ಅತ್ಯಾಚಾರಿಯ ಶಿರಚ್ಛೇದನಯೆಂದು ವೈರಲ್ ಆಗಿರುವ ಚಿತ್ರಗಳು ಸಂಬಂಧವಿಲ್ಲದ ೨೦೧೮ ರ ಕೊಲೆ ಪ್ರಕರಣದಿಂದ ಹುಟ್ಟಿಕೊಂಡಿವೆ
ಪ್ರಚೋದಕ ಎಚ್ಚರಿಕೆ: ಈ ಫ್ಯಾಕ್ಟ್-ಚೆಕ್ ಕೆಲವು ಅಸಮಾಧಾನಗೊಳಿಸುವ ದೃಶ್ಯಗಳು ಮತ್ತು ಅಂತಹ ದೃಶ್ಯಗಳತ್ತ ಕರೆದೊಯ್ಯುವ ಲಿಂಕ್ ಗಳನ್ನು ಒಳಗೊಂಡಿದ್ದು, ಓದುಗರ ವಿವೇಚನೆಯನ್ನು ಕೋರುತ್ತೇವೆ.
ಸಾರಾಂಶ:
ವ್ಯಕ್ತಿಯೊಬ್ಬ ತನ್ನ ಸಹೋದರಿಯ ಅತ್ಯಾಚಾರಿಯ ಶಿರಚ್ಛೇದ ಮಾಡಿ ಕತ್ತರಿಸಿದ ತಲೆಯನ್ನು ಪೊಲೀಸ್ ಠಾಣೆಗೆ ತಂದಿದ್ದಾನೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಇತ್ತೀಚೆಗೆ ಪೋಷ್ಟ್ ಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಈ ಘಟನೆಯು ೨೦೧೮ ರಲ್ಲಿ ಮಂಡ್ಯದಲ್ಲಿ ಸಂಭವಿಸಿದೆ ಮತ್ತು ಯಾವುದೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಲ್ಲ. ಆದ್ದರಿಂದ ವೈರಲ್ ಹೇಳಿಕೆ ತಪ್ಪು.
ಹೇಳಿಕೆ:
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಪೋಷ್ಟ್ ಗಳು ಸೆನ್ಸಾರ್ ಮಾಡಲಾದ ಚಿತ್ರಗಳನ್ನು ಹಂಚಿಕೊಂಡಿದೆ, ಅದು ರಕ್ತದ ಕಲೆಯುಳ್ಳ ವ್ಯಕ್ತಿಯೊಬ್ಬ ಕತ್ತರಿಸಿದ ತಲೆಯನ್ನು ಹೊತ್ತುಕೊಂಡಂತೆ ತೋರಿಸುತ್ತದೆ. ತನ್ನ ಸಹೋದರಿಯ ಅತ್ಯಾಚಾರಿಯ ತಲೆಯನ್ನು ಕತ್ತರಿಸಿದ್ದಾನೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆಗಸ್ಟ್ ೧೩, ೨೦೨೪ ರಂದು, ಒಬ್ಬ ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಚಿತ್ರದಲ್ಲಿನ ವ್ಯಕ್ತಿಯು ವಿಷಯವನ್ನು ತನ್ನ ಕೈಗೆ ತೆಗೆದುಕೊಂಡು ತನ್ನ ಸಹೋದರಿಗಾಗಿ ನ್ಯಾಯವನ್ನು ಪಡೆದಿದಕ್ಕಾಗಿ ಆತನಿಗೆ ಬೆಂಬಲವನ್ನು ಸೂಚಿಸುವ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಷ್ಟ್ ಗಳು ೨ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿವೆ.
