ಆರೋಗ್ಯ ಇಲಾಖೆ ಅಧಿಕಾರಿಗಳು ಕೇರಳದಲ್ಲಿ ಫಾರ್ಮಾಲಿನ್ ಮಿಶ್ರಿತ ಮೀನುಗಳನ್ನು ವಶಪಡಿಸಿಕೊಂಡ ವೀಡಿಯೋವನ್ನು ಕರ್ನಾಟಕದ ಘಟನೆಯೆಂದು ಹಂಚಿಕೊಳ್ಳಲಾಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಆರೋಗ್ಯ ಇಲಾಖೆ ಅಧಿಕಾರಿಗಳು ಮೂತ್ರಪಿಂಡಗಳಿಗೆ ಹಾನಿ ಮಾಡುವ ಮಾತ್ರೆಗಳನ್ನು ಹೊಂದಿರುವ ಮೀನುಗಳನ್ನು ವಶಪಡಿಸಿಕೊಳ್ಳುವುದನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಕೇರಳದಲ್ಲಿ ಫಾರ್ಮಾಲಿನ್ ಮಿಶ್ರಿತ ಮೀನುಗಳನ್ನು ವಶಪಡಿಸಿಕೊಳ್ಳುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಹಾಗಾಗಿ ಈ ವೀಡಿಯೋ ಕರ್ನಾಟಕದ್ದು ಎಂಬ ಆರೋಪ ತಪ್ಪು.
ಹೇಳಿಕೆ:
ಕರ್ನಾಟಕದ ಬೆಳಗಾವಿಯ ನಿಪ್ಪಾಣಿಯಲ್ಲಿ ಫಾರ್ಮಾಲಿನ್ ಲೇಪಿತ ಮೀನುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದನ್ನು ತೋರಿಸುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಇದನ್ನು ಮುಸ್ಲಿಮರು ಮಾಡಿದ್ದಾರೆ ಎಂದು ವೀಡಿಯೊವನ್ನು ಆಗಸ್ಟ್ ೧೯, ೨೦೨೪ ರಂದು ಹಂಚಿಕೊಂಡಿದ್ದಾರೆ. ಮತ್ತೊಬ್ಬ ಎಕ್ಸ್ ಬಳಕೆದಾರರು ಇದೇ ರೀತಿಯ ಕೋಮು ಶೀರ್ಷಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಪೋಷ್ಟ್ ೨,೬೪,೫೦೦ ವೀಕ್ಷಣೆಗಳು, ೪,೩೦೦ ಇಷ್ಟಗಳು ಮತ್ತು ೩,೨೦೦ ಮರುಪೋಷ್ಟ್ ಗಳನ್ನು ಗಳಿಸಿದೆ. ಫೇಸ್‌ಬುಕ್ ಬಳಕೆದಾರರು ಇತ್ತೀಚೆಗೆ ಇದೇ ರೀತಿಯ ಶೀರ್ಷಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಫಾರ್ಮಾಲಿನ್ ಮಿಶ್ರಿತ ಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೊಂಡು ಎಕ್ಸ್‌ನಲ್ಲಿ ಹಂಚಿಕೊಂಡಿರುವ ವೀಡಿಯೋದ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ವೀಡಿಯೋವನ್ನು ಗಮನಿಸಿದ್ದೇವೆ ಮತ್ತು ಬ್ರೇವ್ ಇಂಡಿಯಾ ನ್ಯೂಸ್ ಎಂಬ ಮಲಯಾಳಂ ಆನ್‌ಲೈನ್ ಸುದ್ದಿ ಪೋರ್ಟಲ್ ನ ಲೋಗೋ ಮತ್ತು ಕೇರಳ ವೈದ್ಯಕೀಯ ಸೇವೆಗಳ (ಕೆಎಂಎಸ್) ಭುಜದ ಬ್ಯಾಡ್ಜ್‌ನ ಕೆಲವು ದೃಶ್ಯ ಸುಳಿವುಗಳನ್ನು ನಾವು ಕಂಡುಕೊಂಡಿದ್ದೇವೆ.
ವೈರಲ್ ವೀಡಿಯೊದಲ್ಲಿ ನೋಡಿದಂತೆ ಬ್ರೇವ್ ಇಂಡಿಯಾ ನ್ಯೂಸ್‌ನ ಲೋಗೋ (ಎಡ) ಮತ್ತು ಕೆಎಂಎಸ್ ಚಿಹ್ನೆ (ಬಲ).
