ಮಿಲಾದ್-ಉನ್-ನಬಿ ಮೆರವಣಿಗೆಗಳಲ್ಲಿ ಹೆಚ್ಚಾಗಿ ಗೋಚರಿಸುತ್ತದೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಲು ಲಭ್ಯವಿದೆ.
ಇಸ್ಲಾಮಿಕ್ ಧ್ವಜ (ಎಡ) ಮತ್ತು ಪಾಕಿಸ್ತಾನಿ ರಾಷ್ಟ್ರೀಯ ಧ್ವಜದ (ಬಲ) ಹೋಲಿಕೆ.
ಎರಡು ಧ್ವಜಗಳ ನಡುವಿನ ವ್ಯತ್ಯಾಸವು ಈ ಕೆಳಗಿನಂತಿರುತ್ತದೆ:
- ಪಾಕಿಸ್ತಾನಿ ಧ್ವಜವು ಎಡಭಾಗದಲ್ಲಿ ಲಂಬವಾದ ಬಿಳಿ ಪಟ್ಟಿಯನ್ನು ಹೊಂದಿದೆ, ಇಸ್ಲಾಮಿಕ್ ಧ್ವಜ ಇದನ್ನು ಹೊಂದಿಲ್ಲ.
- ಇಸ್ಲಾಮಿಕ್ ಧ್ವಜವು ಬಿಳಿ ಚುಕ್ಕೆಗಳನ್ನು ಹೊಂದಿದೆ ಮತ್ತು ಪಾಕಿಸ್ತಾನದ ಧ್ವಜದಲ್ಲಿ ಅದಿಲ್ಲ.
- ಇಸ್ಲಾಮಿಕ್ ಧ್ವಜದ ಪಂಚಮುಖದ ನಕ್ಷತ್ರವು ಪಾಕಿಸ್ತಾನಿ ಧ್ವಜಕ್ಕಿಂತ ದೊಡ್ಡದಾಗಿದೆ.
ಈ ವ್ಯತ್ಯಾಸಗಳು ಇಸ್ಲಾಮಿಕ್ ಧ್ವಜವನ್ನು ಪಾಕಿಸ್ತಾನದ ರಾಷ್ಟ್ರೀಯ ಧ್ವಜವೆಂದು ತಪ್ಪಾಗಿ ಗ್ರಹಿಸಲಾಗಿದೆ ಎಂದು ಸ್ಪಷ್ಟಪಡಿಸುತ್ತದೆ. ಮಹಾರಾಷ್ಟ್ರದ ಅಹಮದ್‌ನಗರದ ಶ್ರೀರಾಂಪುರದಲ್ಲಿ ಇದೇ ರೀತಿಯ ಘಟನೆಯನ್ನು ನಾವು ವಿಶ್ಲೇಷಿಸಿದ್ದೇವೆ, ಅಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಮಹಾ ವಿಕಾಸ್ ಅಗಾಢಿ ಅವರ ೨೦೨೪ ರ ಲೋಕಸಭಾ ಚುನಾವಣೆಯ ವಿಜಯೋತ್ಸವದ ಸಂದರ್ಭದಲ್ಲಿ ಇಸ್ಲಾಮಿಕ್ ಧ್ವಜವನ್ನು ಪಾಕಿಸ್ತಾನಿ ಧ್ವಜ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿತ್ತು.
ತೀರ್ಪು:
ವೈರಲ್ ಹೇಳಿಕೆಯ ವಿಶ್ಲೇಷಣೆಯು ಅದು ಇಸ್ಲಾಮಿಕ್ ಧ್ವಜವನ್ನು ಹೊತ್ತಿರುವ ಆಟೋ ರಿಕ್ಷಾವನ್ನು ತೋರಿಸುವ ಕರ್ನಾಟಕದಿಂದ ದಿನಾಂಕವಿಲ್ಲದ ವೀಡಿಯೋವೆಂದು ಬಹಿರಂಗಪಡಿಸುತ್ತದೆ. ಆದ್ದರಿಂದ, ಅದನ್ನು ಪಾಕಿಸ್ತಾನದ ಧ್ವಜ ಎನ್ನುವ ಆನ್‌ಲೈನ್ ಹೇಳಿಕೆಗಳು ತಪ್ಪು.