ಬೆಂಗಳೂರಿನ ಪ್ರವಾಹದ ಹಳೆಯ ವೀಡಿಯೋವನ್ನು ಇತ್ತೀಚಿನ ಘಟನೆಯದೆಂದು ಮರುಹಂಚಿಕೊಳ್ಳಲಾಗಿದೆ

Update: 2024-10-21 13:30 GMT

ಸಾರಾಂಶ:

ಸಾಮಾಜಿಕ ಮಾಧ್ಯಮ ಬಳಕೆದಾರರು ಜಲಾವೃತಗೊಂಡ ರಸ್ತೆ ಮತ್ತು ನೀರಿನಲ್ಲಿ ಸಿಲುಕಿರುವ ವಾಹನಗಳ ವೀಡಿಯೋವನ್ನು ಹಂಚಿಕೊಂಡು ಈ ಘಟನೆ ಬೆಂಗಳೂರಿನದ್ದು ಮತ್ತು ಇದು ಇತ್ತೀಚಿನದೆಂದು ಹೇಳಿಕೊಂಡಿದ್ದಾರೆ. ವೀಡಿಯೋದಲ್ಲಿ ತೋರಿಸಿರುವ ಘಟನೆ ಬೆಳ್ಳಂದೂರಿನಲ್ಲಿ ನಡೆದಿದ್ದರೂ, ಇದು ೨೦೨೨ ರದು. ಇದು ಹೇಳಿಕೆಯನ್ನು ತಪ್ಪಾಗಿಸುತ್ತದೆ.


ಹೇಳಿಕೆ:

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಇದರ ನಂತರ ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ವಾಹನಗಳು ಚಲಿಸಲು ಸಾಧ್ಯವಾಗದ ಪ್ರವಾಹದ ರಸ್ತೆಯನ್ನು ತೋರಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದರ ಶೀರ್ಷಿಕೆ ಹೀಗಿದೆ, "ಬೆಂಗಳೂರಿನ ಮೊಟ್ಟಮೊದಲ ಬೀಚ್ ಉದ್ಘಾಟನೆಯಾಗಿದೆ...ಬೆಂಗಳೂರು ನಿವಾಸಿಗಳು ಈ ರಮಣೀಯ ಬೀಚ್‌ಗೆ ಭೇಟಿ ನೀಡುವಂತೆ ವಿನಂತಿಸಲಾಗಿದೆ..." (ಅನುವಾದಿಸಲಾಗಿದೆ). ಯೂಟ್ಯೂಬ್ ಬಳಕೆದಾರರು ಇದೇ ರೀತಿಯ ಹೇಳಿಕೆಯೊಂದಿಗೆ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.

ಅಕ್ಟೋಬರ್ ೧೭, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಪುರಾವೆ:

ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್ ಹಂದಿರುವ ಸೆಪ್ಟೆಂಬರ್ ೫, ೨೦೨೨ ರಂದು ಪ್ರಕಟವಾದ ಇಂಡಿಯಾ.ಕಾಂ ನ ವರದಿಯನ್ನು ಕಂಡುಕೊಂಡಿದ್ದೇವೆ. ಈ ಘಟನೆಯು ಬೆಳ್ಳಂದೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯ ಮಾರತ್ತಹಳ್ಳಿಯ ಇಕೋಸ್ಪೇಸ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ೨೦೨೨ ರಲ್ಲಿ ನಗರದ ಮೇಲೆ ಪರಿಣಾಮ ಬೀರುವ ಭಾರೀ ಮಳೆಯಿಂದಾಗಿ ರಸ್ತೆಗಳು ಪ್ರವಾಹಕ್ಕೆ ಒಳಗಾದ ದೃಶ್ಯಗಳನ್ನು ಸಹ ವರದಿಯು ಉಲ್ಲೇಖಿಸುತ್ತದೆ. ಸೆಪ್ಟೆಂಬರ್ ೭, ೨೦೨೨ ರಂದು, ಟೈಮ್ಸ್ ನೌ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿರುವ ವೆಬ್ ಸ್ಟೋರಿಯನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ, "ಬೆಂಗಳೂರಿನ ಬಿಲಿಯನೇರ್‌ಗಳಿಗೂ ಸಹ ಮಳೆಯು ಪರಿಸ್ಥಿತಿಗಳು ಇನ್ನಷ್ಟು ಹದಗೆಡಿಸಿದೆ" (ಅನುವಾದಿಸಲಾಗಿದೆ).

ಸೆಪ್ಟೆಂಬರ್ ೫, ೨೦೨೨ ರಂದು ಪ್ರಕಟವಾದ ಇಂಡಿಯಾ.ಕಾಂ ವರದಿಯ ಸ್ಕ್ರೀನ್‌ಶಾಟ್.


ಪತ್ರಕರ್ತೆ ಅನುಷಾ ಪುಪ್ಪಳ ಅವರು ಸೆಪ್ಟೆಂಬರ್ ೫, ೨೦೨೨ ರಂದು ಎಕ್ಸ್ ನಲ್ಲಿ ಅದೇ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಅದರ ಶೀರ್ಷಿಕೆಯು "ನನ್ನ #Bengaluru ಫ್ರೆಂಡ್ ಕಳುಹಿಸಿದ ಈ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ, ಸ್ಥಳ: ಬೆಳ್ಳಂದೂರು #bengalururains #BengaluruRain."

ಸೆಪ್ಟೆಂಬರ್ ೫, ೨೦೨೨ ರಂದು ಅನುಷಾ ಪುಪ್ಪಳ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ತೀರ್ಪು:

ವೈರಲ್ ವೀಡಿಯೋದ ವಿಶ್ಲೇಷಣೆಯು ಇದು ಬೆಂಗಳೂರಿನ ಬೆಳ್ಳಂದೂರಿನಲ್ಲಿ ಸೆಪ್ಟೆಂಬರ್ ೫, ೨೦೨೨ ರ ವೀಡಿಯೋ ವನ್ನು ಒಳಗೊಂಡಿದೆ ಮತ್ತು ಇದು ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಸಂಬಂಧಿಸಿಲ್ಲ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ, ಈ ಹೇಳಿಕೆ ತಪ್ಪು.

Claim :  Old video of flood in Bengaluru reshared as a recent incident
Claimed By :  X user
Fact Check :  False
Tags:    

Similar News