ಕೇರಳ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಾಗಿ ಕೇರಳ ವೈದ್ಯಕೀಯ ಸೇವೆಗಳ (ಕೆಎಂಎಸ್) ಭುಜದ ಬ್ಯಾಡ್ಜ್ ಅನ್ನು ಬಳಸುತ್ತಾರೆ. ವೈರಲ್ ವೀಡಿಯೋದಲ್ಲಿರುವ ಆರೋಗ್ಯ ಇಲಾಖೆಯ ಅಧಿಕಾರಿಯು ಮಲಯಾಳಂನಲ್ಲಿ ಮಾರಾಟಗಾರರೊಂದಿಗೆ ಮಾತನಾಡುತ್ತಾ, "ಈ ಮೀನುಗಳು ಮಾನವ ಬಳಕೆಗೆ ಅನರ್ಹವಾಗಿವೆ ಮತ್ತು ನೀವು ಅವುಗಳನ್ನು ಮಾರಾಟ ಮಾಡಲಾಗುವುದಿಲ್ಲ" (ಅನುವಾದಿಸಲಾಗಿದೆ) ಎಂದು ಹೇಳುತ್ತಾರೆ. ಇದನ್ನು ಸುಳಿವಾಗಿ ತೆಗೆದುಕೊಂಡು, ನಾವು "ಫಾರ್ಮಾಲಿನ್," "ಮೀನು," ಮತ್ತು "ಕೇರಳ" ದಂತಹ ಮಲಯಾಳಂ ಪದಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಇದು ನಮ್ಮನ್ನು ಜುಲೈ ೨೫, ೨೦೨೪ ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲ್ಲದ ಬ್ರೇವ್ ಇಂಡಿಯಾ ನ್ಯೂಸ್ ನ ರೀಲ್‌ಗೆ ಕರೆದೊಯ್ಯುತ್ತೇವೆ.
ಜುಲೈ ೨೫, ೨೦೨೪ ರ ಬ್ರೇವ್ ಇಂಡಿಯಾ ನ್ಯೂಸ್‌ನ ಫೇಸ್‌ಬುಕ್ ರೀಲ್‌ನ ಸ್ಕ್ರೀನ್‌ಶಾಟ್.
"ನೀವು ನಮಗೆ ವಿಷಪೂರಿತ ಮೀನುಗಳನ್ನು ನೀಡಲು ಸಾಧ್ಯವಿಲ್ಲ.. ನೀವು ನಮಗೆ ಕಲಿಸುವುದಿಲ್ಲ.. ಅಂಗಡಿಯನ್ನು ಮುಚ್ಚಿ" (ಅನುವಾದಿಸಲಾಗಿದೆ) ಎಂದು ಮಲಯಾಳಂ ಶೀರ್ಷಿಕೆಯು ವೀಡಿಯೊದಲ್ಲಿದೆ. ಬ್ರೇವ್ ನ್ಯೂಸ್ ಇಂಡಿಯಾ ಇದೇ ವೀಡಿಯೋವನ್ನು ಜುಲೈ ೨೫ ರಂದು ಯೂಟ್ಯೂಬ್‌ನಲ್ಲಿ ಇದೇ ರೀತಿಯ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ತಾಜಾ ಅಥವಾ ತಣ್ಣಗಾದ ಮೀನಿನ ಶೇಖರಣಾ ಅವಧಿಯನ್ನು ಹೆಚ್ಚಿಸಲು ಮತ್ತು ಸಂವೇದನಾ ಗುಣಲಕ್ಷಣಗಳನ್ನು ಕೃತಕವಾಗಿ ಸುಧಾರಿಸಲು ವ್ಯಾಪಾರಿಗಳು ಮತ್ತು ಸಪ್ಲೈಯರ್ ಗಳು ಫಾರ್ಮಾಲಿನ್ (ನೀರಿನಲ್ಲಿ ಫಾರ್ಮಾಲ್ಡಿಹೈಡ್) ಅನ್ನು ಮೀನುಗಳಲ್ಲಿ ಸಾಮಾನ್ಯ ಕಲಬೆರಕೆಯಾಗಿ ಬಳಸುತ್ತಾರೆ. ಫಾರ್ಮಾಲಿನ್ ಮಿಶ್ರಿತ ಮೀನಿನ ಸೇವನೆಯು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಜುಲೈ ೭, ೨೦೨೪ ರಂದು ಕೇರಳದ ಅಲ್ಲಪ್ಪುಳದಿಂದ ಫಾರ್ಮಾಲಿನ್ ಮಿಶ್ರಿತ ಮೀನುಗಳನ್ನು ವಶಪಡಿಸಿಕೊಳ್ಳುವ ಇದೇ ರೀತಿಯ ಘಟನೆಯನ್ನು ಏಷ್ಯಾನೆಟ್ ನ್ಯೂಸ್ ವರದಿ ಮಾಡಿದೆ. ಈ ಘಟನೆಯು ಕೇರಳದಲ್ಲಿ ಸಂಭವಿಸಿದೆ ಎಂದು ಸ್ಪಷ್ಟಪಡಿಸುತ್ತದೆ.
ತೀರ್ಪು:
ಕೇರಳದಲ್ಲಿ ಫಾರ್ಮಾಲಿನ್ ಮಿಶ್ರಿತ ಮೀನುಗಳನ್ನು ಆರೋಗ್ಯ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿರುವುದನ್ನು ವೀಡಿಯೋದ ವಿಶ್ಲೇಷಣೆಯು ಬಹಿರಂಗಪಡಿಸುತ್ತದೆ. ಹಾಗಾಗಿ ಘಟನೆ ಕರ್ನಾಟಕದೆಂದು ಎಂಬ ಹೇಳಿಕೆ ತಪ್ಪು.