ಆಗಸ್ಟ್ ೧೩, ೨೦೨೪ ರಂದು ವೈರಲ್ ಹೇಳಿಕೆಯನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ಚಿತ್ರವನ್ನು ಬಳಸಿಕೊಂಡು ನಾವು ಕೀವರ್ಡ್ ಸರ್ಚ್ ಮತ್ತು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ, ಅದರಿಂದಾಗಿ ಕೊಂಡುಕೊಂಡ ಚಿತ್ರಗಳಲ್ಲಿನ ಘಟನೆಯು ಸೆಪ್ಟೆಂಬರ್ ೨೯, ೨೦೧೮ ರಂದು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಸಂಭವಿಸಿದೆ, ಚೆನ್ನೈನಲ್ಲಿ ಹೇಳಿಕೊಂಡಂತೆ ಅಲ್ಲ. ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಅಕ್ಕು ಯಾದವ್ ಅಲ್ಲ ಮತ್ತು ಘಟನೆಯು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಲ್ಲ. ನೈಜ ಘಟನೆಯ ಕುರಿತು ವಿವರಗಳನ್ನು ಒದಗಿಸಿದ ದಿ ನ್ಯೂಸ್ ಮಿನಿಟ್ ಸೇರಿದಂತೆ ಪ್ರತಿಷ್ಠಿತ ಮೂಲಗಳಿಂದ ನಾವು ಸುದ್ದಿ ವರದಿಗಳನ್ನು ಪತ್ತೆ ಮಾಡಿದ್ದೇವೆ. ಈ ವರದಿಗಳ ಪ್ರಕಾರ, ಚಿತ್ರಗಳಲ್ಲಿ ಕಂಡುಬರುವ ವ್ಯಕ್ತಿ ವಾದದ ನಂತರ ತನ್ನ ಸ್ನೇಹಿತನ ಶಿರಚ್ಛೇದ ಮಾಡಿದ್ದಾನೆ, ಅದು ಅತ್ಯಾಚಾರದ ಪ್ರತೀಕಾರದ ಕ್ರಿಯೆಯಾಗಿಲ್ಲ.
ಸೆಪ್ಟೆಂಬರ್ ೨೯, ೨೦೧೮ ರ ದಿ ನ್ಯೂಸ್ ಮಿನಿಟ್ ವರದಿಯ ಸ್ಕ್ರೀನ್‌ಶಾಟ್.
ದಿ ಹಿಂದೂ ವರದಿಯ ಪ್ರಕಾರ ಪೊಲೀಸ್ ಹೇಳಿಕೆಗಳು ಆರೋಪಿಯನ್ನು ಪಶುಪತಿ ಎಂದು ಗುರುತಿಸಿವೆ ಮತ್ತು ಗಿರೀಶ್ ಹೆಸರಿನ ಸ್ನೇಹಿತ ಪಶುಪತಿಯ ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ಅವನು ತನ್ನ ಸ್ನೇಹಿತ ಗಿರೀಶ್‌ನ ತಲೆಯನ್ನು ಕತ್ತರಿಸಿದ್ದಾನೆ ಎಂದು ಸೂಚಿಸಿದೆ. ಸಣ್ಣಪುಟ್ಟ ಜಗಳಕ್ಕೆ ಸಂತ್ರಸ್ತನನ್ನು ಕೊಂದಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ, ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಸುಪರಿಂಟೆಂಡೆಂಟ್ ಆಫ್ ಪೊಲೀಸ್ ತಿಳಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಸುದ್ದಿ ವರದಿಯಲ್ಲಿರುವ ಮೂಲ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ ಮತ್ತು ಆರೋಪಿಗಳು ಪೊಲೀಸ್ ಸಿಬ್ಬಂದಿಯನ್ನು ಎದುರಿಸುವ ಮೊದಲು ಕತ್ತರಿಸಿದ ತಲೆಯೊಂದಿಗೆ ನಡೆಯುವುದನ್ನು ತೋರಿಸುತ್ತದೆ.
ಮೂಲ ಘಟನೆಯು ಆರೋಪಿಯು ಬಲಿಪಶುವಿನ ಕತ್ತರಿಸಿದ ತಲೆಯನ್ನು ಪೊಲೀಸ್ ಠಾಣೆಗೆ ತರುವುದನ್ನು ಒಳಗೊಂಡಿತ್ತು, ಇದು ತಪ್ಪಾದ ವ್ಯಾಖ್ಯಾನ ಮತ್ತು ನಂತರದ ವೈರಲ್ ಹರಡುವಿಕೆಗೆ ಕಾರಣವಾಯಿತು. ೨೦೧೮ ರಿಂದ ಈ ಚಿತ್ರಗಳನ್ನು ಹಲವಾರು ಬಾರಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
ತೀರ್ಪು:
ವೈರಲ್ ಹೇಳಿಕೆಯ ವಿಶ್ಲೇಷಣೆಯು ಘಟನೆಯು ಚೆನ್ನೈನಲ್ಲಿ ನಡೆದ ಯಾವುದೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ಬಹಿರಂಗಪಡಿಸುತ್ತದೆ. ಶಿರಚ್ಛೇದನ ೨೦೧೮ ರಲ್ಲಿ ಮಂಡ್ಯದಲ್ಲಿ ಸಂಭವಿಸಿದೆ ಮತ್ತು ಇದು ವೈಯಕ್ತಿಕ ವಿವಾದದ ಕಾರಣವಾಗಿತ್ತು. ಆದ್ದರಿಂದ ಈ ಚಿತ್ರಗಳೊಂದಿಗೆ ಹಂಚಿಕೊಂಡಿರುವ ಹೇಳಿಕೆ ತಪ್ಪು.