ಲಂಡನ್‌ನಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯನವರು ಅನುದಾನವನ್ನು ಕಡಿತಗೊಳಿಸಿಲ್ಲ
ಸಾರಾಂಶ:
ಲಂಡನ್‌ನ ಆಲ್ಬರ್ಟ್ ಏಂಬ್ಯಾಂಕ್‌ಮೆಂಟ್ ಗಾರ್ಡನ್ಸ್‌ನಲ್ಲಿರುವ ಬಸವಣ್ಣನವರ ಪ್ರತಿಮೆಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ಕಡಿತಗೊಳಿಸಿದ್ದಾರೆ ಎಂದು ಹೇಳುವ ವೀಡಿಯೋವನ್ನು ಆನ್ಲೈನ್ ನಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಸವಣ್ಣನವರ ಪ್ರತಿಮೆಗೆ ಯಾವುದೇ ಅನುದಾನವನ್ನು ಮಂಜೂರು ಮಾಡಿಲ್ಲ, ೨೦೧೩ ರಲ್ಲಿ ಕರ್ನಾಟಕ ಸರ್ಕಾರವು ನೀಡಿದ್ದ ಅನುದಾನವನ್ನು ಅವರು ನಿಲ್ಲಿಸಲಿಲ್ಲ, ಇದು ಈ ಹೇಳಿಕೆಯನ್ನು ತಪ್ಪಾಗಿಸುತ್ತದೆ.
ಹೇಳಿಕೆ:
ಮೇ ೧೦, ೨೦೨೪ ರಂದು ಆಚರಿಸಲಾದ ಬಸವ ಜಯಂತಿಯ ಕುರಿತು ಇತ್ತೀಚೆಗೆ ಹಂಚಿಕೊಂಡ ೪ ನಿಮಿಷ-೧ ಸೆಕೆಂಡ್ ನ ವೀಡಿಯೋದಲ್ಲಿ, ಲಂಡನ್‌ನಲ್ಲಿ ಬಸವಣ್ಣನ ಪ್ರತಿಮೆಯ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅನುದಾನ ಕಡಿತಗೊಳಿಸಿದ್ದಾರೆ. ಮತ್ತು ೨೦೧೮ ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಯುನೈಟೆಡ್ ಕಿಂಗ್ಡಮ್ ಪ್ರವಾಸದ ವೇಳೆ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವಲ್ಲಿ ಪಾಲ್ಗೊಂಡಿದ್ದರಿಂದ ಸಿದ್ದರಾಮಯ್ಯನವರು ಹಾಜರಾಗಲಿಲ್ಲ ಎಂದು ಹೇಳಲಾಗಿದೆ. ಇದರ ಮೇಲೂ ಸಿದ್ದರಾಮಯ್ಯನವರು ಲಂಡನ್‌ಗೆ ಹೋದಾಗ ಬಸವಣ್ಣನವರ ಪ್ರತಿಮೆ ಬಳಿ ಫೋಟೋ ತೆಗೆದುಕೊಂಡು ಅದನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪುರಾವೆ:
ಲಂಡನ್ ಮೂಲದ ಸ್ಮಾರಕಗಳ ಬಗ್ಗೆ ಮಾಹಿತಿ ನೀಡುವ ಜಾಲತಾಣ ಲಂಡನ್ ರಿಮೆಂಬರ್ಸ್ ಪ್ರಕಾರ, ಬಸವಣ್ಣನವರ ಪ್ರತಿಮೆಯನ್ನು "ದ ಬಸವೇಶ್ವರ ಫೌಂಡೇಶನ್, ಕರ್ನಾಟಕ ಸರ್ಕಾರ, ಭಾರತ, ಮತ್ತು ಕೌನ್ಸಿಲರ್ ಡಾ. ನೀರಜ್ ಪಾಟೀಲ್, ಲಂಡನ್ ಬರೋ ಆಫ್ ಲ್ಯಾಂಬೆತ್ ಮೇಯರ್, ೨೦೧೦-೨೦೧೧ ರ ಬೆಂಬಲದೊಂದಿಗೆ ಸ್ಥಾಪಿಸಲಾಗಿದೆ" ಮತ್ತು ನರೇಂದ್ರ ಮೋದಿಯವರು ನವೆಂಬರ್ ೨೦೧೫ ರಲ್ಲಿ ಅದನ್ನು ಅನಾವರಣಗೊಳಿಸಿದರು.
ನಾವು ವೈರಲ್ ವೀಡಿಯೋದ ಮೂಲವನ್ನು ಜನವರಿ ೧೪, ೨೦೨೩ ರಂದು ಕಾಂಗ್ರೆಸ್ ಕಳ್ಳೇಕಾಯಿ ಹೆಸರಿನ ಖಾತೆಯಿಂದ ಯೂಟ್ಯೂಬ್ ಗೆ ಅಪ್‌ಲೋಡ್ ಮಾಡಲಾದ ವೀಡಿಯೋ ಎಂದು ಪತ್ತೆಹಚ್ಚಿದ್ದೇವೆ. ಈ ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ್ಯಂತ ತಮ್ಮ ಎಲ್ಲಾ ಖಾತೆಗಳಲ್ಲಿ ಕಾಂಗ್ರೆಸ್ ವಿರೋಧಿ ವಿಷಯವನ್ನು ಪೋಷ್ಟ್ ಗಳನ್ನು ಹಂಚಿಕೊಂಡಿದೆ ಎಂದು ಗಮನಿಸಿದ್ದೇವೆ.
ಈ ಹೇಳಿಕೆಯನ್ನು ಹಂಚಿಕೊಳ್ಳುವ ಜನವರಿ ೧೪, ೨೦೨೩ ರಂದು ಅಪ್ಲೋಡ್ ಮಾಡಲಾದ ಮೂಲ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ವೈರಲ್ ವೀಡಿಯೋದ ವಿಷಯವು ಸೆಪ್ಟೆಂಬರ್ ೨೦೧೮ ರ ಘಟನೆಗೆ ಸಂಬಂಧಿಸಿದೆ. ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರ ಹೇಳಿಕೆಯ ಆಧಾರದ ಮೇಲೆ ಆರೋಪಗಳನ್ನು ಮಾಡಲಾಗಿದೆ, ಅವರು ಸೆಪ್ಟೆಂಬರ್ ೧೭, ೨೦೧೮ ರಂದು ನ್ಯೂಸ್9 ಜೊತೆ ಮಾತನಾಡುವಾಗ , ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೀಡಿದ್ದ ಅನುದಾನಕ್ಕೆ ಸಿಎಂ ಸಿದ್ದರಾಮಯ್ಯ ಕಡಿವಾಣ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ೨೦೧೮ ರಲ್ಲಿ ಪ್ರತಿಮೆಗೆ ಗೌರವ ಸಲ್ಲಿಸುವುದಾಗಿ ಘೋಷಿಸಿದಾಗ, ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ನಿರಾಕರಿಸಿದರು ಎಂದು ಆರೋಪಿಸಿದರು.
ಸೆಪ್ಟೆಂಬರ್ ೧೭, ೨೦೧೮ ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಡಾ. ನೀರಜ್ ಪಾಟೀಲ್ ಅವರ ಆರೋಪವನ್ನು ಒಳಗೊಂಡಿರುವ ನ್ಯೂಸ್9 ವರದಿಯ ಸ್ಕ್ರೀನ್‌ಶಾಟ್.
ಸೆಪ್ಟೆಂಬರ್ ೧೮, ೨೦೧೮ ರಂದು, ನ್ಯೂಸ್9 ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಾ ಸಿದ್ದರಾಮಯ್ಯನವರು ಬಸವಣ್ಣನವರ ಪ್ರತಿಮೆಯ ಉದ್ಘಾಟನೆಗೆ ಯಾವುದೇ ಅನುದಾನವನ್ನು ನೀಡಿಲ್ಲ ಅಥವಾ ಕಡಿತಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ತಮ್ಮ ಗೈರುಹಾಜರಿಯು ಬಿಜೆಪಿ ಅಥವಾ ಸಮಾರಂಭದಲ್ಲಿ ಪ್ರಧಾನಿಯವರ ಉಪಸ್ಥಿತಿಯಿಂದಾಗಿ ಎಂಬ ಹೇಳಿಕೆಯನ್ನು ಅವರು ನಿರಾಕರಿಸಿದರು. ಬದಲಾಗಿ, ಇತರ ನಿಗದಿತ ಕಾರ್ಯಕ್ರಮಗಳು ಪ್ರತಿಮೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ತಡೆದವೆಂದು ಅವರು ವಿವರಿಸಿದರು.
ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಡಾ. ಪಾಟೀಲ್ ಅವರ ಆರೋಪಗಳಿಗೆ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಯನ್ನು ಒಳಗೊಂಡಿರುವ ನ್ಯೂಸ್9 ನ ಸೆಪ್ಟೆಂಬರ್ ೧೮, ೨೦೧೮ ರ ವರದಿಯ ಸ್ಕ್ರೀನ್‌ಶಾಟ್.
ಈ ಘಟನೆಯ ನಂತರ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಮತ್ತು ಬಿಜೆಪಿ ಸರ್ಕಾರ ಎರಡೂ ಅಧಿಕಾರ ಹಿಡಿದಿದ್ದವು. ಆದರೆ, ಅವರ ಅಧಿಕಾರಾವಧಿಯಲ್ಲಿ ಡಾ.ಪಾಟೀಲ್ ರ ಹೇಳಿಕೆಯನ್ನು ದೃಢಪಡಿಸುವ ಯಾವುದೇ ಅಧಿಕೃತ ಮಾಹಿತಿ ಅಥವಾ ಪುರಾವೆಗಳು ಹೊರಬಂದಿಲ್ಲ. ಪರಿಣಾಮವಾಗಿ, ಅವರ ಯಾವುದೇ ಹೇಳಿಕೆಗಳಿಗೆ ಯಾವುದೇ ಪೋಷಕ ಪುರಾವೆಗಳಿಲ್ಲ.
ತೀರ್ಪು:
ಈ ಹೇಳಿಕೆಯ ವಿಶ್ಲೇಷಣೆಯಿಂದ ೨೦೨೪ರ ಬಸವ ಜಯಂತಿ ವೇಳೆ ಸಿಎಂ ಸಿದ್ದರಾಮಯ್ಯನವರ ವಿರುದ್ಧದ ಹಳೆಯ ಆರೋಪವನ್ನು ಮರು ಹಂಚಿಕೆ ಮಾಡಲಾಗಿದೆ ಎಂಬುದು ತಿಳಿದುಬರುತ್ತದೆ. ಸಿದ್ದರಾಮಯ್ಯನವರು ೨೦೧೮ ರಲ್ಲಿ ಈ ಆರೋಪವನ್ನು ತಳ್ಳಿಹಾಕಿದರು ಮತ್ತು ಅವರು ಲಂಡನ್‌ನಲ್ಲಿ ಬಸವಣ್ಣನವರ ಪ್ರತಿಮೆಯ ನಿರ್ಮಾಣಕ್ಕೆ ಅನುದಾನವನ್ನು ಮಂಜೂರು ಮಾಡಿದ್ದಾರೆ ಅಥವಾ ಕಡಿತಗೊಳಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪು.